ಹರಿಹರದ ವಿವಿಧ ಬಡಾವಣೆಗಳಲ್ಲಿ ಬೃಹತ್ ಚುನಾವಣಾ ಪ್ರಚಾರ : ಬಿ.ಪಿ.ಹರೀಶ್ ಭಾಗಿ

ಹರಿಹರ :

      ಮಾಜಿ ಶಾಸಕ ಬಿ.ಪಿ.ಹರೀಶ್ ನೇತೃತ್ವದಲ್ಲಿ ಅವರು ಸಾವಿರಾರೂ ಕಾರ್ಯಕರ್ತ ರೊಂದಿಗೆ ನಗರದ ವಿವಿಧ ಬಡಾವಣೆಗಳಲ್ಲಿ ಬಿಜೆಪಿ ಲೋಕಸಭಾ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಪರವಾಗಿ ಬೃಹತ್ ಪ್ರಚಾರ ನಡೆಸಿದರು.ನಗರದ ರೈಲ್ವೆ ಕಾಲೊನಿಯಿಂದ ಹೊರಟ ಬೃಹತ್ ಪ್ರಚಾರ ಮೆರವಣಿಗೆಯು ಬಾತಿ ಶಿವನಾಗಪ್ಪ ಕಾಂಪೌಂಡ್, ಜೈಭೀಮನಗರ ಹಳೇ ಪಿ.ಬಿ. ರಸ್ತೆ ಮೂಲಕ ಪ್ರಚಾರ ನಡೆಸಿದರು.

      ಈ ಬೃಹತ್ ಪ್ರಚಾರ ಮೆರವಣಿಗೆಯಲ್ಲಿ ಬಿ.ಪಿ.ಹರೀಶ್ ರೊಂದಿಗೆ ಬಾತಿ ಚಂದ್ರಶೇಖರ್,ಮಹಿಳಾ ಜಿಲ್ಲಾ ಉಪಾಧ್ಯಕ್ಷೆ ಪ್ರೇಮಿಳಾ ನಲ್ಲೂರು, ಎಚ್. ಶಿವಪ್ಪ,ಮೋತ್ಯಾ ನಾಯ್ಕ್, ವಕೀಲ ಆನಂದ್, ಹೆಚ್.ಸಿ. ಕೀರ್ತಿಕುಮಾರ್, ಅಜಿತ್ ಸಾವಂತ್, ಮಾಲತೇಶ್ ಭಂಡಾರಿ, ಮಂಜಾನಾಯ್ಕ್, ತುಳಜಪ್ಪ ಭೂತೆ, ಚಿದಾನಂದ್, ಹಾಗೂ ಇನ್ನೂ ಅನೇಕ ಮುಖಂಡರುಗಳು ಪ್ರಚಾರದಲ್ಲಿ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link