ಮೋದಿ ಸುಳ್ಳು ಹೇಳಿಕೊಂಡು ತಿರುಗಿದ್ದೇ ದೊಡ್ಡ ಸಾಧನೆ : ಶಾಂತವೀರನಾಯ್ಕ್.

ಹೊಸಪೇಟೆ :

        ಪ್ರಧಾನಿ ನರೇಂದ್ರ ಮೋದಿಯವರು ಚುನಾವಣೆಗೆ ಮುಂಚೆ ಪ್ರತಿಯೊಬ್ಬರ ಖಾತೆಗೆ 15 ಲಕ್ಷ, ಕಪ್ಪುಹಣ ವಾಪಾಸ್, ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇನೆ ಎಂದು ಹೇಳಿ ತಮ್ಮ 5 ವರ್ಷದ ಅವಧಿಯಲ್ಲಿ ಯಾವ ಒಂದು ಕೆಲಸ ಮಾಡಲಿಲ್ಲ. ಬದಲಿಗೆ ಬರೀ ಸುಳ್ಳು ಹೇಳಿಕೊಂಡು ತಿರುಗಿ ದೇಶದ ಜನರನ್ನು ದಿಕ್ಕು ತಪ್ಪಿಸಿದ್ದೇ ಇವರ ದೊಡ್ಡ ಸಾಧನೆ ಎಂದು ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಡಾ.ಶಾಂತವೀರನಾಯ್ಕ್ ವ್ಯಂಗ್ಯವಾಡಿದರು.

          ಇಲ್ಲಿನ ಖಾಸಗಿ ಹೋಟೆಲ್‍ನಲ್ಲಿ ಶುಕ್ರವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿಯವರು ಬರೀ ಭಾಷಣಕ್ಕೆ ಸೀಮಿತವಾಗಿದ್ದಾರೆ ವಿನಃ ಕೆಲಸ ಮಾಡುವವರಲ್ಲ. ಚುನಾವಣೆ ಮುಂಚೆ ದೇಶದ ಜನರಿಗೆ ಅನೇಕ ಪೊಳ್ಳು ಭರವಸೆ ನೀಡಿದ್ದರು. ಆದರೆ ಅವರ ಕೈಲಿ ಒಂದೇ ಒಂದು ಭರವಸೆ ಈಡೇರಿಸಲು ಸಾಧ್ಯವಾಗಿದೇ ದುರ್ಬಲ ಪ್ರಧಾನಿ ಎನಿಸಿಕೊಂಡಿದ್ದಾರೆ. ದೇಶದ ಜನ ಇವರನ್ನು ನಂಬಿ ಮೋಸ ಹೋದರು. ಆದರೆ ಈಗ ಅವರು ಏನೇ ಹೇಳಲಿ ಅವರ ಮಾತನ್ನು ಕೇಳಲು ಜನ ತಯಾರಿಲ್ಲ. ಅವರ ಬಂಡವಾಳ ಏನೆಂದು ದೇಶಕ್ಕೆ ಗೊತ್ತಾಗಿದೆ ಎಂದರು.

         ಮೋದಿಯವರ ಅವೈಜ್ಞಾನಿಕ ನಿರ್ಧಾರಗಳಿಂದಾಗಿ ನೋಟು ಅಮಾನ್ನಿಕರಣ ಮಾಡಿ, ಜಿಎಸ್‍ಟಿ ಜಾರಿಗೆ ತಂದು ದೇಶದ ಜನರನ್ನು ಬೀದಿ ತಂದು ನಿಲ್ಲಿಸಿದರು. ದೇಶದ ಆರ್ಥಿಕತೆ ಕನಿಷ್ಠ ಮಟ್ಟಕ್ಕೆ ಇಳಿದು ಲಕ್ಷಾಂತರ ಉದ್ಯೋಗಗಳು ನಷ್ಠವಾದವು. ಸಣ್ಣ ಸಣ್ಣ ಉದ್ದಿಮೆದಾರರು ತೀವ್ರ ಸಂಕಷ್ಟಕ್ಕೊಳಗಾದರು. ಯುವಕರಿಗೆ ಉದ್ಯೋಗ ಕೊಡಲಾಗದೇ ಎಲ್ಲಾ ರಂಗಗಳಲ್ಲೂ ವಿಫಲರಾಗಿದ್ದಾರೆ. ಇವರಿಗೆ ಯಾವುದೇ ಅಭಿವೃದ್ದಿ ಕಾಳಜಿ ಇಲ್ಲ. ದಲಿತರು, ಯುವಕರು, ರೈತರು, ಮಹಿಳೆಯರು ಸೇರಿದಂತೆ ಕಾರ್ಮಿಕ ವರ್ಗದವರೂ ಭ್ರಮನಿರಸನಗೊಂಡಿದ್ದಾರೆ. ಮೋದಿಯವರಿಗೆ ತಕ್ಕ ಪಾಟ ಕಲಿಸಲು ಸಜ್ಜಾಗಿದ್ದಾರೆ ಎಂದು ತಿಳಿಸಿದರು.

        ವಿಶ್ವ ಆರ್ಥಿಕ ಕುಸಿತ ಉಂಟಾದಾಗ ವಿಶ್ವದ ದೊಡ್ಡಣ್ಣ ಅಮೇರಿಕವೇ ಆರ್ಥಿಕ ಮುಗ್ಗಟ್ಟಿಗೆ ತತ್ತರಿಸಿ ಲಕ್ಷಾಂತರ ಜನ ಉದ್ಯೋಗಗಳನ್ನು ಕಳೆದುಕೊಳ್ಳಬೇಕಾಯಿತು. ಇಂಥ ಸಂಧರ್ಭದಲ್ಲಿ ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರ ದಿಟ್ಟ ಆಡಳಿತ ಕ್ರಮದಿಂದ ಭಾರತ ಆರ್ಥಿಕ ಸಂಕಷ್ಟಕ್ಕೆ ಒಳಗಾಗದೇ ವಿಶ್ವದಲ್ಲೇ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿತು. ಅಮೇರಿಕವು ಖುದ್ದು ಭಾರತಕ್ಕೆ ಬಂದು ಮಾಜಿ ಪ್ರಧಾನಿ ಮನಮೋಹನಸಿಂಗ್ ಅವರ ಸಲಹೆಗಳನ್ನು ಸ್ವೀಕರಿಸಿ ತನ್ನ ದೇಶದಲ್ಲಿ ಅಳವಡಿಸಿಕೊಂಡಿತು ಎಂದು ಶ್ಲಾಘಿಸಿದರು.

         ಅಸಂಘಟಿತ ಕಾರ್ಮಿಕರ ಬದುಕಿಗೆ ಭದ್ರತೆ ಒದಗಿಸುವಂತೆ ಪ್ರಧಾನಿ ಮೋದಿಯವರನ್ನು ಒತ್ತಾಯಿಸಿ ಜಂತರ ಮಂತರನಲ್ಲಿ ಹೋರಾಟ ನಡೆಸಿದೆವು. ಆದರೆ ಅವರು ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಲಿಲ್ಲ. ಕಾರ್ಮಿಕರ ಬದುಕು ಹಸನಾಗಬೇಕು. ಅವರಿಗೂ ಸರ್ಕಾರಿ ನೌಕರರಂತೆ ನಿವೃತ್ತಿ ಪಿಂಚಣಿ ನೀಡುವಂತೆ ನಮ್ಮ ಸಂಘಟನೆಯಿಂದ ಎಐಸಿಸಿ ಅಧ್ಯಕ್ಷ ರಾಹುಲಗಾಂಧಿಗೆ ಮನವಿ ಸಲ್ಲಿಸಿದಾದ ಅವರು ನಮ್ಮ ಮನವಿಗೆ ಸ್ಪಂದಿಸಿ 5 ಕೋಟಿ ಕುಟುಂಬಗಳ 25 ಕೋಟಿ ಫಲಾನುಭವಿಗಳಿಗೆ ಮಾಸಿ 6 ಸಾವಿರ ವಾರ್ಷಿಕ 72 ಸಾವಿರ ನೀಡಲು ತಮ್ಮ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡಿದ್ದಾರೆ ಎಂದರು.

         ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಜನನಾಯಕರಾಗಿದ್ದಾರೆ. ಒಳ್ಳೆಯ ವಾಗ್ಮಿಯೂ ಆಗಿದ್ದಾರೆ. ಜನಪರ ಕಾಳಜಿಯುಳ್ಳವರಾಗಿದ್ದಾರೆ. ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಶ್ರಮಿಸಲಿದ್ದಾರೆ. ದೇಶದಲ್ಲಿ ಮೋದಿ ಹವಾ ಕುಸಿದು ರಾಹುಲ್‍ಗಾಂಧಿಯವರ ಹವಾ ಏಳುತ್ತಿದೆ. ಬಲಿಷ್ಠ, ಅಭಿವೃದ್ದಿಗಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.

         ಸುದ್ದಿಗೋಷ್ಠಿಯಲ್ಲಿ ಬಳ್ಳಾರಿ ಅಸಂಘಟಿತ ಕಾರ್ಮಿಕ ಕಾಂಗ್ರಸ್ ಸಮಿತಿಯ ಜಿಲ್ಲಾಧ್ಯಕ್ಷ ವಿ.ಸೋಮಪ್ಪ, ಉಪಾಧ್ಯಕ್ಷ ಸಣ್ಣಮಾರೆಪ್ಪ, ಕೊಪ್ಪಳ ಜಿಲ್ಲಾ ಕಾರ್ಯಧ್ಯಕ್ಷ ಕಾಳಪ್ಪ ರಾಥೋಡ್, ಪದಾಧಿಕಾರಿಗಳಾದ ಗೀತಾ, ನಾಗವೇಣಿ, ರಾಮಜೀನಾಯ್ಕ್, ಹಾಗು ಮುಖಂಡ ಗುಜ್ಜಲ ನಾಗರಾಜ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link