ವಾಸವಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಮೇಲುಗೈ.

ಚಳ್ಳಕೆರೆ

     ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ನಗರದ ವಾಸವಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕಗಳನ್ನು ಪಡೆದು ಡಿಸ್ಟಿಂಕ್ಷನ್‍ನಲ್ಲಿ ಉತ್ತೀರ್ಣರಾಗಿದ್ದು, ತಾಲ್ಲೂಕಿನಲ್ಲಿಯೇ ಉತ್ತಮ ಫಲಿತಾಂಶ ಪಡೆದ ಕಾಲೇಜಾಗಿದೆ.

     ಈ ಬಗ್ಗೆ ಮಾಹಿತಿ ನೀಡಿದ ಪ್ರಾಂಶುಪಾಲ ಡಿ.ವೆಂಕಟಶಿವಾರೆಡ್ಡಿ, ಪ್ರಸ್ತುತ ನಮ್ಮ ಕಾಲೇಜಿನಿಂದ ವಿಜ್ಞಾನ ವಿಭಾಗದಲ್ಲಿ 184 ವಿದ್ಯಾರ್ಥಿಗಳು ಪರೀಕ್ಷೆಗೆ ಕುಳಿತಿದ್ದು, ಅ ಪೈಕಿ 170 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.92.04 ಫಲಿತಾಂಶವನ್ನು ಪಡೆದಿದ್ಧಾರೆ. ಈ ವಿಭಾಗದಲ್ಲಿ ಒಟ್ಟು 14 ವಿದ್ಯಾರ್ಥಿಗಳು ಅನ್ನುತ್ತೀರ್ಣರಾಗಿದ್ಧಾರೆ.

      ವಿಜ್ಞಾನ ವಿಭಾಗದಲ್ಲಿ 600ಕ್ಕೆ 565 ಅಂಕ ಪಡೆದು ಕಾಲೇಜಿನ ಜೆ.ಭಾವನ ಚೌಧರಿ ಪ್ರಥಮ ಸ್ಥಾನ ಪಡೆದಿದ್ದು, ಇದೇ ವಿಭಾಗದಲ್ಲಿ ಕೆ.ವಿ.ವಿಕ್ರಮ್-563 ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದು, ಸಿ.ಎನ್.ನಾಗಶ್ರೀ 562 ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ಧಾರೆ. ವಾಣಿಜ್ಯ ವಿಭಾಗದಲ್ಲಿ ವಿ.ನಾಗಶ್ರೀ 551 ಅಂಕಗಳನ್ನು ಪಡೆದಿದ್ಧಾರೆ. ವಾಣಿಜ್ಯ ವಿಭಾಗದಲ್ಲಿ ಒಟ್ಟು 65 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 59 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.90.26 ದಾಖಲೆ ಫಲಿತಾಂಶ ಪಡೆದಿದ್ದಾರೆ.

       ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಉತ್ತಮ ಅಂಕಗಳನ್ನು ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ ಅಭಿನಂದಿಸಿದೆ. ಇದೇ ಸಂದರ್ಭದಲ್ಲಿ ಉತ್ತಮ ಫಲಿತಾಂಶ ಲಭ್ಯವಾದ ಹಿನ್ನೆಲೆಯಲ್ಲಿ ವಾಸವಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ನಗರದಲ್ಲಿ ಮೆರವಣಿಗೆ ನಡೆಸಿ ಸಂತಸವನ್ನು ಹಂಚಿಕೊಂಡರು.

      ನಗರದ ಎಸ್‍ಆರ್‍ಎಸ್ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಲಭ್ಯವಾಗಿದ್ದು, ವಿಜ್ಞಾನ ವಿಭಾಗದಲ್ಲಿ ಆರ್.ಶಾಲಿನಿ ಪ್ರಥಮ ಸ್ಥಾನವನ್ನು ಎಸ್.ಸ್ವಾತಿ ಪಡೆದಿದ್ದು, ಇವರು 519 ಅಂಕಗಳನ್ನು ಪಡೆದಿದ್ಧಾರೆ. ಎಚ್.ಸುಶ್ಮ ದ್ವಿತೀಯ ಸ್ಥಾನ ಪಡೆದಿದ್ದು, 518 ಅಂಕ ಪಡೆದಿದ್ಧಾರೆ. ಎಸ್.ಸಿಂಧುಜಾ 515 ಅಂಕ ಪಡೆದಿದ್ಧಾರೆ. ರೇಷ್ಮಭಾನು 515 ಪಡೆದಿದ್ಧಾರೆ.

      ವಾಣಿಜ್ಯ ವಿಭಾಗದಲ್ಲಿ ಆರ್.ಶಾಲಿನಿ-562, ಜಿ.ಕೆ.ಆದಿತ್ಯ-551, ಎಂ.ಚಂದನ-549, ಕೆ.ಸಿ.ಪ್ರವಾಲಿಕ-541, ಸಿ.ಎಸ್.ಸಹನ-541 ಅಂಕಗಳನ್ನು ಪಡೆದಿದ್ದು, ಪ್ರಸ್ತುತ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಎಲ್ಲಾ ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತ ಮಂಡಳಿ ಹಾಗೂ ಉಪನ್ಯಾಸಕ ವರ್ಗ ಅಭಿನಂದಿಸಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap