ಏ.20 ರಂದು ಮತದಾನ ಜಾಗೃತಿ ಕಾರ್ಯಕ್ರಮ

ಬಳ್ಳಾರಿ

   ಸ್ವೀಪ್ ಸಮಿತಿಯವತಿಯಿಂದ ಲೋಕಸಭಾ ಚುನಾವಣೆ-2019ರ ಪ್ರಯುಕ್ತ ಮತದಾರರನ್ನು ಜಾಗೃತಿ ಮೂಡಿಸಲು ಏ.20 ರಂದು ಸಂಜೆ 6 ಕ್ಕೆ ಹೆಚ್.ಆರ್.ಗವಿಯಪ್ಪ ವೃತ್ತದ ಬಯಲು ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮವನ್ನು ನಡೆಯಲಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಕೆ.ನಿತೀಶ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

     ಬಳ್ಳಾರಿ ಜಿಲ್ಲೆಯ ಲೋಕಸಭಾ ಚುನಾವಣೆಯ ರಾಯಭಾರಿಗಳಾದ ನಾಡೋಜ ಡಾ.ಸುಭದ್ರಮ್ಮ ಮನ್ಸೂರು ಅವರಿಂದ ರಂಗ ಗೀತೆಗಳ ಗಾಯನ ಹಾಗೂ ಪಿ.ಹೊನ್ನೂರ್‍ವಲಿ ಮತ್ತು ಸಂಗಡಿಗರಿಂದ ಕನ್ನಡ ಚಲನಚಿತ್ರಗಳ ಚಿತ್ರಗೀತೆಗಳ ಗಾಯನವನ್ನು ನಡೆಯಲಿದೆ.
ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಇ.ವಿ.ಎಂ ಮತಯಂತ್ರಗಳ ಪ್ರಾತ್ಯಕ್ಷತೆಯನ್ನು ಸಹ ಏರ್ಪಡಿಸಲಾಗಿದೆ. ಈ ಸಾಂಸ್ಕತಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಜನಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link