ಕ್ಷುಲ್ಲಕ ಕಾರಣಕ್ಕಾಗಿ ಜಗಳ : ಚಾಕುವಿನಿಂದ ಇರಿದು ಯುವಕನ ಕೊಲೆ

ಚಳ್ಳಕೆರೆ

      ಕ್ಷುಲಕ ಕಾರಣಕ್ಕಾಗಿ ಇಬ್ಬರ ಯುವಕರ ನಡುವೆ ಏ.7ರ ಭಾನುವಾರ ರಾತ್ರಿ ಜಗಳ ನಡೆದಿದ್ದು, ಈ ಬಗ್ಗೆ ತಳಕು ಠಾಣೆಗೆ ದೂರು ನೀಡಿದ್ದು, ವಿಚಾರಣೆ ಆಗಮಿಸಿದ ಸಂದರ್ಭದಲ್ಲೇ ದೂರು ನೀಡಿದವನನ್ನು ಪೊಲೀಸ್ ಠಾಣೆ ಮುಂಭಾಗದಲ್ಲೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಬೀಬಸ್ಕ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ.

       ತಾಲ್ಲೂಕಿನ ತಳಕು ಹೋಬಳಿಯ ಮಲ್ಲಸಮುದ್ರ ಗ್ರಾಮದ ರಘುನಾಥರೆಡ್ಡಿ(36) ಎಂಬಾತನೇ ಬೇಡರೆಡ್ಡಿಹಳ್ಳಿಯ ವಸಂತರೆಡ್ಡಿ(34) ಎಂಬಾತನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದು, ಈ ಬಗ್ಗೆ ಎರಡು ಗ್ರಾಮಗಳಲ್ಲಿ ಆತಂಕದ ವಾತಾವರಣ ಉಂಟಾಗಿದೆ.

       ಮಲ್ಲಸಮುದ್ರ ಗ್ರಾಮದ ಬಳಿ ಭಾನುವಾರ ರಾತ್ರಿ ನಾಟಕವಿದ್ದು, ನಾಟಕಕ್ಕೆ ಹೋಗುವ ಸಂದರ್ಭದಲ್ಲಿ ಮಲ್ಲಸಮುದ್ರ ಗ್ರಾಮದ ರಸ್ತೆಯಲ್ಲಿ ಆರೋಪಿ ರಘುನಾಥರೆಡ್ಡಿ ಮತ್ತು ವಸಂತರೆಡ್ಡಿ ಪರಸ್ವರ ಜಗಳವಾಡಿಕೊಂಡಿದ್ದು, ಈ ಸಂದರ್ಭದಲ್ಲಿ ರಘುನಾಥರೆಡ್ಡಿ ವಸಂತರೆಡ್ಡಿ ಮೇಲೆ ಹಲ್ಲೆ ಮಾಡಿದ್ದು, ವಸಂತರೆಡ್ಡಿ ಕೂಡಲೇ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿ ದೂರು ನೀಡಿರುತ್ತಾನೆ. ತಳಕು ಪೊಲೀಸರು ರಘುನಾಥರೆಡ್ಡಿಗೆ ಮಾಹಿತಿ ನೀಡಿ ನಿಮ್ಮ ಬಗ್ಗೆ ನೀಡಿದ ದೂರಿನ ವಿಚಾರಣೆ ಸೋಮವಾರ ಬೆಳಗ್ಗೆ ತಳಕು ಠಾಣೆಗೆ ಆಗಮಿಸುವಂತೆ ಮಾಹಿತಿ ನೀಡಿದ್ಧಾರೆ.

        ಆರೋಪಿ ರಘುನಾಥರೆಡ್ಡಿ ತನ್ನದೇಯಾದ ಕಾರಿನಲ್ಲಿ ಕೆಲವರೊಂದಿಗೆ ತಳಕು ಠಾಣೆಗೆ ಆಗಮಿಸಿದ್ದಾನೆ. ಠಾಣೆ ಮುಂಭಾಗದಲ್ಲಿ ಸಿಕ್ಕ ವಸಂತರೆಡ್ಡಿಯನ್ನು ಹೀನಾಯವಾಗಿ ನಿಂದಿಸಿದ್ದಲ್ಲದೆ, ನನ್ನ ಮೇಲೆಯೇ ದೂರು ನೀಡಿದ್ದೀಯವೆಂದು ಆಕ್ರೋಶ ವ್ಯಕ್ತ ಪಡಿಸಿದ್ದಲ್ಲದೆ ತನ್ನ ಜೇಬಿನಿಂದ ಚಾಕುವನ್ನು ತೆಗೆದು ವಸಂತರೆಡ್ಡಿಯನ್ನು ಕೆಳಕ್ಕೆ ಕೆಡವಿ ಆತನ ಎದೆಗೆ ಬಲವಾಗಿ ತೀವಿದಿದ್ದಾನೆ. ಕೂಡಲೇ ವಸಂತರೆಡ್ಡಿಯ ಸಂಬಂಧಿಕರು ರಕ್ತದ ಮಡುವಿನಲ್ಲಿದ್ದ ಈತನನ್ನು ಅಂಬ್ಯುಲೆನ್ಸ್ ವಾಹನದಲ್ಲಿ ಚಳ್ಳಕೆರೆಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ಧಾರೆ. ಪರೀಕ್ಷೆ ನಡೆಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ಧಾರೆ.

        ತಳಕು ಠಾಣಾ ಆವರಣದಲ್ಲೇ ಯುವಕ ಬರ್ಬರ ಹತ್ಯೆಯ ಮಾಹಿತಿ ತಿಳಿದ ಜಿಲ್ಲಾ ರಕ್ಷಣಾಧಿಕಾರಿ ಡಾ.ಕೆ.ಅರುಣ್ ತಳುಕಿಗೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಕೊಲೆಗೆ ಕಾರಣವನ್ನು ಪತ್ತೆಹಚ್ಚಿ ಆರೋಪಿಯನ್ನು ಕೂಡಲೇ ಬಂದಿಸುವಂತೆ ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣನವರಿಗೆ ನಿರ್ದೇಶನ ನೀಡಿದ್ದಾರೆ. ಡಿವೈಎಸ್ಪಿ ಎಸ್.ರೋಷನ್ ಜಮೀರ್ ಮಾರ್ಗದರ್ಶನದಲ್ಲಿ ಪಿಎಸ್‍ಐ ಮೋಹನ್ ಕುಮಾರ್ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

       ಜಿಲ್ಲಾ ಸಚಿವರ ಭೇಟಿ :- ತಳಕು ಠಾಣೆಯ ಬಳಿ ಕೊಲೆಯಾದ ಬೇಡರೆಡ್ಡಿಹಳ್ಳಿಯ ವಂಸತರೆಡ್ಡಿ ಕಾಂಗ್ರೆಸ್ ಪಕ್ಷದ ಬೆಂಬಲಿಗನಾಗಿದ್ದು, ಈತನ ಕೊಲೆಯ ಸುದ್ದಿ ತಿಳಿದ ಸಂಸದ ಬಿ.ಎನ್.ಚಂದ್ರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಪಿ.ವೆಂಕಟರಮಣಪ್ಪ, ಶಾಸಕ ಟಿ.ರಘುಮೂರ್ತಿ, ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ, ಕಾಂಗ್ರೆಸ್ ಮುಖಂಡ ಎತ್ತಿನಹಟ್ಟಿ ಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಓಬಳೇಶ್, ಡಾ.ಬಿ.ಯೋಗೇಶ್‍ಬಾಬು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಸಂಬಂಧಿಕರಿಗಳಿಗೆ ಸಾಂತ್ವನ ತಿಳಿಸಿದ್ಧಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap