ಬಳ್ಳಾರಿ
ಬಳ್ಳಾರಿಯ ಜನರ ಭಾವನೆ ಮತ್ತು ಆಶೋತ್ತರಗಳನ್ನು ಅರಿತು ಸಾಮಾಜಿಕ ಸಮಾನತೆ ಹಾಗೂ ಸಂವಿಧಾನದ ಆಶಯದಂತೆ ಜನರ ನೈಜ ಜೀವನಕ್ಕೆ ಭಂಗ ಬಾರದಂತೆ ಕೆಲಸ ಮಾಡಲು
ನಮಗೆ ಒಂದೇ ಒಂದು ಸಾರಿ ನಿಮ್ಮ ಸೇವೆಗೆ ಅನುವು ಮಾಡಿಕೊಡಿ ಎಂದು ಪಿ ಡಿ ರಾಮ ನಾಯಕ್ ಅವರ ಪರವಾಗಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷ ಡಾ.ಆರ್ ಮೋಹನ್ ರಾಜ್ ಸುದ್ದಿಗೋಷ್ಟಿ ಮೂಲಕ ಮತಯಾಚನೆ ಮಾಡಿದರು.
ನಗರದ ಮಯೂರ ಹೋಟೆಲ್ ನಲ್ಲಿ ಪತ್ರಿಕಾ ಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿದ ಅವರು ನಮ್ಮ ಸಂವಿಧಾನ ಸತ್ತವರ ಬಗ್ಗೆ ಬರೆದ ಚರಿತ್ರೆಯಲ್ಲ ಅದು ಜನರ ಬದುಕು ಕಟ್ಟುವ ಮಹಾನ್ ಗ್ರಂಥ,ಕೋಟಿ ಇದ್ದರೂ ನಿನಗೆ ಕೈ ಮುಗಿದು ವೋಟ್ ಕೇಳುತ್ತಾರೆ, ಎಂದರೆ ಆ ವೋಟಿಗೆ ಬೆಲೆ ಕಟ್ಟಲಾಗದು,ಅದಕ್ಕಾಗಿ ತಮ್ಮ ಅಮೂಲ್ಯವಾದ ಮತವನ್ನು ಸಂವಿಧಾನ ರಕ್ಷಣೆ ಗಾಗಿ ಆರ್ ಪಿ ಐ (ಕೆ)ಪಕ್ಷದ ತನ್ನ ಗುರುತರವಾದ ಕಪ್ ಮತ್ತು ಸಾಸರ್ ಗೆ ನೀಡಿ ಆಶೀರ್ವದಿಸಬೇಕೆಂದು ಮಾದ್ಯಮದ ಮುಖಾಂತರ ಮತದಾರರಲ್ಲಿ ಮನವಿ ಮಾಡಿಕೊಂಡರು.
ಬಾಬಾ ಸಾಹೇಬ್ ಅಂಬೇಡ್ಕರ್ ಸಂವಿಧಾನದ ಭಿಕ್ಷೆ ಯಿಂದ ಇವತ್ತು ದೇಶವನ್ನು ಆಳಿದ ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಒಂದು ಹೇಳಿಕೆ ಯನ್ನು ನೀಡಿ ಈಗ ಸಂವಿಧಾನ ಬದಲಾವಣೆ ಮಾಡುತ್ತೇವೆ, ಎಂಬ ಹೇಳಿಕೆಗಳು ನೀಡುತ್ತಿರುವ ಅನಂತ್ ಕುಮಾರ್ ಮತ್ತು ನಿನ್ನೆ ಮೊನ್ನೆ ಬಿಜೆಪಿ ಟಿಕೆಟ್ ಸಿಕ್ಕಿರುವ ತೇಜಸ್ವಿ ಸೂರ್ಯ ಇವರು ಅವರಾಡಿದ ಮಾತಲ್ಲ,ಇದು ಸ್ವತಃ ನರೇಂದ್ರ ಮೋದಿ ಮತ್ತು ಅಮಿತ್ ಷಾ ಒಪ್ಪಿಗೆಯ ಮೇರೆಗೆ ಇಂತ ಹೇಳಿಕೆಗಳು ನೀಡುತ್ತಾರೆ, ಎಂದು ಕಾರವಾಗಿ ನುಡಿದರು.
ಕಾಂಗ್ರೆಸ್ ಪಕ್ಷ 60 ವರ್ಷಗಳ ಕಾಲ ದೇಶವನ್ನಾಳಿದ ಪಕ್ಷ ಆದರೆ ದಲಿತರ, ಹಿಂದುಳಿದವರ,ಮತ್ತು ಅಲ್ಪ ಸಂಖ್ಯಾತರ ವೋಟ್ ಬ್ಯಾಂಕ್ ಮಾಡಿಕೊಂಡು ದಲಿತರ ಬಗ್ಗೆ ನಮಗೆ ಕಾಳಜಿ ಇದೆ,ಎಂದು ಸುಳ್ಳು ಭರವಸೆಗಳು ನೀಡಿ ಮೊಸಮಾಡಿದೆ, ಎಂದು ದೂರಿದರು. ಮಾಜಿ ಲೋಕಸಭಾ ಸಂಸದರು ಪ್ರಕಾಶ್ ಅಂಬೇಡ್ಕರ್ ದುಂಡಾವರ್ತನೆ ತಿಳಿದು ಕಾಂಗ್ರೆಸ್ ನ್ನುಸೇರದೆ ಆರ್ ಪಿ ಐ ಪಕ್ಷ ಕಟ್ಟಿ ಬೆಳೆಸ ಬೇಕಾದ ಅನಿವಾರ್ಯ ಪರಿಸ್ಥಿತಿ ದೇಶದಲ್ಲಿ ಬಂದಿದೆ ಎಂದರು.
ಕಾಂಗ್ರೆಸ್ ಪಕ್ಷ ಮೊಟ್ಟಮೊದಲ ಬಾರಿಗೆ ಅಂಬೇಡ್ಕರ್ ರವರನ್ನು ಸೋಲಿಸಿದ ಪಕ್ಷ ಅದಕ್ಕಾಗಿ ಪ್ರಕಾಶ್ ಅಂಬೇಡ್ಕರ್ ಅವರ ಮೊಮ್ಮಗ ಕಾಂಗ್ರೆಸ್ ಸಿದ್ಧಾಂತ ಒಪ್ಪಿಕೊಂಡಿಲ್ಲ,ಯಾವುದೇ ಆಯೋಗ ARTICLE
40 ಮತ್ತು 340 1951 ರಲ್ಲಿ ಕಾಕ ಕಲೇಕರ್ ವರದಿ ಮೀಸಲಾತಿಯ ಆಧಾರದ ಮೇಲೆ ನೀಡಿದೆ,ಮೀಸಲಾತಿ ಎನ್ನುವುದು ಮೊಟ್ಟಮೊದಲ ಬಾರಿಗೆ ಶಾವು ಮಹಾರಾಜರು ದಲಿತರ ಉದ್ಧಾರಕ್ಕಾಗಿ ನಾಂದಿಯಾಯಿತು.
ಬಳ್ಳಾರಿಯ ಜನರು ನೆಮ್ಮದಿಯಿಂದ ಇವತ್ತು ಬದುಕನ್ನು ಸಾಗಿಸಿದೆ ಎಂದರೆ ಸುಪ್ರೀಂ ಕೋರ್ಟ್ ಲೋಕ ಯುಕ್ತ ಪ್ರಾಮಾಣಿಕ ಪ್ರಯತ್ನ ದಿಂದ ವಾತಾವರಣ ನಿರ್ಮಿಸಲು ಸಾಧ್ಯವಾಯಿತು, ಹೀಗಾಗಿ ಸಾಮಾಜಿಕ ಬದ್ಧತೆಯನ್ನು ಆರ್ ಪಿ ಐ ಹೊಂದಿರುವ ಪಕ್ಷ ಅದಕ್ಕಾಗಿ ನಮ್ಮನ್ನು ಬೆಂಬಲಿಸಿ ಎಂದು ಜಿಲ್ಲೆಯ ಜನರಿಗೆ ಮನವಿ ಮತ್ತು ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಅಭ್ಯರ್ಥಿ ಪಿ.ಡಿ.ರಾಮ ನಾಯಕ್, ಜಿಲ್ಲಾ ಅದ್ಯಕ್ಷ ಕಪ್ಪಗಲ್ ಓಂಕಾರಪ್ಪ,ಮಂಜುನಾಥ, ಶ್ರೀನಿವಾಸ್, ಮತ್ತಿತರರು ಭಾಗವಹಿಸಿದ್ದರು.