ಮಾಜಿ ಪ್ರಧಾನಿ ದಿ|| ಇಂದಿರಾ ಗಾಂಧಿಯವರ 34ನೇ ಪುಣ್ಯ ಸ್ಮರಣೆ ಕಾರ್ಯಕ್ರಮ.

ಹೊಸಪೇಟೆ :

         ಇಲ್ಲಿನ ಪಟೇಲನಗರದ ಕಾಂಗ್ರೆಸ್ ಕಚೇರಿಯಲ್ಲಿ ಬಳ್ಳಾರಿ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯ ವತಿಯಿಂದ ಬುಧವಾರ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ 35ನೇ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು.

        ಶಾಸಕ ಆನಂದಸಿಂಗ್ ಇಂದಿರಾ ಗಾಂಧಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಬಳಿಕ ಮಾತನಾಡಿದ ಅವರು, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ತ್ಯಾಗ, ಬಲಿದಾನ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಅವರು ನೀಡಿದ ಕೊಡುಗೆಯನ್ನು ಯಾರು ಮರೆಯುವಂತಿಲ್ಲ.

        ಈ ದೇಶದ ಅಭಿವೃದ್ದಿಗಾಗಿ ಮತ್ತು ಈ ದೇಶದ ಬಡಜನರ ಪರವಾಗಿ ಹಲವಾರು ಯೋಜನೆಗಳ ಮೂಲಕ ಕೆಳವರ್ಗದ ಜನರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದರು ಎಂದರು.

        ಕೆ.ಪಿ.ಸಿ.ಸಿ. ಮಾಜಿ ಪ್ರಧಾನ ಕಾರ್ಯದರ್ಶಿ ಹೆಚ್.ಅಬ್ದುಲ್ ವಹಾಬ್ ಮಾತನಾಡಿ, ದೇಶದಲ್ಲಿನ ಬಡತನ ನಿವಾರಣೆ ಮಾಡಲು ಗರೀಭಿ ಹಟಾವೋ, 21 ಅಂಶಗಳ ಕಾರ್ಯಕ್ರಮಗಳ ಮೂಲಕ ವಿಧವಾ ವೇತನ, ಅಂಗವಿಕಲರಿಗೆ ಮಾಶಾಸನ, ಹಿರಿಯ ನಾಗರೀಕರಿಗೆ ಪಿಂಚಣಿ ಯೋಜನೆ, ಮತ್ತು ಊಳುವವನೇ ಭೂಮಿ ಓಡೆಯ ಎನ್ನುವ ಜನಪ್ರಿಯ ಯೋಜನೆಗಳ ಮುಖಾಂತರ ದೇಶದ ಜನತೆಗೆ ಮನೆ ಮಾತಾಗಿದ್ದಾರೆ ಎಂದು ತಿಳಿಸಿದರು.

       ಮುಖಂಡ ಗುಜ್ಜಲ್ ನಾಗರಾಜ್ ಮಾತನಾಡಿ, ಈ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಮಾಡಲು ಖಾಸಗಿ ಬ್ಯಾಂಕ್‍ಗಳನ್ನು ರಾಷ್ಟ್ರೀಕರಣ ಮಾಡಿ ದೇಶದ ಹಣಕಾಸಿನ ವಹಿವಾಟು ಸರ್ವ ಜನರಿಗೂ ಸಿಗುವಂತೆ ಮಾಡಿದ ಕೀರ್ತಿ ಇಂದಿರಾ ಗಾಂಧಿಯವರಿಗೆ ಸಲ್ಲುತ್ತದೆ ಎಂದರು.

       ಸಂದರ್ಭದಲ್ಲಿ ಕೆ.ಪಿ.ಸಿ.ಸಿ. ಕಾರ್ಯದರ್ಶಿ ಕಮಲ ಮರಿಸ್ವಾಮಿ, ಮುಖಂಡರಾದ ಎಲ್.ಸಿದ್ದನಗೌಡ, ಶಾದಾಬ್ ವಹಾಬ್, ನಗರಸಭಾ ಅಧ್ಯಕ್ಷ ಗುಜ್ಜಲ್ ನಿಂಗಪ್ಪ, ಧರ್ಮೆಂದ್ರ ಸಿಂಗ್, ತಮ್ಮನಳ್ಳಪ್ಪ, ಡಿ.ವೆಂಕಟರಮಣ, ಸಂದೀಪ್ ಸಿಂಗ್, ನಿಂಬಗಲ್ ರಾಮಕೃಷ್ಣ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ರಫೀಕ್, ಅಮಾಜೀ ಹೇಮಣ್ಣ, ಕೆ.ರವಿಕುಮಾರ್, ಶೇಷು, ಗುಜ್ಜಲ್ ಉಮೇಶ್, ಗೀತಾ ಶಂಕರ್, ಮದುರ ಚನ್ನಶಾಸ್ತ್ರಿ, ತೇಜುನಾಯ್ಕ್, ಹೆಚ್.ಕೆ.ಮಂಜುನಾಥ ಸೇರಿದಂತೆ ಇತರರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link