ಬೆಂಗಳೂರು
ಬಿಎಂಟಿಸಿ ಬಸ್‍ನಲ್ಲಿ ನಿರ್ವಾಹಕ ಹಾಗೂ ಸಾಫ್ಟ್‍ವೇರ್ ಇಂಜಿನಿಯರ್ ನಡುವೆ ಮಾತಿನ ಚಕಮಕಿ ನಡೆದು, ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರಿಂದ ಚಾಲಕ ಬಸ್‍ನ್ನು ಕಾಡುಗೋಡಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದು, ದೂರಿಗೆ ಪ್ರತಿದೂರು ದಾಖಲಾಗಿದೆ.
ಟಿನ್ ಫ್ಯಾಕ್ಟರಿಯಿಂದ ಐಟಿಪಿಎಲ್‍ಗೆ ಹೊರಟಿದ್ದ ಸಾಫ್ಟ್‍ವೇರ್ ಇಂಜಿನಿಯರ್ ಪಂಕಜ್ ಎಂಬಾತ ಬಸ್‍ನ ಬಾಗಿಲಿನಲ್ಲಿ ನಿಂತಿದ್ದಾನೆ. ಈ ವೇಳೆ ನಿರ್ವಾಹಕ ಕೃಷ್ಣಪ್ಪ ಎಂಬುವರು `ನೀ ಬಿದ್ದು ಸತ್ತರೇ ನಾನು ಉತ್ತರಿಸಬೇಕು ಒಳಗೆ ಹೋಗು’ ಎಂದಿದ್ದಾರೆ. ಇದರಿಂದಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಈ ವೇಳೆ ಚಾಲಕ ಕಾಡುಗೋಡಿ ಠಾಣೆಗೆ ಬಸ್ ತೆಗೆದುಕೊಂಡು ಹೋಗಿದ್ದು, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಟೆಕ್ಕಿ ವಿರುದ್ಧ ದೂರು ದಾಖಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಟೆಕ್ಕಿ ಪ್ರತಿ ದೂರು ದಾಖಲಿಸಿದ್ದು, ಪೊಲೀಸರಿಂದ ನ್ಯಾಯ ಸಿಗಲಿಲ್ಲ ಎಂದು ಫೇಸ್‍ಬುಕ್‍ನಲ್ಲಿ ಫೋಸ್ಟ್ ಹಾಕಿ ಹೊರರಾಜ್ಯದವರಿಗೆ ರಕ್ಷಣೆಯಿಲ್ಲ ಎಂದು ಬರೆದುಕೊಂಡಿದ್ದು, ಬೆಂಗಳೂರು ಪೊಲೀಸರಿಗೆ ಹಾಗೂ ಬಿಎಂಟಿಸಿ ಅಧಿಕಾರಿಗಳಿಗೆ ಫೋಸ್ಟ್‍ನ್ನು ಟ್ಯಾಗ್ ಮಾಡಿ ಆರೋಪಗಳ ಸುರಿಮಳೆಗೈದಿದ್ದಾನೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








