ಬೆಂಗಳೂರು
ವಿದೇಶಿ ಬೈಕ್ ಚೆನ್ನಾಗಿದೆ ಎನ್ನುತ್ತಾ ಫೋಟೋ ತೆಗೆದುಕೊಂಡ ದುಷ್ಕರ್ಮಿಗಳು ಮಾಲೀಕನ ಮೇಲೆ ಹಲ್ಲೆ ನಡೆಸಿ 27 ಲಕ್ಷ ಮೌಲ್ಯದ ವಿದೇಶಿ ಗೋಲ್ಡ್ ವಿಂಗ್ ಬೈಕ್‍ನೊಂದಿಗೆ ಪರಾರಿಯಾಗಿರುವ ದುರ್ಘಟನೆ ಕೋರಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹಲ್ಲೆಗೊಳಗಾಗಿರವ ಬೈಕ್ ಮಾಲೀಕ ಗಣೇಶ್ ಗೌಡ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಬೆಥಾನಿ ಸ್ಕೂಲ್ ಬಳಿ ಗೋಲ್ಡ್ ವಿಂಗ್ ಬೈಕ್‍ಜೊತೆ ಗಣೇಶ್ ಗೌಡ ಅವರು ನಿಂತಿದ್ದಾಗ ಹೋಂಡಾ ಆಕ್ಟೀವಾದಲ್ಲಿ ಬಂದ ಇಬ್ಬರು ಗಣೇಶ್ ಗೌಡ ಅವರ ವಿದೇಶಿ ಬೈಕ್ ಹೋಂಡಾ ಗೋಲ್ಡ್ ವಿಂಗ್ ನೋಡಿದ್ದಾರೆ.
ಇಬ್ಬರು ದುಷ್ಕರ್ಮಿಗಳು ಬೈಕ್ ಮಾಲೀಕ ಗಣೇಶ್ ಗೌಡ ಬಳಿ ಹೋಗಿ ನಿಮ್ಮ ವಿದೇಶಿ ಬೈಕ್ ಚೆನ್ನಾಗಿದೆ. ನಾವು ಒಂದು ಫೋಟೋ ತೆಗೆದುಕೊಳ್ಳುತ್ತೇವೆ ಎಂದು ಕೇಳಿಕೊಂಡಿದ್ದಾರೆ. ಗಣೇಶ್ ಗೌಡ ಕೂಡ ಇದಕ್ಕೆ ಒಪ್ಪಿಕೊಂಡು ಫೋಟೋ ತೆಗೆದುಕೊಳ್ಳಲು ಅನುಮತಿ ನೀಡಿದರು.
ಫೋಟೋ ತೆಗೆದುಕೊಂಡ ಮೇಲೆ ದುಷ್ಕರ್ಮಿಗಳು ಬೆರಳುಗಳಿಗೆ ನಕ್ಕಲ್ ಧರಿಸಿ ಗಣೇಶ್‍ಗೆ ಪಂಚ್ ಮಾಡಿ ಹಲ್ಲೆ ನಡೆಸಿದ ನಂತರ ಅವರಿಂದ ಹೋಂಡಾ ಗೋಲ್ಡ್ ವಿಂಗ್ ಬೈಕ್ ಕೀ ಕಸಿದುಕೊಂಡು ಪರಾರಿಯಾಗಿದ್ದಾರೆ.ಈ ಸಂಬಂಧ ದೂರು ದಾಖಲಿಸಿರುವ ಕೋರಮಂಗಲ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








