ಹಗರಿಬೊಮ್ಮನಹಳ್ಳಿ:
ಬನದ ಹುಣ್ಣಿಮೆ ಹಾಗೂ ಹನುಮ ಜಯಂತಿಯ ನಿಮ್ಮಿತ್ತ ತಾಲೂಕಿನ ಬನ್ನಿಗೋಳ ಗ್ರಾಮದ ಶ್ರೀಆಂಜನೇಯ ಸ್ವಾಮಿಯ ರಥೋತ್ಸವ ಗ್ರಾಮದ ಹಾಗೂ ಸುತ್ತಲಿನ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶುಕ್ರವಾರ ಸಂಜೆ ವಿಜೃಂಭಣೆಯಿಂದ ಜರುಗಿತು.ಬೆಳ್ಳಿಯ ಆಭರಣಗಳಿಂದ ಹಾಗು ವಿವಿಧ ಹೂವುಗಳಿಂದ ಮೂರ್ತಿಯನ್ನು ಆಕರ್ಷಕವಾಗಿ ಅಲಂಕರಿಸಿದ್ದು ವಿಶೇಷವಾಗಿತ್ತು. ಗ್ರಾಮದ ಹಾಗೂ ಸುತ್ತಮುತ್ತಲಿನ ಸಾರ್ವಜನಿಕರು ಸ್ವಾಮಿಯ ದರ್ಶನ ಪಡೆದರು.
ತಳಿರು ತೋರಣಗಳಿಂದ ಹಾಗು ಬಾಳೆ ಗಿಡಗಳಿಂದ ಅಲಂಕೃತಗೊಳಿಸಲಾಗಿತ್ತು. ಬಳಿಕ ಉತ್ಸವ ಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ, ಶ್ರಿಆಂಜನೇಯ ಸ್ವಾಮಿಯ ನಾಮಾವಳಿ, ಹರ್ಷೊಧ್ಘಾರ ಜಯಗೋಷಣೆಯೊಂದಿಗೆ ಉತ್ಸವ ತೇರು ಮುಂದೆ ಚಲಿಸಿತು, ನಾನಾ ಮಂಗಳ ವಾದ್ಯಗಳ ಮೂಲಕ ಮೆರವಣಿಗೆಯಲ್ಲಿ ರಥವು ಗ್ರಾಮದ ಪ್ರಮುಖ ಬೀದಿಯಲ್ಲಿ ಪಾದಗಟ್ಟಿಯವರೆಗೂ ಸಂಚರಿಸಿ ಪುನ: ದೇವಸ್ಥಾನಕ್ಕೆ ಬಂದು ತಲುಪಿತು.
ವಿಸ್ಮಯ:
ಆಂಜನೇಯ ಸ್ವಾಮಿಯ ರಥೋತ್ಸವಕ್ಕೆ ಸಿದ್ದತೆ ನಡೆಯುತ್ತಿದ್ದಂತೆ ಒಂದು ವಿಸ್ಮಯಘಟನೆ ಜರುಗಿತು. ರಥದ ಗಾಲಿಗೆ ಸನ್ನೆ ಹಾಕುವ ಸಂದರ್ಭದಲ್ಲಿ ರಥವು ತನ್ನಷ್ಟಕ್ಕೆ ತಾನೇ 3 ಅಡಿ ಮುಂದೆ ಚಲಿಸಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು.
ಇದಕ್ಕೂ ಮುನ್ನ ನಡೆದ ಆಂಜನೇಯ ಸ್ವಾಮಿಯ ಪಟಾಕ್ಷಿ ಹರಾಜಿನಲ್ಲಿ ಬನ್ನಿಗೋಳದ ಅಳವುಂಡಿ ಬಸವರೆಡ್ಡಿ 65 ಸಾವಿರ ರೂ.ಗಳಿಗೆ ಪಡೆದುಕೊಂಡರು. ಗ್ರಾಮದ ಮುಖಂಡರಾದ ಮೈನಳ್ಳಿ ಕೊಟ್ರೇಶಪ್ಪ್, ಹ್ಯಾಟಿ ಆನಂದರೆಡ್ಡಿ, ಮಡಿವಾಳ ಹನುಮಂತಪ್ಪ, ಗುಡ್ಡದ ಗಿರಿಧರ, ಹಲಿಗೇರಿ ಅರ್ಜುನಪ್ಪ, ಮೂಲಿಮನಿ ರವಿರಸಾದ್, ಪೂಜಾರ ಉಮ್ಮಣ್ಣ ಪಾಲ್ಗೊಂಡಿದ್ದರು.