ಶಾಂತಿಯುತ ಮತದಾನಕ್ಕೆ ಸಹಕಾರ ನೀಡುವಂತೆ ಮನವಿ

ಚಳ್ಳಕೆರೆ

       ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆ ಮತದಾನ ಏ.18ರಂದು ನಡೆಯಲಿದ್ದು, ಅಂದು ಎಲ್ಲಾ ಮತದಾರರು ತಮ್ಮ ಮತಗಳನ್ನು ತಪ್ಪದೆ ಚಲಾಯಿಸಬೇಕು, ಸಂವಿಧಾನ ಬದ್ದವಾಗಿ ಬಂದ ಈ ಅಧಿಕಾರವನ್ನು ಮತದಾನ ಮಾಡುವ ಮೂಲಕ ಯಶಸ್ಸಿ ಮತದಾನಕ್ಕೆ ಸಹಕರಿಸಬೇಕೆಂದು ತಾಲ್ಲೂಕು ಸ್ಪೀಫ್ ಸಮಿತಿ ಅಧ್ಯಕ್ಷ ಎಚ್.ಎಸ್.ಚಂದ್ರಶೇಖರ್ ತಿಳಿಸಿದರು.

       ಅವರು, ಗುರುವಾರ ನಗರದ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ಮತದಾನ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಚಳ್ಳಕೆರೆ ನಗರದ ಕಾಟಪ್ಪನಹಟ್ಟಿ, ಅಂಬೇಡ್ಕರ್ ನಗರ, ಗಾಂಧಿನಗರ ಸೂಕ್ಷ್ಮ ಮತಗಟ್ಟೆ ಕೇಂದ್ರಗಳಲ್ಲಿ ಜಾಗೃತಿ ಸಭೆಯನ್ನು ನಡೆಸಿ ಮಾತನಾಡಿದರು. ಈಗಾಗಲೇ ಈ ಮತಗಟ್ಟೆ ಕೇಂದ್ರಗಳ ಎಲ್ಲಾ ಮತದಾರರಿಗೂ ಮತದಾನದ ಬಗ್ಗೆ ಜಾಗೃತಿಯನ್ನು ಮೂಡಿಸಲಾಗಿದ್ದು, ಎಲ್ಲರೂ ತಪ್ಪದೆ ಏ.18ರಂದು ಮತ ಚಲಾಯಿಸುವಂತೆ ಮನವಿ ಮಾಡಿದರು.

        ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ ಮಾತನಾಡಿ, ಈ ಹಿಂದೆ ಮತದಾನ ಸಂದರ್ಭದಲ್ಲಿ ನಡೆದ ಸಣ್ಣಪುಟ್ಟ ಘಟನೆಗಳನ್ನು ಆಧರಿಸಿ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಕೇಂದ್ರಗಳನ್ನು ಗುರುತಿಸಲಾಗಿದೆ. ಪೊಲೀಸ್ ಇಲಾಖೆ ಸದಾಕಾಲ ಶಾಂತಿಯುತ ಚುನಾವಣೆಯನ್ನು ಬಯಸುತ್ತದೆ. ಅನಗತ್ಯವಾಗಿ ಕಾನೂನು ಬಾಹಿರವಾಗಿ ನಡೆದುಕೊಳ್ಳುವ ವ್ಯಕ್ತಿಗಳ ವಿರುದ್ದ ಕ್ರಮ ಕೈಗೊಳ್ಳಲು ಪೊಲೀಸ್ ಹಿಂದುಮುಂದು ನೋಡುವುದಿಲ್ಲ. ಅದ್ದರಿಂದ ಏ.18ರಂದು ತಮ್ಮ ಮತಗಟ್ಟೆ ಕೇಂದ್ರಗಳಿಗೆ ತೆರಳಿ ನಿರ್ಭಿತಿಯಿಂದ ತಾವು ಬಯಸುವ ಅಭ್ಯರ್ಥಿಗೆ ಮತ ಚಲಾಯಿಸುವಂತೆ ತಿಳಿಸಿದರು.

       ತಾಲ್ಲೂಕು ಸ್ಪೀಫ್ ಸಮಿತಿ ನಿರ್ದೇಶಕ, ಪೌರಾಯುಕ್ತ ಪರಮೇಶ್ವರಪ್ಪ, ಪ್ರತಿಯೊಬ್ಬ ಮತದಾರರು ಮತದಾನದಲ್ಲಿ ಪಾಲ್ಗೊಳ್ಳುತ್ತೇನೆಂಬ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಈ ಸಂದರ್ಭದಲ್ಲಿ ಜಾಗೃತಿ ಕಾರ್ಯಕ್ರಮದಲ್ಲಿ ಉಸ್ಥಿತರಿದ್ದ ಎಲ್ಲಾ ಸಾರ್ವಜನಿಕರು ಮತದಾನ ಮಾಡುವ ಪ್ರತಿಜ್ಞೆಯನ್ನು ಕೈಗೊಂಡರು.

      ಅಧ್ಯಕ್ಷತೆ ವಹಿಸಿದ್ದ ಸಹಾಯಕ ಚುನಾವಣಾಧಿಕಾರಿ ರಾಜಶೇಖರ್ ಮಾತನಾಡಿ, ಏ.18ರ ಮತದಾನದಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಮತದಾರರನು ಚುನಾವಣಾ ಆಯೋಗದ ಗುರುತಿನ ಚೀಟಿಯನ್ನು ಹೊಂದಿರಬೇಕು. ಆಧಾರ, ಪಡಿತರ,ಬ್ಯಾಂಕ್ ಖಾತೆ ಪಾಸ್‍ಪುಸ್ತಕ, ಡ್ರೈವಿಂಗ್ ಲೈಸನ್ಸ್‍ನ ಮೂಲಪ್ರತಿಯನ್ನು ಚುನಾವಣಾಧಿಕಾರಿಗಳಿಗೆ ನೀಡಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದ್ದಲ್ಲಿ ಮಾತ್ರ ಮತ ಚಲಾಯಿಸಬೇಕು ಮತಗಟ್ಟೆ ಅಧಿಕಾರಿಗಳು ನೀಡುವ ಸೂಚನೆಗಳನ್ನು ಮತದಾನ ಸಂದರ್ಭದಲ್ಲಿ ಪ್ರತಿಯೊಬ್ಬರೂ ಪಾಲಿಸಬೇಕೆಂದು ತಿಳಿಸಿದರು.

        ಈ ಸಂದರ್ಭದಲ್ಲಿ ನಗರಸಭೆಯ ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಶ್ಯಾಮಲ, ವಿನಯ್, ಸಹಾಯಕ ಇಂಜಿನಿಯರ್, ಲೋಕೇಶ್, ಕಂದಾಯಾಧಿಕಾರಿ ವಿ.ಈರಮ್ಮ, ನೈರ್ಮಲ್ಯ ಇಂಜಿನಿಯರ್ ನರೇಂದ್ರಬಾಬು, ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ, ಗಣೇಶ್, ನಿರ್ಮಲ, ನೀಲಕಂಠಚಾರ್, ಮಂಜುನಾಥ, ಮುಖ್ಯೋಪಾಧ್ಯಾಯ ಸಿ.ಗುರುಸಿದ್ದಮೂರ್ತಿ, ಮತಗಟ್ಟೆ ಅಧಿಕಾರಿಗಳಾದ ಸುರೇಶ್, ಯೋಗೇಶ್ವರಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link