ಬೆಂಗಳೂರು ವಿಶ್ವವಿದ್ಯಾನಿಲಯದ 54 ನೇ ಘಟಿಕೋತ್ಸವ

ಬೆಂಗಳೂರು

      ಬೆಂಗಳೂರು ವಿಶ್ವವಿದ್ಯಾಲಯದ 54ನೇ ವಾರ್ಷಿಕ ಘಟಿಕೋತ್ಸವ ಸಮಾರಂಭ ಇದೇ ತಿಂಗಳ 22ರಂದು ನಡೆಯಲಿದ್ದು ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ. ಸಿ. ಎನ್. ಮಂಜುನಾಥ್ , ಮಿಲನ್ ವೈದ್ಯಕೀಯ ನಿರ್ದೇಶಕಿ ಡಾ.ಕಾಮಿನಿ ರಾವ್, ಸಮಾಜ ಸೇವಕ ಎಸ್.ವಿ.ವಿ. ಸುಬ್ರಮಣ್ಯ ಗುಪ್ತ ಅವರಿಗೆ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಗುವುದು.

       ಮೂವರು ಗಣ್ಯರಿಗೆ ಡಾಕ್ಟರೇಟ್ ಗೌರವ ನೀಡುವುದರ ಜೊತೆಗೆ 65,039 ಸಾವಿರ ವಿದ್ಯಾರ್ಥಿಗಳು ಪದವಿ ಸ್ವೀಕರಿಸಲಿದ್ದಾರೆ.

         ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ಸುದ್ದಿಗೋಷ್ಠಿ ಕುಲಪತಿ ಕೆ.ಆರ್. ವೇಣುಗೋಪಾಲ್ ಅವರು ತಿಳಿಸಿದರು.
ವಿವಿಧ ವಿಷಯಗಳಲ್ಲಿ ಒಟ್ಟು 166 ವಿದ್ಯಾರ್ಥಿಗಳು ಪಿಹೆಚ್‍ಡಿ ಪದವಿಗಳನ್ನು ಪಡೆಯಲಿದ್ದಾರೆ 328 ಚಿನ್ನದ ಪದಕಗಳಿಗೆ 216 ಅಭ್ಯರ್ಥಿಗಳು ಭಾಜನರಾಗಿದ್ದಾರೆ. ಮೂವರು ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಾದ ಆಚಾರ್ಯ ಇನಸ್ಟಿಟ್ಯೂಟ್ ಆಫ್ ಗ್ರಾಜುಯೇಟ್ ಸ್ಟಡೀಸ್ ನ ಕೆ.ಪಿ.ಮಂಜು, ಗಣಿತ ಶಾಸ್ತ್ರ ವಿಭಾಗದ ಮನೋಹರ, ಸಂವಹನ ವಿಭಾಗದ ಮುನಿರಾಜ ಎಂಬುವರಿಗೆ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಚಿನ್ನದ ಪದಕಗಳಿಗೆ ಅರ್ಹರಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಚಿನ್ನದ ಪದಕ:

        ಕೆ.ವಿ.ವಿನುತ ಅವರಿಗೆ ರಸಾಯನಶಾಸ್ತ್ರ ವಿಭಾಗದಲ್ಲಿ 7 ಚಿನ್ನದ ಪದಕಗಳು, ವರಲಕ್ಷ್ಮೀ ಆರ್.ಬಿಎಸ್ಸಿ ವಿಭಾಗ-4, ಶಂಕರ ಭಾಷ್ಯಂ ಬಿಕಾಂ-5, ಎನ್.ಸೌಮ್ಯಾ ಬಿಇಡಿ ವಿಭಾಗ-3, ವರ್ಷಿತಾ ವಿ- ಬಿ.ಇ.ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ- 2 ಅವರಿಗೆ ಚಿನ್ನದ ಪದಕ ನೀಡಲಾಗುವುದು ಎಂದು ಪ್ರಕಟಿಸಿದರು.

        ಜ್ಞಾನ ಜ್ಯೋತಿ ಸಭಾಂಗಣದಲ್ಲಿ ನಡೆಯುವ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಪಾಲ್ಗೊಳ್ಳಲಿದ್ದಾರೆ ರಾಜ್ಯಪಾಲ ವಜುಭಾಯಿ ವಾಲಾ ಸೇರಿದಂತೆ ಪ್ರಮುಖ ಗಣ್ಯರು ಭಾಗಿಯಾಗುವರು ಎಂದರು.

ಚಿನ್ನ ಮೌಲ್ಯ 6 ಸಾವಿರ ರೂ..!

       ತಲಾ ಚಿನ್ನದ ಪದಕಗಳಲ್ಲಿ 20 ಗ್ರಾಂ ಬೆಳ್ಳಿಯ ಬೇಸ್ ನ ಮೇಲೆ 1.3 ಗ್ರಾಂ ಚಿನ್ನದ ಪದಕವನ್ನು ಜೋಡಿಸಲಾಗಿದೆ. ಆದರೆ, ಈ ಹಿಂದಿನ ವರ್ಷಗಳಲ್ಲಿ ಚಿನ್ನದ ಲೇಪನವುಳ್ಳ ಮಾತ್ರ ನೀಡಲಾಗುತ್ತಿತ್ತು.ಇನ್ನೂ ಇದರ ಮೌಲ್ಯ 6 ಸಾವಿರ ರೂಗಳಾಗಿದೆ ಎಂದರು.

     ಈ ಸಂದರ್ಭದಲ್ಲಿ ಬೆಂ.ವಿವಿಯ ಕುಲಸಚಿವ ಪೆÇ್ರ.ಸಿ.ಶಿವರಾಜು, (ಮೌಲ್ಯ ಮಾಪನ), ಕುಲ ಸಚಿವ ಪೆÇ್ರ.ಬಿ.ಕೆ.ರವಿ ಸೇರಿದಂತೆ ಪ್ರಮುಖರು ಹಾಜರಿದ್ದರು.

ರಹಸ್ಯ ಕಾಪಾಡಿದ ಕುಲಸಚಿವ

     ಈ ಬಾರಿ ಗೌರವ ಡಾಕ್ಟರೇಟ್ ಪ್ರದಾನ ಸಂಬಂಧ ಒಟ್ಟು 11 ಅರ್ಜಿಗಳ ಬಂದಿದ್ದವು.ಇದರಲ್ಲಿ, ಮೂವರು ಗಣ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ವೇಣುಗೋಪಾಲ್ ಹೇಳಿದರು.

     ಆದರೆ, ಉಳಿದವರನ್ನು ಏಕೆ ಪರಿಗಣಿಸಿಲ್ಲ. ಯಾರಾರ ಹೆಸರು ಇದ್ದವು. ಇನ್ನೂ ಹಲವು ಮಂಂದಿಗೆ ಈಗಾಗಲೇ ಗೌರವ ಡಾಕ್ಟರೇಟ್ ಬಂದಿದೆ. ಅರ್ಜಿ ಸಲ್ಲಿಸಿದ ಗಣ್ಯರು ಬಹಿರಂಗ ಪಡಿಸಿ ಎಂದು ಪತ್ರಕರ್ತರು ಕೇಳಿದ ಪ್ರಶ್ನೆ ಗಳಿಗೆ ವೇಣುಗೋಪಾಲ್ ಉತ್ತರಿಸದೆ, ತಡವರಿಸಿದರು. ಬಳಿಕ, ಸೋಮವಾರ ಈ ಬಗ್ಗೆ ಮಾತನಾಡುತ್ತೇನೆ ಎಂದು ನಗುತ್ತಾ ಹೊರಟು ಹೋದ ಪ್ರಸಂಗ ಜರುಗಿತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link