ಹೊಸದುರ್ಗ:
ಅಧಿಕಾರ ಕ್ಕಿಂತಅಭಿವೃದ್ದಿಮುಖ್ಯ, ಅಧಿಕಾರ ಶಾಶ್ವತವಲ್ಲ ಅಭಿವೃದ್ದಿ ಮಾಡುವುದು ನಮ್ಮ ಗುರಿ ಎಂದು ಪಕ್ಷದ ಅಭ್ಯರ್ಥಿ ಆನೇಕಲ್ ನಾರಾಯಣ ಸ್ವಾಮಿಮಾತನಾಡಿದರು.
ತಾಲ್ಲೂಕಿನಶ್ರೀರಾಂಪುರದಲ್ಲಿಆಯೋಜಿಸಿದ್ದಬಿಜೆಪಿವಿಜಯಸಂಕಲ್ಪಕಾರ್ಯಕ್ರಮದಲ್ಲಿಮಾತನಾಡಿದರು. ನರೇಂದ್ರ ಮೋದಿಯವರು ಸಂಘ ಪರಿವಾರದ ಕಾರ್ಯಕರ್ತರ ಶ್ರಮದ ಫಲವಾಗಿ 2014 ರಲ್ಲಿ ದೇಶದ ಪ್ರಜಾಪ್ರಭುತ್ವದ ಗದ್ದುಗೆ ಏರಿದರು. 70 ವರ್ಷದ ಇತಿಹಾಸದಲ್ಲಿ ಆಡಳಿತ ನಡೆಸಿದ ಯುಪಿಎ ಸರಕಾರ ಮಾಡದ ಸಾಧನೆಯನ್ನು ಕೇವಲ ಐದು ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಸಾಕಷ್ಟು ಜನಪರ ಅಭಿವೃದ್ದಿ ಕಾಮಗಾರಿಯನ್ನು ಮಾಡಿದ್ದಾರೆ ಎಂದರು.
ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆ ತರಲು ಶ್ರಮಿಸಿದೆ . ಹಾಸ್ಟೇಲ್ ಪರಿವರ್ತನೆ, ವಿದ್ಯಾರ್ಥಿ ವೇತನ ಹೆಚ್ಚಳ , ಅಂಬೇಡ್ಕರ್ ,ವಾಲ್ಮೀಕಿ, ಕನಕ ಭವನಗಳಿಗೆ ಹೆಚ್ಚು ಅನುದಾನ ನೀಡಿದ್ದೆ . ದಲಿತ ಹಿಂದುಳಿದ ವರ್ಗಗಳಿಗೆ ಕಾಳಜಿ ತೋರಿಸದೇ ಕಾಂಗ್ರೆಸ್ – ಜೆಡಿಎಸ್ ಮತಗಳಿಗೆ ಸೀಮಿತಗೊಳಿಸಿದ್ದಾರೆ ಅದಕ್ಕಾಗಿ ದೇಶದ ಅಭಿರುದ್ದಿಗಾಗಿ ಮತ್ತೊಮ್ಮೆ ಮೋದಿ ಪ್ರಧಾನಿಯಾಗಬೇಕು ಇದಕ್ಕೆ ನಿಮ್ಮ ಸಂಪೂರ್ಣ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ಶಾಸಕ ಗೂಳಿಹಟ್ಟಿ ಡಿ ಶೇಖರ್ ಮಾತನಾಡಿ ಶ್ರೀರಾಂಪುರ ಕ್ಷೇತ್ರ ನಿರ್ಭಯವಾತಾವರಣದಿಂದ ಬದುಕುವ ಸ್ಥಿತಿ ನಿರ್ಮಾಣ ಆಗಿದೆ ಎಂದರೆ ಬಿಜೆಪಿ ಗೆಲುವಿನ ಕಾರಣ. ಅದಕ್ಕಾಗಿ ಜನಪರ ಕೆಲಸಗಳನ್ನು ಮಾಡಲು ಒಂದು ಲಕ್ಷಕ್ಕಿಂತ ಹೆಚ್ಚು ಮತಗಳನ್ನು ಹಾಕಿ ನಾರಾಯಣ ಸ್ವಾಮಿ ಅವರನ್ನು ಗೆಲ್ಲಿಸುವುದು ನಮ್ಮ ಹೊಣೆ ಎಂದು ಹೇಳಿದರು. ಶ್ರಿರಂಪೂರ ಹೋಬಳಿ ಓಬಳಾಪುರ ಎಂಬ ಚಿಕ್ಕ ಗ್ರಾಮದಲ್ಲಿ 120 ಗ್ಯಾಸ್ವ್ಯವಸ್ಥೆ ಮೋದಿಯವರು ನೀಡಿದ್ದಾರೆ.
ನಾರಾಯಣ ಸ್ವಾಮಿ ಅವರು ಸಮಾಜ ಕಲ್ಯಾಣ ಸಚಿವರು ಆಗಿದ್ದಾಗ ಎಲ್ಲಾ ಸಮುದಾಯಕ್ಕು ಅನುದಾನ ನೀಡಿದ್ದಾರೆ. ಉತ್ತಮ ಕೆಲಸ ಮಾಡುವ ನಾರಾಯಣ ಸ್ವಾಮಿ ಅವರು ಈ ಬಾರಿ 2 ಲಕ್ಷಕ್ಕೂ ಹೆಚ್ಚು ಮತದಿಂದ ಗೆಲುವು ನಿಚ್ಚಿತ ಎಂದು ಹೇಳಿದರು.
ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಎಸ್. ಲಿಂಗಮೂರ್ತಿ ಮಾತನಾಡಿ ಈ ಬಾರಿ ಅತೀ ಹೆಚ್ಚು ಮತಗಳನ್ನು ಹಾಕಿ ಬಿಜೆಪಿ ಅಭ್ಯರ್ಥಿ ನಾರಾಯಣ ಸ್ವಾಮಿ ಅವರನ್ನು ಗೆಲ್ಲಿಸಬೇಕು . ಅಭಿರುದ್ದಿ ಕಾರ್ಯಗಳಿಗೆ ಅತೀ ಹೆಚ್ಚಾಗಿಹೊತ್ತು ಕೊಡುವ ಈ ಅಭ್ಯರ್ಥಿಗೆ ಗೆಲುವು ನಿಶ್ಚಿತ ಎಂದು ಹೇಳಿದರು.
ಭದ್ರಾ ಮೇಲ್ದಂಡೆ ಯೋಜನೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಅವರ ಕನಸಿನ ಕೂಸು, ಆದರೆ 8 ವರ್ಷದ ಅವಧಿಯಲ್ಲಿ ಕಾಂಗ್ರೆಸ್ 1300 ಕೋಟಿ ಹಣ ನೀಡಿ ಆಮೆಗತಿಯಲ್ಲಿ ಕೆಲಸ ಮಾಡುತ್ತಿದೆ . ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಪಕ್ಷ ಕೆಲವು ದಿನಗಳೇ ಅಷ್ಟೆ. ಉತ್ತಮ ಆಡಳಿತಕ್ಕೆ ಈ ಬಾರಿ ನರೇಂದ್ರ ಮೋದಿಯವರನ್ನೂ ಮತ್ತೊಮ್ಮೆ ಪ್ರಧಾನಿ ಮಾಡೋಣ ಕಾರ್ಯಕರ್ತರು ಮತ್ತು ಮತ ನೀಡುವದೇವರುಗಳು ನಿಮ್ಮ ಕೈಯಲ್ಲಿದೆ ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಎಸ್. ನವೀನ್ ತಾಲ್ಲೂಕು ಘಟಕದ ಅಧ್ಯಕ್ಷ ಡಿ ಟಿ ವಟ್ಟಿಲಕ್ಷ್ಮಣ್, ಬಿಜೆಪಿ ಹಿರಿಯ ಮುಖಂಡರಾದ ಹೇಬ್ಬಳ್ಳಿ ಮಲ್ಲಿಕಾರ್ಜುನ, ಜಿಪಂ, ಸದಸ್ಯ ಅಜ್ಜಪ್ಪ, ಬುರೆಡೇಕಟ್ಟೆರಾಜೇಶ್, ಸಾಚಾ ಮಂಜು ಹಾಗೂ ಪಕ್ಷದ ಕಾರ್ಯಕರ್ತರು ,ಮುಖಂಡರು ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








