ಐಟಿಗೆ ದಾಳಿಯಲ್ಲಿ ಕಾಂಗ್ರೆಸ್‌ ಮುಖಂಡರೇ ಟಾರ್ಗೆಟ್‌: ಸಚಿವ ಡಿ.ಕೆ ಶಿವಕುಮಾರ್​

ಬಳ್ಳಾರಿ

      ಚುನಾವಣೆ ಸಮೀಸುತ್ತಿದ್ದಂತೆ ಐಟಿ ಇಲಾಖೆ ಮೂಲಕ ಸೆಲೆಕ್ಟಿವ್ ರೈಡ್ ಆಗುತ್ತಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ ಶಿವಕುಮಾರ್​ ಅಸಮಾಧಾನ ವ್ಯಕ್ತಪಡಿಸಿದರು.ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಸಚಿವ ಡಿ.ಕೆ. ಶಿವಕುಮಾರ್​ ಮಾತುಕತೆಬಿಜೆಪಿ ಶಾಸಕರು ಹಾಗೂ ಮುಖಂಡರನ್ನು ಟ್ರ್ಯಾಪ್ ಮಾಡುವ ಅವಕಾಶ ನಮಗಿತ್ತು.

       ನಾವು ಆ ಕೆಲಸವನ್ನು ಮಾಡಿಲ್ಲ. ಎಲ್ಲಿ ಐಟಿ ಇಲಾಖೆಯಿಂದ ದಾಳಿ ನಡೆಯಬೇಕೋ ಅಲ್ಲಿ ಆಗ್ತಿಲ್ಲ. ಈ ಮೂಲಕ ಆದಾಯ ತೆರಿಗೆ ಇಲಾಖೆಯನ್ನು ಕೇಂದ್ರ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದರು.’ಬಳ್ಳಾರಿ,ಶಿವಮೊಗ್ಗದಲ್ಲಿ ಗೆಲುವು ನಮ್ಮದೇ’:ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಗೆಲ್ತಾರೆ. ಬಳ್ಳಾರಿಯಲ್ಲಿ ನಮ್ಮ ಕರ್ತವ್ಯ ನಾವು ಮಾಡಿದ್ದೇವೆ. ಇನ್ನೂ ಐದು ವರ್ಷ ಕೆಲಸ ಮಾಡೋಕೆ ಅವಕಾಶ ಕೊಡಿ ಎಂದು ಮತದಾರರಲ್ಲಿ ಕೇಳಿಕೊಂಡಿದ್ದೇವೆ. ಕಳೆದ ಬಾರಿಗಿಂತಲೂ ಹೆಚ್ಚಿನ ಅಂತರದಲ್ಲಿ ಈ ಬಾರಿ ಗೆಲ್ಲಲಿದ್ದೇವೆ ಎಂದು ಡಿಕೆಶಿ ವಿಶ್ವಾಸ ವ್ಯಕ್ತಪಡಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link