ತೆಕ್ಕಲಕೋಟೆ
ಪೊಲೀಸ್ ಠಾಣೆವ್ಯಾಪ್ತಿಯಲ್ಲಿ ಶಾಸಕರ ಚುನಾವಣೆ ವೇಳೆ ಉತ್ತಮ ಕಾರ್ಯ ನಿರ್ವಹಿಸಿ ಖಡಕ್ ಪೊಲೀಸ್ ಅಧಿಕಾರಿ ಎಂದು ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಹೆಸರು ಗಳಿಸಿದ ಪಿಎಸ್‍ಐ ರಂಗಪ್ಪ ಹೆಚ್.ದೊಡ್ಡಮನಿ ಚುನಾವಣೆ ನಿಮಿತ್ತ ಸಿರಿಗೇರಿ ಮಾದರಿ ಪೊಲೀಸ್ ಠಾಣೆಗೆ ನಿಯೋಜನೆಗೊಂಡಿದ್ದು, ಕರ್ತವ್ಯಕ್ಕೆ ಹಾಜರಾದ ಮರುದಿನವೇ ಕರೂರು ಹಳ್ಳದಿಂದ ಸುಮಾರು ನಾಲ್ಕು ಟ್ರ್ಯಾಕ್ಟರ್ ಅಕ್ರಮ ಮರಳನ್ನು ಸಾಗುಸಿತಿದ್ದ ವೇಳೆ ಸೆರೆ ಹಿಡಿದು ಕರ್ತವ್ಯದ ನಿಷ್ಠೆಯನ್ನು ಎತ್ತಿ ಹಿಡಿದಿದ್ದಾರೆ.
ಇದೀಗ ಲೋಕಸಭಾ ಚುನಾವಣೆ ನಿಮಿತ್ತ ಚುನಾವಣಾ ಆಯೋಗ ನೀತಿ ಸಂಹಿತೆ ಜಾರಿಗೊಳಿಸಿದ್ದು, ಸಿರಿಗೇರಿ ಠಾಣಾ ವ್ಯಾಪ್ತಿಯ ಸುಮಾರು 22ಹಳ್ಳಿಗಳ ಮೇಲೆ ಹದ್ದಿನ ಕಣ್ಗಾವಲು ಹರಿಸಿದ್ದಾರೆ. ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಪಿಎಸ್‍ಐ ರಂಗಪ್ಪ ಸಿರಿಗೇರಿ ಠಾಣಾ ವ್ಯಾಪ್ತಿಯ ಎಲ್ಲಾ ಬೂತ್‍ಗಳನ್ನು ಪರಿಶೀಲಿಸಲಾಗಿದೆ. ಈ ಮಧ್ಯೆ ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ ಸೂಕ್ತ ಪೊಲೀಸ್ ಬಂದೋಬಸ್ತ್ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ.
ಚುನಾವಣೆಯ ಮತದಾನ ಮುಗಿಯುವವರೆಗೂ ಯಾವುದೇ ರೀತಿಯ ಅಕ್ರಮ ಹಣ, ಮಧ್ಯ ಸಾಗಣೆ, ಅಹಿತಕರ ಘಟನೆ ಜರುಗದಂತೆ, ಹಾಗೂ ಶಾಂತಿಯುತ ಮತದಾನಕ್ಕೆ ಶ್ರಮಿಸುವುದಾಗಿ ತಿಳಿಸಿದರಲ್ಲದೆ, ಚುನಾವಣೆಗೆ ಅಡ್ಡಿ ಪಡಿಸುವ ಯಾವುದೇ ವ್ಯಕ್ತಿಯ ಮೇಲೆ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದರು. ಇದೇ ವೇಳೆ ಆಂದ್ರ ಗಡಿಭಾಗದ ಮಾಟಸೂಗೂರು ಹಾಗೂ ಸಿಧ್ಧರಾಂಪುರ ಬಳಿ ಎರಡು ತನಿಖಾ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
