ಬೆಂಗಳೂರು
ರಾಜಧಾನಿ ಬೆಂಗಳೂರಿನಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಜೊತೆಗೆ ವಿದ್ಯುತ್ ತೊಂದರೆ ಎದುರಾಗಲಿದ್ದು ಆತಂಕಕ್ಕೆ ಏಡೆಮಾಡಿಕೊಟ್ಟಿದೆ.
ನಗರದ ಜನತೆ ಸಮರ್ಪಕ ಕುಡಿಯುವ ನೀರು ಪೂರೈಸಲು ಜಲಮಂಡಳಿ ಒದ್ದಾಡುತ್ತಿದೆ.ಪ್ರಸಕ್ತ ಪರಿಸ್ತಿತಿಯಲ್ಲಿಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಕುಡಿಯುವ ನೀರು ಪೂರೈಸಲು ಜಲಮಂಡಳಿಗೆ ಸಾಧ್ಯವಾಗುತ್ತಿಲ್ಲ. ಲಭ್ಯವಿರುವ ನೀರನ್ನು ಈ ತಿಂಗಳವರೆಗೆ ಪೂರೈಸಲು ಮಾತ್ರ ಸಾಧ್ಯವಿದೆ. ಮುಂದಿನ ತಿಂಗಳಿನಿಂದ ನೀರು ಹೇಗೆ ಪೂರೈಸುವುದು ಎಂದು ತಲೆಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸದ್ಯ ಜಲಮಂಡಳಿ ಪ್ರತಿದಿನ 1390 ದಶಲಕ್ಷ ಲೀಟರ್ ನೀರನ್ನು ಪೂರೈಸಲು ಸಾಧ್ಯ. ಆದರೆ ನೀರಿನ ಪೂರೈಕೆಗೂ ಮತ್ತು ಬೇಡಿಕೆಗೂ ಅಜಗಜಂತರ ವ್ಯತ್ಯಾಸ ಕಂಡು ಬಂದಿದೆ.ಪ್ರತಿದಿನ 1500 ರಿಂದ 1700 ಲೀ. ದಶಲಕ್ಷ ಲೀಟರ್ ನೀರನ್ನು ಜನರಿಗೆ ಪೂರೈಸಬೇಕಾದ ಪರಿಸ್ಥಿತಿ ಎದುರಾಗಿದೆ.
ನೆನಗುದಿಗೆ ಬಿದ್ದ ಯೋಜನೆ
ಕಾವೇರಿ 5ನೇ ಹಂತದ ಯೋಜನೆ ಸದ್ಯಕ್ಕಂತು ಮುಗಿಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ಒಂದು ಮೂಲಗಳ ಪ್ರಕಾರ ಈ ಯೋಜನೆ 2026ಕ್ಕೆ ಮುಗಿಯಲಿದೆ. ಈ ಯೋಜನೆಗೆ ಪೂರ್ಣವಾಗುವವರೆಗೂ ಬೆಂಗಳೂರಿನ ಜನರ ನೀರಿನ ಬೇಡಿಕೆಯನ್ನು ಪೂರೈಸುವುದು ಸಾಧ್ಯವಿಲ್ಲ.ದಿನದಿನದಿಂದ ದಿನಕ್ಕೆ ನಗರದಲ್ಲಿ ನೀರಿನ ಹಾಹಾಕಾರ ಕಾಣಲಾರಂಭಿಸಿದೆ. ನಗರದ 198 ವಾರ್ಡ್ಗಳಲ್ಲಿ ಅಂತರಜಲಮಟ್ಟ ಕುಸಿದಿದೆ. ಬೋರ್ವೆಲ್ಗಳಲ್ಲಿನ ನೀರು ಬತ್ತಿ ಹೋಗಿದ್ದು, ಹೊಸ ಬೋರ್ವೆಲ್ಗಳನ್ನು ಕೊರೆಯುಸಿದರೂ ನೀರು ಬರ ಲಕ್ಷಣಗಳಂತೂ ಇಲ್ಲ.ಜಲಮಂಡಳಿಗೆ ನಗರದ ಜನತೆಗೆ ಕುಡಿಯುವ ನೀರು ಒದಗಿಸುವುದು ಒಂದು ಸವಾಲಾಗಿ ಪರಿಣಿಮಿಸಿದೆ.
ವಿದ್ಯುತ್ ಬೇಡಿಕೆ ಹೆಚ್ಚು
ಕುಡಿಯುವ ನೀರಿನ ತೊಂದರೆಯ ನಡುವೆಯೇ ನಗರದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಾಗತೊಡಗಿದೆ. ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಯನ್ನು ಪೂರೈಸಲು ಸಾಧ್ಯವಾಗದೆ ಜಲಮಂಡಳಿ ಅಧಿಕಾರಿಗಳು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.ನಗರದಲ್ಲಿ ಸದ್ಯ 6,156 ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯಿದೆ. ಆದರೆ 5,500 ಮೆಗಾವ್ಯಾಟ್ ವಿದ್ಯುತ್ ಮಾತ್ರ ಬೆಸ್ಕಾಂ ಬಳಿ ಇದೆ. 1000 ಕ್ಕೂ ಹೆಚ್ಚು ಪೂರೈಕೆ ಮತ್ತು ಬೇಡಿಕೆ ವ್ಯತ್ಯಾಸ ಕಂಡು ಬಂದಿವೆ ಬೇಸಿಗೆಯಿಂದ ನಗರದಲ್ಲಿ ವಿದ್ಯುತ್ ಬಳಸುವ ಸಂಖ್ಯೆ ಹೆಚ್ಚಾಗಲಿದೆ. ಇದರಿಂದ ಏನಿಲ್ಲವೆಂದರೂ 600 ಮೆಗಾವ್ಯಾಟ್ ವಿದ್ಯುತ್ ಬೇಡಿಕೆ ಹೆಚ್ಚಾಗಲಿದೆ.
ಹೆಚ್ಚು ವಿದ್ಯುತ್ ಬಳಕೆ
ನಗರದಲ್ಲಿ ಕೈಗಾರಿಕರಣ ಹೆಚ್ಚಾಗುತ್ತಿದ್ದು ವಿದ್ಯುತ್ ಬಳಕೆ ಕೂಡ ದ್ವಿಗುಣ ಗೊಳ್ಳುತ್ತಿದೆ. ಬೆಸ್ಕಾಂ ವ್ಯಾಪ್ತಿಯ 8 ಜಿಲ್ಲೆಯಗಳ ಪೈಕಿ ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ವಿದ್ಯುತ್ ಬಳಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಬೇಸಿಗೆ ಆರಂಭವಾಗುತ್ತಿದ್ದ ವೇಳೆಯಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್ ಬಳಕೆ ಪ್ರಮಾಣ ನಿರೀಕ್ಷೆಗಿಂತಲೂ ಹೆಚ್ಚಾಗಲಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








