ಮೋದಿ ಚೌಕಿದಾರನಲ್ಲ, ಶೋಕಿದಾರ: ಆಂಜನೇಯ

ಹಾವೇರಿ:

      ಪ್ರಧಾನಿ ಮೋದಿ ಚೌಕಿದಾರನಲ್ಲ, ಶೋಕಿದಾರ. ಮೇಲಾಗಿ, ಪ್ರಧಾನಿ ಅಂಬೇಡ್ಕರ್, ದಲಿತ ವಿರೋಧಿ ಎಂದು ಮಾಜಿ ಸಚಿವ ಎಚ್.ಆಂಜನೇಯ ಪ್ರಧಾನಿ ವಿರುದ್ಧಿ ಟೀಕಾಪ್ರಹಾರ ಮಾಡಿದರು. ನಗರದ ಕಾಂಗ್ರೆಸ್ ಪಕ್ಷದ ಕಛೇರಿಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

       ಮೋದಿ ಚುನಾವಣೆ ಪ್ರಚಾರದ ವೇಳೆ, ನಾನೋಬ್ಬ ಚೌಕಿದಾರ, ಈ ದೇಶವನ್ನು ಕಾವಲು ಕಾಯುವವನು ಎಂದು ಹೇಳಿಕೊಳ್ಳುತ್ತಾರೆ. ಹಾಗಾದರೆ, ಆ ಚೌಕಿದಾರನ ಅಧಿಕಾರ ಅವಧಿಯಲ್ಲಿ ಪಾಕಿಸ್ತಾನದ ಗಡಿ ದಾಟಿ, 350 ಕೆ.ಜಿ. ಆರ್ ಡಿ ಎಕ್ಸ್ ಹೇಗೆ ಭಾರತಕ್ಕೆ ಬಂತು, 44 ಸೈನಿಕರು ಚೌಕಿದಾರನ ಕಾವಲಿನಲ್ಲಿ ಹೇಗೆ ಜೀವ ಬಿಡಬೇಕಾಯಿತು. ಈ ಎಲ್ಲ ಅಂಶಗಳಿಂದ ಜನರಿಗೆ ಅರ್ಥವಾಗಿದೆ. ಮೋದಿ ಚೌಕಿದಾರನಲ್ಲ, ಅವರೊಬ್ಬ ಶೋಕಿದಾರ ಎಂದು ತಿಳಿಸಿದರು.

       ದೇಶದಲ್ಲಿ ಅಧಿಕಾರಕ್ಕೆ ಬಂದಿರುವ ಮೋದಿ, ಅಂಬೇಡ್ಕರ್ ಅವರ ವಿರೋಧಿಯಾಗಿದ್ದಾರೆ. ಸಂವಿಧಾನದ ವಿರೋಧಿಯಾಗಿದ್ದಾರೆ. ಈ ದೇಶದ ಬಹುಸಂಖ್ಯಾತರಾಗಿರುವ ದಲಿತ ವಿರೋಧಿಯಾಗಿದ್ದಾರೆ. ಬಿಜೆಪಿ ದೇಶದಲ್ಲಿ ಹಾಗೂ ಬಿಜೆಪಿ ಆಳ್ವಿಕೆ ಮಾಡುತ್ತಿರುವ ರಾಜ್ಯದಲ್ಲಿ ದಲಿತರನ್ನು ಪ್ರಾಣಿಗಳಂತೆ ನಡೆಸಿಕೊಳ್ಳುತ್ತಿದ್ದಾರೆ. ನಿತ್ಯ ದಲಿತರ ಮೇಲೆ, ಹಲ್ಲೆ, ಅತ್ಯಾಚಾರದಂತ ಘಟನೆಗಳು ನಡೆಯುತ್ತಿದ್ದರೂ, ಯಾವೋಬ್ಬ ಬಿಜೆಪಿ ನಾಯಕರು ತುಟಿ ಪಿಟಕ ಎನ್ನುತ್ತಿಲ್ಲ. ಇದರಿಂದ ದಲಿತರ ಅರ್ಥ ಮಾಡಿಕೊಳ್ಳಬೇಕು. ಮೋದಿ ಹಾಗೂ ಬಿಜೆಪಿ ಸಂವಿಧಾನದ ವಿರೋಧಿ ಎಂದು ತಿಳಿಸಿದರು.

       ಪ್ರಧಾನಿ ಮೋದಿ ಅವರು, ನಿತ್ಯ ಒಂದು ಹೊತ್ತಿನ ಊಟಕ್ಕೆ ಸಾವಿರಾರೂ ಖರ್ಚು ಮಾಡುತ್ತಿದ್ದಾರೆ. ಅವರು ತಮ್ಮ ಮೈಗೆ ತೊಟ್ಟುಕೊಳ್ಳುವ ಉಡುಪು ಲಕ್ಷಾಂತರದ್ದಾಗಿದೆ. ಇನ್ನುವ ಅವರ ಅವರ ಮೇಕಪ್ ಅಂತೂ ಲೆಕ್ಕಕ್ಕೆ ಸಿಗುತ್ತಿಲ್ಲ. ನಿತ್ಯ ನಾಲ್ಕೈದು ಬಾರಿ ಬಟ್ಟೆ ಬದಲಾಯಿಸುವ ಮೋದಿ ಒಬ್ಬ ಬಡ ದೇಶದ ಜನರನ ಆಳುವ ಶ್ರೀಮಂತ ಪ್ರಧಾನಿಯಾಗಿದ್ದಾರೆ ಎಂದು ಪ್ರಧಾನಿಯ ನಡುವಳಿಕೆಯ ಬಗ್ಗೆ ಲೇವಡಿ ಮಾಡಿದರು.

       ಸಾರ್ವತ್ರಿಕ ಚುನಾವಣೆಯಲ್ಲಿ ಸೋಲುವ ಭಯದಿಂದ ಮೋದಿ, ದೇಶದ ಭದ್ರತೆ, ಸೈನ್ಯದ ವಿಷಯಗಳನ್ನು ಮುಂದಿಟ್ಟುಕೊಂಡು ಸುಳ್ಳು ಹೇಳಿಕೊಂಡು ಜನರ ಗಮನ ಬೇರೆಡೆ ಸೇಳೆಯುವಂತ ಕೆಲಸಕ್ಕೆ ಕೈ ಹಾಕಿದ್ದಾರೆ. ಕಾಂಗ್ರೆಸ್ ದೇಶದ ಭದ್ರತೆ ವಿಚಾರದಲ್ಲಿ ಎಂದೂ ರಾಜಿ ಮಾಡಿಕೊಂಡಿಲ್ಲ. ದೇಶದಲ್ಲಿ ಭಯೋತ್ಪಾದಕ ದಾಳಿ, ನಡೆದಿರುವದು ಬಿಜೆಪಿ ಅಧಿಕಾರದಲ್ಲಿ ಎಂಬುದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಸ್ವಾತಂತ್ರ್ಯ ಭಾರತದಲ್ಲಿ ನಡೆದ ಎಲ್ಲ ಯುದ್ಧಗಳಲ್ಲಿ ಭಾರತ ಸೈನ್ಯ ಜಯಶಾಲಿಯಾಗಿದೆ. ಬರಿ ಮೋದಿ ಆಳ್ವಿಕೆಯಲ್ಲಿ ಮಾತ್ರವಲ್ಲ ಎಂದು ಬಿಜೆಪಿಗೆ ಟಾಂಗ್ ನೀಡಿದರು.

        ಈ ಹಿಂದಿನ ಯುಪಿಎ ಅಧಿಕಾರದ ಅವಧಿಯಲ್ಲಿ ಕಾಂಗ್ರೆಸ್ ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತರುವ ಮೂಲಕ ಬಡವರನ್ನು ಗುಳೆ ಹೋಗುವದನ್ನು ನಿಲ್ಲಿಸಿತು. ಶಿಕ್ಷಣ ಹಕ್ಕು ಕಾಯಿದೆ ಜಾರಿಗೆ ತರುವ ಮೂಲಕ ಬಡ ಮಕ್ಕಳಿಗೆ ಶಿಕ್ಷಣಕ್ಕೆ ಆಧ್ಯತೆ ನೀಡಿತು. ಮಾಹಿತಿ ಹಕ್ಕು ಕಾಯಿದೆ ಜಾರಿಗೆ ತಂದು ಆಡಳಿತದಲ್ಲಿ ಪಾರದರ್ಶಕತೆ ತರಲು ಮುಂದಾಯಿತು. ಆದರೆ, ಮೋದಿ ಅವರು, ಐದು ವರ್ಷದ ಅಧಿಕಾರದ ಅವಧಿಯಲ್ಲಿ ದೇಶದ ಜನರಿಗೆ ಯಾವ ಯೋಜನೆ ಜಾರಿಗೆ ತಂದಿದ್ದಾರೆ ಎಂದು ತಿಳಿಸಲಿ. ಮೋದಿ ಐದು ವರ್ಷದಲ್ಲಿ ಮೋದಿ ಏಷ್ಟು ಬಾರಿ, ಸಂಸತ್ತಿಗೆ ಹಾಜರಾಗಿ ಮಾತನಾಡಿದ್ದಾರೆ ಎಂದು ಜನರಿಗೆ ತಿಳಿಸಲಿ ಎಂದು ತಿಳಿಸಿದರು.

       ಕಳೆದ ಐದು ವರ್ಷಗಳ ಹಿಂದೆ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸಂಪುಟ 12 ನೇ ಶತಮಾನದ ಅನುಭವ ಮಂಟಪದಂತೆ ಇತ್ತು. ಅವರ ಅಧಿಕಾರದ ಅವಧಿಯಲ್ಲಿ ದಲಿತರಿಗೆ, ಪರಿಶಿಷ್ಟರಿಗೆ ಸಾಕಷ್ಟು ಅನುದಾನ ನೀಡುವ ಮೂಲಕ ಅವರ ಏಳಿಗೆಗೆ ಶ್ರಮಿಸಿದರು. ಐದು ವರ್ಷದ ಸಿದ್ಧರಾಮಯ್ಯ ಅವರ ಆಡಳಿತಾವಧಿ ಬಡವರ ಪಾಲಿನ ಸುವರ್ಣ ಯುಗ ಎಂದು ಎಚ್.ಆಂಜನೇಯ ಬಣ್ಣಿಸಿದರು.

       ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ, ಕೆಪಿಸಿಸಿ ಎಸ್.ಸಿ.ಘಟಕದ ರಾಜ್ಯಾಧ್ಯಕ್ಷ ಎಫ್.ಎಸ್.ಜಕ್ಕಣ್ಣನವರ, ಬಸವರಾಜ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಂ.ಹಿರೇಮಠ, ಸಂಜೀವಕುಮಾರ ನೀರಲಗಿ, ಮುಖಂಡರಾದ ಉಡಚಪ್ಪ ಮಾಳಗಿ, ಜಗದೀಶ ಬಸೇಗಣ್ಣಿ, ಹೊನ್ನಪ್ಪ ತಗಡಿನಮನಿ, ಎಸ್.ಜಿ.ಹೊನ್ನಪ್ಪನವರ, ನಾಗರಾಜ ಮಾಳಗಿ, ಗಣೇಶ ಪೂಜಾರ, ರಮೇಶ ಆನವಟ್ಟಿ, ಮಾಲತೇಶ ಯಲ್ಲಾಪುರ ಸೇರಿದಂತೆ ಮುಂತಾದವರು ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link