ಅಬುಧಾಬಿ:
ಮಹಿಳೆಯೊಬ್ಬಳು ತನ್ನ ಮಾಜಿ ಪ್ರೇಮಿಯನ್ನು ಕೊಂದು, ದೇಹದ ಭಾಗಗಳನ್ನು ಕತ್ತರಿಸಿ ಅಡುಗೆ ಮಾಡಿ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಬಡಿಸಿದ ಅಮಾನುಷ ಘಟನೆ ಇಲ್ಲಿ ನಡೆದಿದ್ದು, ತಡವಾಗಿ ತಿಳಿದುಬಂದಿದೆ.
ಇದೊಂದು ವಿಲಕ್ಷಣ ಘಟನೆ. ಮಹಿಳೆಯೊಬ್ಬಳು ತನ್ನ ಮಾಜಿ ಪ್ರಿಯಕರನನ್ನು ಕೊಂದು, ಆತನ ದೇಹದ ಕೆಲ ಭಾಗದಲ್ಲಿ ಮೊರಕ್ಕೊದ ಖಾದ್ಯವೊಂದನ್ನು ಮಾಡಿ, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಉಣಬಡಿಸಿದ್ದಾಳೆ. ನಂತರ ದೇಹದ ಉಳಿದ ಅವಶೇಷಗಳನ್ನು ಪಕ್ಕದ ಮನೆಯ ನಾಯಿಗಳಿಗೆ ಹಾಕಿದ್ದಾಳೆ ಎಂದು ತಿಳಿದುಬಂದಿದೆ.
ಹತ್ಯೆಗೆ ಕಾರಣ :
30 ವರ್ಷದ ಈ ಮಹಿಳೆ 20 ವರ್ಷದ ಯುವಕನನ್ನು 7 ವರ್ಷಗಳಿಂದ ಪ್ರೀತಿಸುತ್ತಿದ್ದಳು. ತಾನು ಪ್ರೀತಿಸುತ್ತಿದ್ದ ಯುವಕ ಪರ ಸ್ತ್ರೀ ವ್ಯಾಮೋಹ ಹೊಂದಿದ್ದರಿಂದ ಕುಪಿತಳಾದ ಮಹಿಳೆ ಆತನನ್ನು ತನ್ನ ಮನೆಯಲ್ಲೇ ಕೊಂದು ತುಂಡು ತುಂಡಾಗಿ ಕತ್ತರಿಸಿದಳು.
ಪ್ರಕರಣ ಬೆಳಕಿಗೆ ಬಂದದ್ದು..?
ಮೃತನ ಸಹೋದರ ಇವರಿಬ್ಬರು ತಂಗಿದ್ದ ಮನೆಯಲ್ಲಿ ಹುಡುಕಾಟ ಆರಂಭಿಸಿದ್ದಾನೆ. ಆಗ ಆ ಮಹಿಳೆ, ನನಗೆ ಅವನ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆತನಿಗೆ ಬೇರೆ ಹೆಂಗಸಿನ ಜತೆಗೆ ಸಂಪರ್ಕ ಇತ್ತು ಎಂದಿದ್ದಾಳೆ. ಆದರೆ ಆತ ಆಕೆಯ ಮನೆಯನ್ನು ತೀವ್ರ ಶೋಧ ನಡೆಸಿದಾಗ, ರುಬ್ಬುವ ಯಂತ್ರದಲ್ಲಿ ಆತನ ಹಲ್ಲುಗಳು ಇರುವುದನ್ನು ಗುರುತಿಸಿದ್ದಾನೆ. ಇದರಿಂದ ಅನುಮಾನಗೊಂಡ ಸಹೋದರ ಪೊಲೀಸರಿಗೆ ದೂರು ನೀಡಿದ. ತಕ್ಷಣ ಪೊಲೀಸರು ಮಹಿಳೆಯನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಈ ಮಹಿಳೆ ತನ್ನ ಮಾಜಿ ಪ್ರಿಯಕರನನ್ನು ಕೊಂದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾಳೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ