ಪತ್ನಿಯನ್ನು ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ

ಂಗಳೂರು

       ನಾಲ್ಕನೇ ಹಂತದಲ್ಲಿದ್ದ ಕ್ಯಾನ್ಸರ್‍ನಿಂದ ಇನ್ನೇನು ಸಾಯುವ ಪತ್ನಿಯನ್ನು ನೋಡಲಾಗದೆ ಮನನೊಂದು ಆಕೆಯ ಜೊತೆ ಪ್ರೀತಿಯ ನಾಯಿಯನ್ನು ಕೊಲೆಗೈದು ಉದ್ಯಮಿ ಅತುಲ್ ಉಪಾಧ್ಯಾಯ ಆತ್ಮಹತ್ಯೆ ಮಾಡಿಕೊಂಡಿರುವುದು ಸದಾಶಿವನಗರ ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.

      ಕ್ಯಾನ್ಸರ್‍ನಿಂದ ಪತ್ನಿ ಮಮತಾ ಉಪಾಧ್ಯಾಯ ಬಳಲುತ್ತಿರುವುದು ಗೊತ್ತಾಗಿ ಆಕೆ ಹೆಚ್ಚುದಿನ ಬದುಕುವುದಿಲ್ಲದಿರುವುದನ್ನು ಅರಗಿಸಿಕೊಳ್ಳಲಾಗಿದೆ ಪತಿ ಅತುಲ್ ಉಪಾಧ್ಯಾಯ ಆಕೆಯ ಜೊತೆಗೆ ಮುದ್ದಿನಿಂದ ಸಾಕಿದ ನಾಯಿಯನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯಲ್ಲಿ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

      ಪತ್ನಿ ಅನಾರೋಗ್ಯಕ್ಕೆ ಒಳಗಾಗಿರುವುದನ್ನು ಕಂಡು ಪರಿಚಯಸ್ಥವೈದ್ಯರ ಬಳಿ ತೋರಿಸಿದರೆ ಕ್ಯಾನ್ಸರ್ ನಾಲ್ಕನೇ ಹಂತದಲ್ಲಿದೆ ಗುಣಮುಖರಾಗುವುದು ಆಸಾಧ್ಯ ಏನು ಮಾಡಲು ಸಾಧ್ಯವಿಲ್ಲ ಎಂದು ಕೈಚೆಲ್ಲಿದ್ದರು.ಇನ್ನೇನು ಕೆಲವೇ ದಿನಗಳಲ್ಲಿ ಪತ್ನಿ ಸಾಯುವುದನ್ನು ಅರಗಿಸಿಕೊಳ್ಳದೇ ಮಾನಸಿಕವಾಗಿ ಕುಗ್ಗಿಹೋಗಿದ್ದ ಅತುಲ್ ನಿನ್ನ ಬಿಟ್ಟು ನಾನು ಬದುಕಲ್ಲ, ನಿನ್ನ ಸಾವನ್ನು ನಾನು ನೋಡೋಕೆ ಆಗಲ್ಲ, ಇಬ್ಬರು ಒಟ್ಟಿಗೆ ಸಾಯೋಣ ಎಂದು ಹೇಳಿದ್ದರು ಆದರೆ ಪತ್ನಿ ಮಮತಾಗೆ ಒಟ್ಟಿಗೆ ಸಾಯುವದು ಇಷ್ಟ ಇರಲಿಲ್ಲ.ಪತಿ ಬದುಕಲಿ ಎನ್ನುವುದು ಅವರ ಆಸೆಯಾಗಿತ್ತು.

      ಇದೇ ವಿಚಾರವಾಗಿ ಪತಿ-ಪತ್ನಿ ನಡುವೆ ಗಲಾಟೆ ನಡೆದಿತ್ತು. ಹಾಗಾಗಿ ಪತಿ ಅತುಲ್ ತನ್ನ ಪತ್ನಿಯನ್ನು ಕೊಲೆ ಮಾಡಿದ್ದ. ಮತ್ತೊಂದು ದುರಂತ ಅಂದರೆ ಮಕ್ಕಳಿಲ್ಲದ ಈ ದಂಪತಿ ನಾಯಿಯನ್ನೇ ಮಗುವಂತೆ ಸಾಕಿದ್ದರು. ನಾವಿಬ್ರು ಹೋದ ಮೇಲೆ ನಾಯಿಗತಿ ಏನು ಎಂದು ಯೋಚನೆ ಮಾಡಿದ ಅತುಲ್ ತನ್ನ ಮುದ್ದು ನಾಯಿಯನ್ನು ಕೆಳಗೆ ಎಸೆದು ಕೊಂದು ಹಾಕಿದ್ದ.

     ಇದೆಲ್ಲಾವನ್ನು ನೋಡಿದ ನಂತರ ತಾನು ಕೂಡ ಅದೇ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯಲ್ಲಿ ಕಂಡುಬಂದಿದೆ.

ಘಟನೆ ವಿವರ

        ಬೆಂಗಳೂರಿನ ಸದಾಶಿವನಗರದಲ್ಲಿರುವ ಅಲೆಕ್ಸ್ ಸೈಕಾನ್ ಪೆÇೀಲರಿಸ್ ಅಪಾರ್ಟ್‍ಮೆಂಟ್‍ನಲ್ಲಿ ವಾಸವಿದ್ದ ಮುಂಬೈ ಮೂಲದ ಉದ್ಯಮಿ ಅತುಲ್ ಉಪಾಧ್ಯಾಯ ಪತ್ನಿ ಮಮತಾ ಉಪಾಧ್ಯಾಯ ಮನೆಯಲ್ಲಿ ಅದೊಂದು ಘೋರ ಘಟನೆ ನಡೆದು ಹೋಗಿತ್ತು. ಕಳೆದ ಮಂಗಳವಾರ ಮನೆಗೆ ಬಂದ ಗಂಡ ಅತುಲ್ ಉಪಾಧ್ಯಾಯ, ಏಕಾಏಕಿ ಪತ್ನಿ ಮಮತಾ ಉಪಾಧ್ಯಾಯರನ್ನು ಕೊಲೆ ಮಾಡಿ, ಮಗನಂತೆ ಸಾಕಿದ್ದ ನಾಯಿಯನ್ನು ನಾಲ್ಕನೇ ಹಂತದಿಂದ ಎಸೆದು ನಂತರ ತಾನು ಕೂಡ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು.

        ಪತಿ ಅತುಲ್ ಉಪಾಧ್ಯಾಯ ಸಾಯುವ ಮೊದಲು, ಆರು ಪುಟಗಳ ಡೆತ್ ನೋಟ್ ಕೂಡ ಬರೆದಿದ್ದು, ಎಫ್‍ಎಸ್‍ಎಲ್ ವರದಿ ನಂತರ ಮತ್ತಷ್ಟು ವಿಚಾರಗಳು ತಿಳಿಯಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

Recent Articles

spot_img

Related Stories

Share via
Copy link