ಇಸ್ಲಾಮಿಕ್ ಸ್ಟೇಟ್ ಉಗ್ರರ ಮುಂದಿನ ಟಾರ್ಗೆಟ್ ಭಾರತ..!!!

ನವದೆಹಲಿ:
         ಏಪ್ರಿಲ್ 21  ಆತ್ಮಾಹುತಿ ಬಾಂಬ್ ದಾಳಿ ನಡೆಸಿ ಅಮಾಯಕರ ಪ್ರಾಣ ಹರಿಸಿದ್ದ ಇಸ್ಲಾಮಿಕ್ ಸ್ಟೇಟ್ ಉಗ್ರರ ಮುಂದಿನ ಟಾರ್ಗೆಟ್ ಭಾರತ ಎಂಬುದಕ್ಕೆ ಉದಾಹರಣೆಯಾಗಿ ಬೆಂಗಾಲಿ ಭಾಷೆಯಲ್ಲಿ ಇಸಿಸ್ ಉಗ್ರರು ಕಮಿಂಗ್ ಸೂನ್ ಎಂದು ಪೋಸ್ಟ್ ಮಾಡಿದ್ದಾರೆ.
      ಉಗ್ರರು ಬೆಂಗಾಲಿಯಲ್ಲಿ ಶಿಗ್ರೋಯ್ ಆಶ್ಚೆ ಎಂದು ಪೋಸ್ಟ್ ಮಾಡಿದ್ದು ಇದರ ಅರ್ಥ ಶೀಘ್ರದಲ್ಲಿ ಬರಲಿದ್ದೇವೆ ಎಂದು ಈಗಾಗಲೆ ಇಸಿಸ್ ಬಾಂಗ್ಲಾದೇಶದಲ್ಲಿ ನೆಲೆಯೂರಿದ್ದು ಅಲ್ಲಿನ ಯುವಕರ ಮನಪರಿವರ್ತನೆಯಲ್ಲಿ ತೊಡಗಿದೆ ಬಾಂಗ್ಲಾದಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. 
       ಬಾಂಗ್ಲಾದೇಶ ಭಾರತ್ಕಕೆ ಹೊಂದಿಕೊಂಡಿರುವ ಪಶ್ಚಿಮ ಬಂಗಾಳ ಗಡಿಯಲ್ಲಿ ಭಾರತಕ್ಕೆ ಇಸಿಸ್ ಉಗ್ರರು ನುಸುಳುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ .ಸದ್ಯ ಇಸಿಸ್ ನ ಟೆಲಿಗ್ರಾಮ್ ಚಾನೆಲ್ ನಲ್ಲಿ ಪ್ರಸಾರವಾಗಿರುವ ಪೋಸ್ಟ್ ನ ಕುರಿತಾಗಿ ತನಿಖೆ ಆರಂಭವಾಗಿದ್ದು ಈ ಪೋಸ್ಟರ್ ನಲ್ಲಿ ಅಲ್-ಮುರ್ಸಾಲತ್ ಎನ್ನುವ ಲೋಗೋ ಸಹ ಇದೆ. ಸದ್ಯ ವೈರಲ್ ಆಗಿರುವ ಪೋಸ್ಟರ್ ಅನ್ನು ಗಂಭೀರವಾಗಿ ಪರಿಗಣಿಸಲಾಗಿದೆ.  
   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link