ರಾಣಿಬೆನ್ನೂರು
ಭರತ ಪುಣ್ಯಭೂಮಿಯಲ್ಲಿ ಹುಟ್ಟಿದ ಪ್ರತಿಯೊಬ್ಬ ಜೀವಿಯೂ ಸ್ವಾರ್ಥತೆಯ ಮನೋಭಾವನೆಯನ್ನು ಬಿಟ್ಟು ನಿಸ್ವಾರ್ಥ ಸೇವೆಯಲ್ಲಿ ತೊಡಗಿದಾಗ ಸಮಾಜಕ್ಕೆ ತಾವುಗಳು ಅಪಾರವಾದ ಕೊಡುಗೆ ನೀಡಿದಂತಾಗುತ್ತದೆ. ದಾನ, ಧರ್ಮ, ಸಹಾಯ ಸಹಕಾರ ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾಗಿದಾಗ ನೆಮ್ಮದಿಯ ಜೀವನ ಕಂಡುಕೊಂಡಂತಾಗುತ್ತದೆ ಎಂದು ಖ್ಯಾತ ಮೂಳೆಗಳ ಶಸ್ತ್ರ ಚಿಕಿತ್ಸಾ ತಜ್ಞ ಡಾ. ಮುರಳೀಧರ ಹೇಳಿದರು.
ಇಲ್ಲಿನ ಲಯನ್ಸ್ ಶಾಲೆಯ ಆವರಣದಲ್ಲಿ ಲಯನ್ಸ್ ಮತ್ತು ಲಯನೆಸ್ ಕ್ಲಬ್, ದಿ.ಬಸಮ್ಮ ದಿ.ಶಿವಪ್ಪ ಕುರಗೋಡಪ್ಪನವರ ಹಾಗೂ ಮಕ್ಕಳು, ಕರ್ನಾಟಕ ಯೂತ್ ಫೆಡರೇಷನ್ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಉಚಿತ ಜೈಪುರ ಕಾಲುಗಳ ಜೋಡಣಾ ಶಿಬಿರದಲ್ಲಿ ರೋಗಿಗಳಿಗೆ ಕೃತಕ ಕಾಲುಗಳನ್ನು ಜೋಡಿಸಿ ಮಾತನಾಡಿದರು.
ಉದಾರ ಮನಸ್ಸಿನ ದಾನಿಗಳು ಇಂದು ಸಮಾಜಕ್ಕೆ ಅವಶ್ಯಕವಾಗಿ ಬೇಕಾಗಿದ್ದಾರೆ. ಅಂತವರಿಂದ ಮತ್ತೊಬ್ಬರ ಜೀವನ ನೆಮ್ಮದಿಯ ಜೊತೆಗೆ ಸುಂದರ ಬದುಕು ಕಾಣಲು ಕಾರಣೀಕರ್ತರಾಗುತ್ತಾರೆ. ಇಂತಹ ಉದಾರ ಮನಸ್ಸಿನ ದಾನಿಗಳು ನಗರದಲ್ಲಿರುವುದು ಸಂತೋಷದ ಸಂಗತಿಯಾಗಿದೆ. ಕುರಗೋಡಪ್ಪನವರ ಕುಟುಂಬವು ಇದೀಗ ಕೃತಕ ಕಾಲುಗಳ ನೆರವಿಗೆ ಬಂದಿರುವುದು ರೋಗಿಗಳ ಪಾಲಿಗೆ ವರವಾಗಿದ್ದಾರೆ ಎಂದರು.
ದಾನಿ ಬಸವರಾಜ ಕುರಗೋಡಪ್ಪನವರ, ಎಂ.ಜಿ.ಇ ಸಂಸ್ಥೆಯ ಅಧ್ಯಕ್ಷ ಎಂ.ಎಸ್.ಅರಕೇರಿ, ನಿವೃತ್ತ ಉಪನ್ಯಾಸಕ ಬಿಬಿ ನಂದ್ಯಾಲ, ಲಯನ್ಸ್ ಅಧ್ಯಕ್ಷ ರೇವಣಗೌಡ ಗ್ಯಾನಗೌಡ್ರ, ಲಯನೆಸ್ ಅಧ್ಯಕ್ಷ ಗೀತಾ ಕಾಕೋಳ, ವಿನೋದ ಜಂಬಗಿ, ಎಲ್. ಜಿ.ಶೆಟ್ಟರ್, ಟಿ.ವೀರಣ್ಣ, ಬಸವರಾಜ ಪಾಟೀಲ, ಗಣೇಶ, ನಾಗರಾಜ, ಗುಡ್ಡಪ್ಪ, ವೆಂಕಟರಾಮ, ಗೋಪಾಲ, ಬಸವರಾಜ ಬಡಿಗೇರ, ಪ್ರಭು ಹಲಗೇರಿ, ಎಂ.ಎಚ್.ಪಾಟೀಲ್, ಆರ್.ವಿ ಸುರಗೊಂಡ, ಅಶೋಕ ಗಂಗನಗೌಡ್ರ, ಎಂಜಿ ಮಣ್ಣಮ್ಮನವರ, ಸೇರಿದಂತೆ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
