ಪಾವಗಡ
ತವೇರಾ ವಾಹನದ ಟೈರ್ ಸಿಡಿದು ಪಲ್ಟಿಯಾಗಿ ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯ ಪಳವಳ್ಳಿ ಕೆರೆ-ಕಟ್ಟೆಯ ಬಳಿ ಭಾನುವಾರ ಸಂಜೆ 4 ಘಂಟೆಗೆ ಜರುಗಿದೆ.
ಮೃತನನ್ನು ತಾಲ್ಲೂಕಿನ ಗಂಗಸಾಗರ ಗ್ರಾಮದ ಕೃಷ್ಣಮೂರ್ತಿ- ಶ್ಯಾಮಲ ದಂಪತಿಯ ಪುತ್ರ ವಿದ್ಯಾಸಾಗರ್ (22 ವರ್ಷ) ಮೃತಪಟ್ಟ ದುರ್ದೈವಿಯಾಗಿದ್ದು, ತಾಲ್ಲೂಕಿನ ಸಿಂಗರೆಡ್ಡಿಹಳ್ಳಿ ಗ್ರಾಮದ ಗಾಯಾಳುಗಳಾದ ಮಂಜುನಾಥ್ 22, ಓಬಳೇಶ್, 50, ದೀಕ್ಷಾ 8, ಬಾಂಧವ್ಯ 3, ಹರೀಶ್, ಲಕ್ಷ್ಮಿ 30, ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯಲಾಗಿದೆ. ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








