ಹಾವೇರಿ
ಭೂಮಿಯನ್ನು ರಕ್ಷಿಸುವುದು ಪ್ರತಿಯೊಬ್ಬರ ಹೊಣೆಯಾಗಿದೆ. ಮುಂದಿನ ಪೀಳಿಗೆಗೆ ಸುಂದರ ಹಾಗೂ ಮಾಲಿನ್ಯ ರಹಿತ ಸ್ವಚ್ಛ ಪರಿಸರ ನೀಡುವ ಸಂಕಲ್ಪ ಮಾಡೋಣ ಎಂದು ನ್ಯಾಯಾಧೀಶರಾದ ಎ.ವಿ.ಪಾಟೀಲ ಅವರು ಹೇಳಿದರು.
ಮಂಗಳವಾರ ನಗರದ ತಾಲೂಕು ಪಂಚಾಯತಿ ಸಭಾಭವನದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾವೇರಿ ಕಚೇರಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ “ಭೂಮಿ ದಿನ (ಇಂಖಖಿಊ ಆಂಙ) ಕುರಿತು ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಮೇರಿಕಾದಲ್ಲಿ 1970ರಲ್ಲಿ ಕೈಗಾರಿಕೆಗಳಿಂದ ವಾಯುಮಾಲಿನ್ಯ ಉಂಟಾದ ಹಿನ್ನೆಲೆಯಲ್ಲಿ ಮಾಲಿನ್ಯ ತಡೆಗೆ ಆಂದೋಲನ ಮಾಡಲಾಯಿತು ಹಾಗೂ ಮಾಲಿನ್ಯ ತಡೆ ಕಾನೂನು ಜಾರಿಗೆ ತರಲಾಯಿತು. 193 ದೇಶಗಳಲ್ಲಿ ಎಪ್ರಿಲ್ 27 ರಂದು ಭೂಮಿದಿನ ಆಚರಿಸಲಾಗುತ್ತಿದೆ. ಪ್ರಪಂಚದಲ್ಲಿ ಕಾಲು ಭಾಗ ಮಾತ್ರ ಭೂಮಿ ಇದೆ ಉಳಿದ ಮುಕ್ಕಾಲುಭಾಗ ನೀರು ಇದೆ. ಮನುಷ್ಯ ಅತ್ಯಂತ ಬುದ್ಧಿಜೀವಿಯಾಗಿದ್ದು ತನ್ನ ಅಭಿವೃದ್ಧಿಗೆ ಫಲವತ್ತಾದ ಭೂಮಿಯನ್ನು ನಾಶಮಾಡುತ್ತಿದ್ದಾನೆ. ಕೈಗಾರಿಕೆಗಳ ಕಲುಷಿತ ನೀರು, ಇತರೆ ತ್ಯಾಜ್ಯ ವಸ್ತುಗಳಿಂದ ಅಧಿಕ ಪ್ರಮಾಣದಲ್ಲಿ ಮಾಲಿನ್ಯ ಉಂಟಾಗುತ್ತಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಸುಪ್ರೀಂ ಕೋರ್ಟ ನಿರ್ದೇಶನದಂತೆ ಒಂದು ಗಿಡ ಕಡಿದರೆ ನಾಲ್ಕು ಸಸಿಗಳನ್ನು ನೆಟ್ಟು ಮರವಾಗಿ ಬೆಳೆಸಬೇಕು. ಭೂಮಿ ಮೇಲೆ ಉಂಟಾಗುವ ಮಾಲಿನ್ಯವನ್ನು ತಡೆಗಟ್ಟಲು ಕಾನೂನಿನ ಜೊತೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಹೇಳಿದರು. ಉಪವಿಭಾಗಾಧಿಕಾರಿ ಎನ್.ತಿಪ್ಪೇಸ್ವಾಮಿ, ತಹಶೀಲ್ದಾರ ಶಿವಕುಮಾರ, ತಾ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಅನ್ನಪೂರ್ಣ ಮುದಕಮ್ಮನವರ ಉಪಸ್ಥಿತರಿದ್ದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪೆನಲ್ ವಕೀಲರಾದ ವಿ.ವಿ.ಸಪ್ಪಣ್ಣನವರ, ಭೂ ದಾಖಲೆಗಳ ಇಲಾಖೆಯ ಆರ್.ಬಿ.ಹಿರೇಗೌಡ್ರ ಹಾಗೂ ಶಹರ ಪೊಲೀಸ್ ಠಾಣೆ ಸಿ.ಜೆ.ನಂದಿ ಅವರು ಉಪನ್ಯಾಸ ನೀಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
