ಉಚಿತ ಮಧುಮೇಹ ಮತ್ತು ಹೃದ್ರೋಗ ತಪಾಸಣಾ ಶಿಬಿರ

ಹೊಸದುರ್ಗ

     ಶ್ರೀಮಠ ಮತ್ತು ಬೆಂಗಳೂರಿನ ಸಮತ್ವಂ-ಜ್ಞಾನ ಸಂಜೀವಿನಿ ಸಂಸ್ಥೆ ಹಾಗೂ ಸಾಣೇಹಳ್ಳಿಯ ಪ್ರಾಥಮಿಕಆರೋಗ್ಯಕೇಂದ್ರದ ಸಂಯುಕ್ತಾಶ್ರಾಯದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿರಥೋತ್ಸವದ ನಿಮಿತ್ತ ಶ್ರೀ ಪಂಡಿತಾರಾಧ್ಯ ಶಿವಾಚಾಂರ್ಯ ಸ್ವಾಮಿಗಳವರ ಮಾರ್ಗದರ್ಶನದಲ್ಲಿಏಪ್ರಿಲ್29ರಂದು ಬೆಳಿಗ್ಗೆ 10ರಿಂದ ಮದ್ಯಹ್ನ1ಗಂಟೆವರೆಗೆ ಸಾಣೇಹಳ್ಳಿಯ ಶ್ರೀ ಮಠದಆವರಣದಲ್ಲಿ ಸಾರ್ವಜನಿಕರಿಗೆಉಚಿತ ಮಧುಮೇಹ ಮತ್ತು ಹೃದ್ರೋಗತಪಾಸಣಾ ಶಿಬಿರ ಆಯೋಜಿಸಲಾಗಿದೆ.

      ಶಿಬಿರದ ನೇತೃತ್ವವನ್ನು ಬೆಂಗಳೂರಿನ ಸುಪ್ರಸಿದದ್ದ ವೈಧ್ಯರಾದಡಾ.ಶ್ರೀ ಕಂಠಅವರು ವಹಿಸಿಕೊಳ್ಳುವರು.ಶಿಬಿರದಲ್ಲಿ ಸಕ್ಕರೆ ಖಾಯಿಲೆ ಮತ್ತು ಹೃದ್ರೋಗಕ್ಕೆ ಸಂಬಂಧಿಸಿದಂತೆ ತಪಾಸಣೆ ನಡೆಸಿ ಸೂಕ್ತ ಮಾರ್ಗದರ್ಶನ ಮತ್ತುರೋಗದ ಬಗ್ಗೆ ತಿಳುವಳಿಕೆಯನ್ನು ನೀಡಲಾಗುವುದು.ಶಿಬಿರದಲ್ಲಿ ಡಾ.ಭಾನು ಭಟ್, ಡಾ.ಪುಷ್ಪ, ಡಾ.ಅಪೂರ್ವ, ಡಾ.ರಾಜೀವ್, ಡಾ.ಕಲ್ಪನ, ಡಾ.ಲಕ್ಮೀಕಾಂತ್ ಮತ್ತುಉಮಾದಯಾ ಶಂಕರ್ ಮೊದಲಾದವರುತಪಾಸಣೆ ನಡೆಸಿ ಸೂಕ್ತ ಚಿಕೆತ್ಸೆ ನೀಡಿ ಸಮಾಲೋಚನೆ ನಡೆಸುವರು.ಈ ರೋಗಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಸಹ ವಿಡಿಯೋದ ಮೂಲಕ ತೋರಿಸಿಜಾಗೃತಿ ಮೂಡಿಸಲಾಗುವುದು.

     ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡಿಸಿಕೊಳ್ಳಬೇಕೆಂದು ಶ್ರೀ ಮಠದಆಡಳಿತಾಧಿಕಾರಿ ಎಚ್.ಎಸ್.ದ್ಯಾಮೇಶ್ ಪ್ರಕಟಣೆಯ ಮುಖಾಂತರ ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ವೈಧ್ಯರಾದಡಾ.ಲಕ್ಮೀಕಾಂತ್ ಮೊ.9844355141ಸಂಪರ್ಕಿಸಬಹುದು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link