ದೇಶವನ್ನೇ ದಿವಾಳಿಯತ್ತ ಕೊಂಡೊಯ್ಯುತ್ತಿರುವ ಮೋದಿ:ಸಿದ್ಧಬಸಪ್ಪ ಯಾದವ

ಗುತ್ತಲ :

      ದೇಶವನ್ನೇ ದಿವಾಳಿಯತ್ತ ಕೊಂಡೊಯ್ಯುತ್ತಿರುವ ಮೋದಿ ನೇತೃತ್ವದ ಬಿ,ಜೆ.ಪಿ ಸರ್ಕಾರದ ಆಡಳಿತ ವೈಖರಿಯಿಂದಾಗಿ ದೇಶಕ್ಕೆ ಮುಕ್ತಿ ಬೇಕಾಗಿದ್ದು, ದೇಶ ಬಚಾವೋ ಮೋದಿ ಹಠಾವೋ ನಮ್ಮ ಗುರಿಯಾಗಿದೆ, ಮೋದಿ ಸರ್ಕಾರದ ಆಡಳಿತದಿಂದ ಜನರು ರೋಸಿ ಹೋಗಿದ್ದು, ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಆಡಳಿತ ಬರುವುದು ನಿಶ್ಚಿತ ಎಂದು ಜೆ,ಡಿ,ಎಸ್ ರಾಜ್ಯ ಉಪಾಧ್ಯಕ್ಷರಾದ ಕೆ,ಎಸ್, ಸಿದ್ಧಬಸಪ್ಪ ಯಾದವ ಹೇಳಿದರು.

       ಪಟ್ಟಣದ ತಮ್ಮ ನಿವಾಸದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಅಧಿಕಾರಕ್ಕೆ ಬರುವ ಮೊದಲು ನೀಡಿದ ಯಾವುದೇ ಭರವಸೆಯನ್ನು ಬಿ,ಜೆ.ಪಿ ಈಡೇರಿಸಲಿಲ್ಲ, ನೋಟು ಅಮಾನೀಕರಣದಿಂದ ದೇಶದಲ್ಲಿ ಸಾವು ನೋವುಗಳು ಸಂಭವಿಸಿದ್ದು, ಈ ಕುರಿತು ಯಾರು ಕೇಳುವವರಿಲ್ಲದ ಸ್ಥತಿ ನಿರ್ಮಾಣವಾಗಿದೆ, ಆಹಾರ ಸಾಮಗ್ರಿಗಳ ಬೆಲೆ ಗಗನಕ್ಕೇರಿದ್ದರೂ ಬಡ ರೈತ ಬೆಳೆದ ಬೆಳೆಗಳಿಗೆ ಕಿಮ್ಮತ್ತಿಲ್ಲದಾಗಿದೆ ದೇಶಕ್ಕಾಗಿ ಹೋರಾಡುತ್ತಿರುವ ಸೈನಿಕರನ್ನು ಮೋದಿ ಸೇನೆಯಂದು ಬಿ,ಜೆ.ಪಿ ಪರಿವರ್ತಿಸಿ ಜನರ ಭಾವನೆಗಳ ಜತೆಗೆ ಚೆಲ್ಲಾಟವಾಡುತ್ತಿದೆ ಎಂದು ಆರೋಪಿಸಿದರು.

      ಜಿಲ್ಲೆಯಲ್ಲಿ ಸಂಸದರು 10ವರ್ಷ ಆಡಳಿತ ಮಾಡಿದರೂ ಜಿಲ್ಲೆ ಹೇಳಿಕೊಳ್ಳುವ ಅಭಿವೃದ್ದಿ ಕಂಡಿಲ್ಲ, ಜಿಲ್ಲೆಗೆ ಇನ್ನೂ ಹೆಚ್ಚಿನ ಅಭಿವೃದ್ದಿ ಮಾಡಬಹುದಿತ್ತು. ಮೈತ್ರಿ ಧರ್ಮದಂತೆ, ಕಾಂಗ್ರೆಸ್, ಜೆ,ಡಿ.ಎಸ್ ಅಭ್ಯರ್ಥಿಯಾಗಿ ಡಿಆರ್ ಪಾಟೀಲ ಅವರನ್ನು ಕಣಕ್ಕಿಳಿಸಿದ್ದು, ನಾವು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಪ್ರವಾಸಮಾಡಿ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಬೆಂಬಲಿಸುವಂತೆ ಕೋರಿದ್ದು ಜಿಲ್ಲೆಯ ಎಲ್ಲೆಡೆ ಬದಲಾವಣೆ ಕೇಳಿ ಬರುತ್ತಿದೆ. ಕಾಂಗ್ರೆಸ್ ಪರವಾದ ಅಲೆ ಎದ್ದಿದೆ. ಡಿಆರ್ ಪಾಟೀಲ ಗೆಲುವು ನಿಶ್ಚಿತ ಎಂದು ಜೆ,ಡಿ.ಎಸ್ ರಾಜ್ಯ ಉಪಾಧ್ಯಷ ಕೆ ಎಸ್ ಸಿದ್ದಬಸಪ್ಪ ಯಾದವ್ ಹೇಳಿದರು.

      ಸುದ್ದಿಗೋಷ್ಠಿಯಲ್ಲಿ, ಅಬ್ದುಲ್ ಖಾದರ್‍ಸಾಬ್ ಕುದುರಿಹಾಳ, ಶೇಕಪ್ಪ ನರಸಣ್ಣನವರ, ಹಾಲೇಶ ಹಾಲಣ್ಣನವರ, ಮಾಲತೇಶ ಮಡಿವಾಳ, ರಜಾಕ ಕೊಕ್ಕರಗೊಂದಿ ಹಾಗೂ ಅನೇಕರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

 

Recent Articles

spot_img

Related Stories

Share via
Copy link