ನಾವು ಅಧಿಕಾರಕ್ಕೆ ಬಂದರೆ ಅಗ್ನಿವೀರ್‌ ನೇಮಕಾತಿ ರದ್ದು ಮಾಡುತ್ತೇವೆ : ರಾಹುಲ್‌ ಗಾಂಧಿ

ಚಂಡೀಗಢ:

         ಹರಿಯಾಣದ ಮಹೇಂದ್ರಗಢ-ಭಿವಾನಿ ಲೋಕಸಭಾ ಕ್ಷೇತ್ರದಲ್ಲಿ ನಡೆದ ತಮ್ಮ ಮೊದಲ ಚುನಾವಣಾ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ರೈತರ ಸಮಸ್ಯೆಗೆ ಸಂಬಂಧಿಸಿದಂತೆ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

   ಅಗ್ನಿವೀರ್ ಯೋಜನೆ ಇದು ಮೋದಿಯ ಯೋಜನೆ, ಸೇನೆಯ ಯೋಜನೆ ಅಲ್ಲ. ಸೇನೆಗೆ ಇದು ಬೇಕಾಗಿಲ್ಲ. ಈ ಯೋಜನೆಯನ್ನು ಪಿಎಂಒ (ಪ್ರಧಾನಿ ಕಚೇರಿ) ರೂಪಿಸಿದೆ. INDIA ಬಣ ಅಧಿಕಾರಕ್ಕೆ ಬಂದರೆ ‘ ಅಗ್ನಿವೀರ್ ಯೋಜನೆಯನ್ನು ಕಸದ ಬುಟ್ಟಿಯಲ್ಲಿ ಹಾಕುತ್ತೇವೆ. ಭಾರತದ ಗಡಿಗಳು ಹರಿಯಾಣ ಮತ್ತು ದೇಶದ ಯುವಕರಿಂದ ಸುರಕ್ಷಿತವಾಗಿದೆ.ನಮ್ಮ ಯುವಕರ ಡಿಎನ್‌ಎಯಲ್ಲಿ ದೇಶಪ್ರೇಮವಿದೆ ಎಂದ ಅವರು, ಮೋದಿ ಹಿಂದೂಸ್ತಾನ್ ಕೆ ಜವಾನರನ್ನು ಕಾರ್ಮಿಕರನ್ನಾಗಿ ಪರಿವರ್ತಿಸಿದ್ದಾರೆ ಎಂದರು.

ಮೋದಿ ಸರ್ಕಾರ 22 ಉನ್ನತ ಕೈಗಾರಿಕೋದ್ಯಮಿಗಳ 16 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡುತ್ತದೆ. ಆದರೆ “ರೈತರ ಸಾಲವನ್ನು ಮನ್ನಾ ಮಾಡುವುದಿಲ್ಲ ಏಕೆಂದರೆ ಅದು ಅವರನ್ನು ಹಾಳುಮಾಡುತ್ತದೆ” ಎಂದು ಬಹಿರಂಗವಾಗಿ ಹೇಳುತ್ತಾರೆ

ರೈತರನ್ನು ರಕ್ಷಿಸಲು ಮತ್ತು ಅವರಿಗೆ ಸೂಕ್ತ ಪರಿಹಾರವನ್ನು ನೀಡಲು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಭೂಸ್ವಾಧೀನ ಮಸೂದೆಯನ್ನು ಮೋದಿ ಸರ್ಕಾರ ಅದನ್ನು ರದ್ದುಗೊಳಿಸಿತು. ಅವರು ಜಾರಿಗೆ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ರೈತರು ಬೀದಿಗಿಳಿಯಬೇಕಾಯಿತು” ಎಂದು ಕಾಂಗ್ರೆಸ್ ಮಾಜಿ ಅಧ್ಯಕ್ಷರು ಹೇಳಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link
Powered by Social Snap