ಬೆಂಗಳೂರು
ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿ ಸಂಸದ ರಾಜೀವ್ ಚಂದ್ರಶೇಖರ್ ಕೆಣಕಿದ್ದು, ಅದಕ್ಕೆ ಸಿದ್ದರಾಮಯ್ಯ ತೀಕ್ಷ್ಣವಾಗಿ ಪ್ರತ್ಯುತ್ತರ ನೀಡಿದ್ದಾರೆ.
ರಾಜೀವ್ ಚಂದ್ರಶೇಖರ್ – ಸಿದ್ದರಾಮಯ್ಯ ನಡುವೆ ಟ್ವಿಟ್ಟರ್ ಸಮರ ತೀವ್ರವಾಗಿ ನಡೆಯಿತು.ಟಿಪ್ಪು ಸುಲ್ತಾನ್ ಮರಣಹೊಂದಿದ ದಿನದ ಅಂಗವಾಗಿ ನಿನ್ನೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹಾಕಿದ್ದ ಸ್ಟೇಟಸ್ ಅನ್ನು ಮುಂದಿಟ್ಟುಕೊಂಡು ರಾಜೀವ್ ಚಂದ್ರಶೇಖರ್ ಸಿದ್ದರಾಮಯ್ಯ ಅವರನ್ನು ಕೆಣಕಿದರು. ” ಡಿಯರ್ ಸಿದ್ದರಾಮಯ್ಯನವರೇ ನೀವು ಇದೀಗ ಇಮ್ರಾನ್ ಖಾನ್ ಅವರನ್ನು ಅಪ್ಪಿಕೊಳ್ಳುವ ಸಮಯ ಬಂದಿದೆ. ಇದು ರಾಹುಲ್ ಗಾಂಧಿಗೆ ಹತ್ತಿರವಾಗಲು ಸುಲಭದ ದಾರಿ” ಎಂದು ಟ್ವೀಟ್ ಮಾಡಿದ್ದರು.
ರಾಜೀವ್ ಟ್ವೀಟ್ ಗೆ ಪ್ರತ್ಯುತ್ತರ ನೀಡಿದ ಸಿದ್ದರಾಮಯ್ಯ, ” ಟ್ವೀಟ್ ಮಾಡುವ ಮೊದಲು ಯೋಚಿಸಿ ಟ್ವೀಟ್ ಮಾಡಿ. ನಾನು ನಿಮ್ಮ ನರೇಂದ್ರ ಮೋದಿ ರೀತಿ ಶತ್ರು ದೇಶದ ಪ್ರಧಾನಿ ಜೊತೆ ಬಿರಿಯಾನಿ ತಿಂದಿಲ್ಲ. ಬಾಸ್ ಗಳ ಓಲೈಕೆಗಾಗಿ ನೈತಿಕ ಮೌಲ್ಯಗಳಲ್ಲಿ ರಾಜಿ ಮಾಡಿಕೊಂಡಿಲ್ಲ. ಬಾಸ್ ಗುಲಾಮರಾಗಿ ನಿಮ್ಮ ಹಾಗೆ ಬದುಕುವುದಕ್ಕಿಂತ ಟಿಪ್ಪು ಸುಲ್ತಾನ್ ನಂತೆ ಬದುಕುವುದು ಮೇಲು” ಎಂದು ತಿರುಗೇಟು ನೀಡಿದ್ಧಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
