ಹೆಚ್1ಎನ್1 ರೋಗ ನಿಯಂತ್ರಣದ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳಿಂದ ಮನೆ ಬೇಟಿ

ಬಳ್ಳಾರಿ

     ಸಮುದಾಯದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಪ್ರತಿಯೊಬ್ಬರು ಕೈಜೋಡಿಸಬೇಕು ಮತ್ತು ಸಾರ್ವಜನಿಕರು ಎಲ್ಲೆಂದರಲ್ಲಿ ಉಗುಳುವುದನ್ನು ತಡೆಯುವ ಮೂಲಕ ಹೆಚ್1 ಎನ್1 ಸೇರಿದಂತೆ ಕ್ಷಯರೋಗ ಮತ್ತು ಇತರೆ ಸಾಂಕ್ರಾಮಿಕ ರೋಗಗಳನ್ನು ತಡೆಯಲು ಸಹಕಾರಿಯಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಡಾ.ಶಿವರಾಜ ಹೆಡೆ ಹೇಳಿದರು.
ಶುಕ್ರವಾರ ಹೂವಿನ ಹಡಗಲಿ ತಾಲೂಕಿನ ಉತ್ತಂಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಗ್ರಾಮದಲ್ಲಿ ಜ್ವರ ಪೀಡಿತರ ಮನೆಗೆ ಖುದ್ದು ಮನೆಗೆ ಭೇಟಿ ನೀಡಿ ಅವರು ಮಾತನಾಡಿದರು.

     ಮನುಷ್ಯನ ಮಾಡುವ ಕೆಲವೊಂದು ತಪ್ಪುಗಳಿಂದ ಸಾಂಕ್ರಾಮಿಕ ರೋಗಗಳು ಬೇಗ ಹರಡುತ್ತಿದ್ದು, ಅದರ ಮಾರಕದಿಂದ ಹೆಚ್1 ಎನ್1ನಂತಹ ರೋಗಗಳನ್ನು ನಿಯಂತ್ರಿಸಲು ಪ್ರಯತ್ನಿಸಬೇಕು ಎಂದು ಹೇಳಿದ ಅವರು ವೈದ್ಯರ ಸಲಹೆ ಇಲ್ಲದೇ ಔಷಧಿಗಳನ್ನು ಸೇವಿಸಬಾರದು. ಜನನಿಬಿಡ ಪ್ರದೇಶದಲ್ಲಿ ಕರವಸ್ತ್ರದಿಂದ ಮುಚ್ಚಿಕೊಳ್ಳದೇ ಕೆಮ್ಮುವುದು ಅಥವಾ ಸೀನುವುದು ಮಾಡಬಾರದು. ಕಣ್ಣು, ಮೂಗು, ಬಾಯಿಯನ್ನು ಆಗಾಗ ಕೈಯಿಂದ ಮುಟ್ಟಬಾರದು. ಹೀಗೆ ಮಾಡಿದಲ್ಲಿ ರೋಗವನ್ನು ತಡೆಯಲು ಹಾಗೂ ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಯಲು ಸಹಕಾರಿ ಎಂದು ತಿಳಿಸಿದರು.

      ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಚಂದ್ರಶೇಖರ್ ಕೆ, ಡಾ. ವಿನೋದ್, ಡಾ.ಚಂದ್ರಶೇಖರ ನಾಯ್ಕ, ಎಂಎಲ್‍ಹೆಚ್‍ಪಿ ಹರ್ಷಿತಾ, ಮಂಜುಶ್ರೀ ನಾಯ್ಕ್, ತನುಮಣಿ ಹೆಚ್.ಸಿ, ಕಿರಿಯ ಆರೋಗ್ಯ ಸಹಾಯಕರಾದ ಅಶ್ವಿನಿ.ಎ, ಕಲ್ಪನಾ, ರೂಪಿಣಿ, ಎಂ.ಜಿ. ಬಂಡಾರಿ, ಕಾರ್ತಿಕ, ಸುಭಾಷ್, ಗಿರಿಜಮ್ಮ, ಮಂಜುಳಾ ಹಾಗೂ ಆಶಾ ಕಾರ್ಯಕರ್ತೆಯರು ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link