ಬಳ್ಳಾರಿ
ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಓರ್ವ ಅಭ್ಯರ್ಥಿ ನಾಮಪತ್ರ ಹಿಂಪಡೆದಿದ್ದು, 11 ಜನ ಅಭ್ಯರ್ಥಿಗಳು ತಮ್ಮ ಅದೃಷ್ಟ ಪರೀಕ್ಷೆಗಾಗಿ ಅಂತಿಮ ಕಣದಲ್ಲಿ ಉಳಿದುಕೊಂಡಿದ್ದಾರೆ.
ನಾಮಪತ್ರ ಹಿಂಪಡೆಯುವಿಕೆಗೆ ಕೊನೆಯ ದಿನವಾಗಿರುವ ಸೋಮವಾರದಂದು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ರಾಘವೇಂದ್ರ ಹನುಮಂತಪ್ಪ ಅವರು ನಾಮಪತ್ರ ಹಿಂಪಡೆದು ಕಣದಿಂದ ಹಿಂದೆ ಸರಿದ್ದಾರೆ.
ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ನಿಂದ ವಿ.ಎಸ್.ಉಗ್ರಪ್ಪ, ಬಹುಜನ ಸಮಾಜ ಪಕ್ಷದಿಂದ ಕೆ.ಗೂಳಪ್ಪ, ಭಾರತೀಯ ಜನತಾ ಪಕ್ಷದಿಂದ ವೈ.ದೇವಿಂದ್ರಪ್ಪ, ಶಿವಸೇನೆಯಿಂದ ಬಿ.ಈಶ್ವರಪ್ಪ, ಎಸ್ಯುಸಿಐದಿಂದ ಎ.ದೇವದಾಸ್, ಭಾರತ ಪ್ರಭಾತ ಪಕ್ಷದಿಂದ ಎಸ್.ನವೀನಕುಮಾರ್, ಇಂಡಿಯನ್ ಲೇಬರ್ ಪಾರ್ಟಿ(ಅಂಬೇಡ್ಕರ್ ಫುಲೆ)ಯಿಂದ ನಾಯಕರ ರಾಮಪ್ಪ, ಪಿರಮಿಡ್ ಪಾರ್ಟಿ ಆಫ್ ಇಂಡಿಯಾದಿಂದ ಬಿ.ರಘು, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕದಿಂದ ಪಿ.ಡಿ.ರಾಮಾನಾಯಕ್, ಸಮಾಜವಾದಿ ಫಾರ್ವರ್ಡ್ ಬ್ಲಾಕ್ದಿಂದ ಟಿ.ವೀರೇಶ, ಪಕ್ಷೇತರರಾಗಿ ವೈ.ಪಂಪಾಪತಿ ಕಣದಲ್ಲಿ ಉಳಿದಿದ್ದಾರೆ. ಏ.23ರಂದು ಮತದಾನ ನಡೆಯಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
