ರಾಯಚೂರು:

ರಾಯಚೂರು ಲೋಕಸಭಾ (ಎಸ್.ಟಿ) ಮೀಸಲು ಕ್ಷೇತ್ರ ಚುನಾವಣೆ ಸಂಬಂಧಿಸಿದಂತೆ ನಾಮಪತ್ರ ಹಿಂದಕ್ಕೆ ಪಡೆಯಲು ಏ.8ರ ಸೋಮವಾರ ಕೊನೆಯ ದಿನವಾಗಿತ್ತು.
ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದ ರಾಜಾ ರಂಗಪ್ಪ ನಾಯಕ್ ಅವರು ನಾಮಪತ್ರ ವಾಪಸ್ ಪಡೆದರು. ಇದರಿಂದಾಗಿ ಅಂತಿಮವಾಗಿ ಕಣದಲ್ಲಿ ಒಟ್ಟು 05 ಅಭ್ಯಥಿಗಳು ಉಳಿದಂತಾಗಿದೆ.
ಅಂತಿಮ ಕಣದಲ್ಲಿ ಅಭ್ಯರ್ಥಿಗಳ ವಿವರ ಇಂತಿದೆ:
ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎ.ಭಗವಂತ್ರಾಯ, ಬಹುಜನ ಸಮಾಜ ಪಕ್ಷದ ಅಭ್ಯರ್ಥಿ ವೆಂಕನಗೌಡ, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ನಿರಂಜನ ನಾಯಕ, ಸೋಷಿಯಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಪಕ್ಷದ ಅಭ್ಯರ್ಥಿ ಕೆ. ಸೋಮಶೇಖರ ಸೇರಿ ಒಟ್ಟು 05 ಜನ ಅಭ್ಯರ್ಥಿಗಳು ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ ಎಂದು ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಶರತ್ ಬಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








