ಗಾಂಧೀಜಿಯವರ ಆದರ್ಶಗಳನ್ನು ಇಂದಿನ ಯುವ ಸಮುದಾಯ ರೂಢಿಸಿಕೊಳ್ಳಬೇಕು : ಡಾ. ಡಿ.ಧರಣೇಂದ್ರಯ್ಯ.

0
26

ಹಿರಿಯೂರು :

       ದೇಶವನ್ನು ದಾಸ್ಯದಿಂದ ಬಿಡಿಸಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಜನ ಸೇವಕ, ವಿಶ್ವನಾಯಕ ವiಹಾತ್ಮ ಗಾಂಧೀಜಿಯವರ ಚಿಂತನೆ, ಜೀವನ ಆದರ್ಶಗಳನ್ನು ಇಂದಿನ ಯುವ ಸಮುದಾಯ ರೂಢಿಸಿಕೊಳ್ಳಬೇಕು ಎಂದು ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಡಾ. ಡಿ.ಧರಣೇಂದ್ರಯ್ಯ ಹೇಳಿದರು.

         ನಗರದ ವಾಣಿಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಹುಮುಖಿ ಕಲಾ ಕೇಂದ್ರ, ಚಿತ್ರದುರ್ಗ, ಕಳವಿಭಾಗಿ ಶ್ರೀರಂಗನಾಥಸ್ವಾಮಿ ಸಾಂಸ್ಕøತಿಕ ಕಲಾ ಸಂಘ , ಸಕ್ಕರ, ಕಾರಂಜಿ ಕಲ್ಚರಲ್ ಟ್ರಸ್ಟ್ , ಮದಕರಿಪುರ, ಐತಿಹ್ಯ ರಂಗಕೇಂದ್ರ, ಚಿತ್ರದುರ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಮಹಾತ್ಮಗಾಂಧೀಜಿಯವರ 150ನೇ ಜನ್ಮ ವರ್ಷ ಆಚರಣೆಯ ಅಂಗವಾಗಿ ಆಯೋಜಿಸಿದ್ದ ಬೋಳುವಾರು ಮಹವiದ್ ಕುಂಞ ರವರ ರಚನೆಯ “ಪಾಪು ಗಾಂಧಿ – ಗಾಂಧಿ ಬಾಪು ಆದ ಕಥೆ” ರಂಗರೂಪಕ ನಾಟಕ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

       ಗಾಂಧೀಜಿಯವರು ಸಾಮಾನ್ಯರಾಗಿ ಜನಿಸಿ ಸರಳ, ನೇರನಡೆ, ನುಡಿಗಳಿಂದ ಅತೀ ಎತ್ತರಕ್ಕೆ ಬೆಳೆದು ಸತ್ಯ, ಶಾಂತಿ, ಹಿಂಸೆಯ ತತ್ವಗಳನ್ನು ವಿಶ್ವಕ್ಕೆ ಪರಿಚಯಿಸಿ, ಯುಗ ಪುರುಷರಾಗಿದ್ದು, ಅವರ ಜೀವನಗಾಥೆ ನಮ್ಮೆಲ್ಲರಿಗೂ ಸ್ಪೂರ್ತಿಯಾಗಬೇಕಿದೆ, ಹಿಂದೂ ಮುಸ್ಲಿಮರೂ ಭಾವೈಕ್ಯತೆ ಏಕತೆಯಿಂದ ಬದುಕುಬೇಕು ಧರ್ಮ ಧರ್ಮದ ಮಧ್ಯೆ ಒಡಕನ್ನು ಉಂಟು ಮಾಡಬಾರದು ಎಂದು ಗಾಂಧೀಜಿಯವರು ಸಾರಿ ಸಾರಿ ಹೇಳಿದ್ದರು ಎಂದು ಹೇಳಿದರು.

       ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ಪುರಸ್ಕøತರಾದ ಎಸ್.ಜಿ.ರಂಗಸ್ವಾಮಿ ಸಕ್ಕರ ಮಾತನಾಡಿ, ಮಹಾತ್ಮ ಗಾಂಧೀಜಿಯವರ ಜೀವನ ಆದರ್ಶ, ಚಿಂತನೆಗಳು ಇಂದಿನ ಯುವ ಜನತೆಗೆ ಪರಿಚಯಿಸುವ ದೃಷ್ಠಿಯಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ದಾರವಾಢದ ರಂಗಾಯಣ, ಜೊತೆಗೂಡಿ ಗಾಂಧಿ-150 ಒಂದು ರಂಗ ಪಯಣ, ಶೀರ್ಷಿಕೆಯಡಿ ರಂಗರೂಪಕ ನಾಟಕ ಪ್ರದರ್ಶನ ಏರ್ಪಡಿಸಿದ್ದು, ಯುವ ಜನತೆ, ವಿದ್ಯಾರ್ಥಿಗಳಿಗೆ ಉಪಯೋಗವಾಗ ಬೇಕಿದೆ. ಸತ್ಯ, ಅಹಿಂಸೆ, ನಿರ್ಭಯತೆ, ಸಂಯಮದ ಜೀವನ, ಸಚ್ಛಾರಿತ್ರ್ಯ, ಸರಳತೆ, ಸ್ವಾವಲಂಭನೆ, ಸರ್ವಧರ್ಮ ಸಮಭಾವ, ಶ್ರಮನಿಷ್ಠೆ, ಅಸ್ಪøಶ್ಯತೆ ನಿವಾರಣೆ, ಸರ್ವೋದಯ, ಸ್ವದೇಶಿ ವಸ್ತುಗಳ ಬಳಕೆ ಕುರಿತು ಮಹತ್ವ ಸಾರಿದರು.

       ಹಿಂದೂ ಧರ್ಮಕ್ಕೆ ಅಂಟಿಕೊಂಡಿರುವ ಬಹು ದೊಡ್ಡ ಶಾಪ, ಅಸ್ಪಶ್ಯತೆ. ಅಸ್ಪಶ್ಯತೆ, ಅಸಮಾನತೆ, ಲಿಂಗ ತಾರತಮ್ಯ, ಹೋಗಲಾಡಿಸಲು, ಗಾಂಧೀಜಿಯವರು ಹರಿಜನ, ಯಂಗ್‍ಇಂಡಿಯಾ ಮತ್ತು ನವಜೀವನ ವಾರಪತ್ರಿಕೆಗಳನ್ನು ಪ್ರಾರಂಭಿಸಿ ಸಾಮಾನ್ಯ ಜನರಿಗೆ ಅರಿವು ಮೂಡಿಸಿದರು.

       ಹಿಂದೂ ಧರ್ಮ ನಿರ್ನಾಮವಾದರೂ ಸಹಿಸಿಯೇನು, ಆದರೆ ಹಿಂಧೂ ಧರ್ಮಕ್ಕೆ ಶಾಪದಂತೆ ಅಂಟಿಕೊಂಡಿರುವ ಅಸ್ಪøಶ್ಯತೆಯನ್ನು ನಾನು ಸಹಿಸಲಾರೆ ಎಂದು ತಮ್ಮ ಪತ್ರಿಕೆಗಳಲ್ಲಿ ಬರೆದರು. ಅಸ್ಪøಶ್ಯರಿಗೆ ಸಮಾಜಿಕ ನ್ಯಾಯ ಒದಗಿಸುವ ಚಳುವಳಿಗೆ ಕವಿ ರವೀಂದ್ರನಾಥಠಾಗೂರ್, ಡಾ. ಬಿ.ಆರ್.ಅಂಬೇಡ್ಕರ್, ಡಾ. ಬಾಬು ಜಗಜೀವನ್‍ರಾಂ, ಡಾ. ಬಾಬು ರಾಜೇಂದ್ರಪ್ರಸಾದ್ ಬೆಂಬಲ ಸೂಚಿಸಿ ಗಾಂಧೀಜಿಯು ಯುಗ ಪುರುಷರಾಗಲು ಸ್ಪೂರ್ತಿ ನೀಡಿದರು. ಯಾರ ಚಾರಿತ್ರ್ಯ ಇತರರಿಗೆ ಮಾದರಿಯಾಗುತ್ತದೆಯೋ ಅವರು ಚರಿತ್ರೆಯಾಗಿ ಉಳಿಯುತ್ತಾರೆ ಎಂಬುದಕ್ಕೆ ಗಾಂಧೀಜಿಯವರೇ ಸಾಕ್ಷಿ ಪ್ರಜ್ಞೆಯಾಗಿದ್ದಾರೆ ಎಂದು ಹೇಳಿದರು.

      ಕಾರ್ಯಕ್ರಮದಲ್ಲಿ ಸಾಂಸ್ಕøತಿಕ ಸಮಿತಿ ಸಂಚಾಲಕರಾದ ಶ್ರೀಮತಿ ಆರ್.ಪುಷ್ಪಲತಾ, ಡಾ.ಸಿದ್ದಲಿಂಗಯ್ಯ, ರಾಮಪ್ಪ, ಜಗನ್ನಾಥ್, ಜನಾರ್ಧನ್‍ಕುಮಾರ್, ಶಿವರಾಜ್, ಚಿತ್ತಯ್ಯ, ಟಿ.ಮಧು, ಇನ್‍ಪೆಂಟ್ ವಿನಯ್, ಟಿ.ಶ್ರೀನಿವಾಸಮೂರ್ತಿ, ರಂಗಾಯಣ ಕಲಾವಿದರಾದ ರಂಜಿತ್‍ಜಾಧವ್, ಹರೀಶ್ ಗುರಪ್ಪನವರ್, ಪ್ರಜ್ವಲ್, ಸಿಂಧೂ ಕೊಂಡೊಜ್ಜಿ, ಅಕ್ಕಮ್ಮ, ಕುಮಾರ್, ಸುನೀಲ್, ಸಂದೀಪ್, ಪನವ್ ಮಿಟ್ಟಾ, ದಿನೇಶ್, ಪ್ರದೀಪ್, ಶ್ಯಾಮಲ, ಜಗದೀಶ್, ಮಿಲನ್, ಸುಮನ್, ಹಾಗೂ ಇತರರು ಉಪಸ್ಥಿತರಿದ್ದರು.

 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

LEAVE A REPLY

Please enter your comment!
Please enter your name here