ರಾಜ್ಯ ಒಕ್ಕಲಿಗರ ಸಂಘ ಎಂಪ್ಲಾಯಿಸ್ ಅಸೋಸಿಯೇಷನ್ ನಿಂದ ಪ್ರತಿಭಟನೆ

ಬೆಂಗಳೂರು

  ರಾಜ್ಯ ಒಕ್ಕಲಿಗರ ಸಂಘ ಎಂಪ್ಲಾಯಿಸ್ ಅಸೋಸಿಯೇಷನ್ ಸದಸ್ಯರು ರಕ್ತ ಕೊಟ್ಟೇವು 6ನೇ ವೇತನ ಬಿಡವು ಘೋಷಣೆ ಮಾಡಿ ನಗರದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು.

  ನಗರದ ಕೃಷ್ಣ ರಾಜೇಂದ್ರ ರಸ್ತೆಯ ರಾಜ್ಯ ಒಕ್ಕಲಿಗರ ಸಂಘದ ಆವರಣದಲ್ಲಿ ಮಂಗಳವಾರ ಬೆಳಿಗ್ಗೆ 10.30ಕ್ಕೆ ಸೇರಿದ ನೂರಾರು ಒಕ್ಕಲಿಗರ ಸಂಘ ಎಂಪ್ಲಾಯಿಸ್ ಅಸೋಸಿಯೇಷನ್ ಸದಸ್ಯರು ಸ್ವಯಂ ಕಿದ್ವಾಯಿ ಆಸ್ಪತ್ರೆಯ ಕ್ಯಾನ್ಸರ್ ರೋಗಿಗಳಾಗಿ ರಕ್ತದಾನ ಮಾಡುವ ಮೂಲಕ ಒಕ್ಕಲಿಗರ ಸಂಘ ಪ್ರೇರಿತ ರಕ್ತದಾನ ಮಾಡಿ ವಿನೂತನ ಪ್ರತಿಭಟನೆ ನಡೆಸಿ, 6ನೇ ವೇತನಕ್ಕಾಗಿ ಆಗ್ರಹಿಸಿದರು.

   ಸಂಘದಿಂದ ನಡೆಯುತ್ತಿರುವ ಪ್ರತಿಭಟನೆ 13 ದಿನಕ್ಕೆ ಕಾಲಿಟ್ಟಿದೆ. ಕಳೆದ 6 ತಿಂಗಳಿಂದ 6ನೇ ವೇತನ ಬಿಡುಗಡೆಗೆ ಆಗ್ರಹಿಸಿ ಹೋರಾಟ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

    ಒಕ್ಕಲಿಗರ ಸಂಘದ ಅಧೀನ ವಿದ್ಯಾಸಂಸ್ಥೆಗಳಾದ ಕೆಂಪೇಗೌಡ ಮೆಡಿಕಲ್ ಕಾಲೇಜು, ಬೆಂಗಳೂರು ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಡೆಂಟಲ್ ಕಾಲೇಜು ಮತ್ತು ಶ್ರೀಗಂಧದ ಕಾವಲಿನ ವಿದ್ಯಾಸಂಸ್ಥೆಗಳಿಂದ ಸುಮಾರು 2 ಸಾವಿರ ನೌಕರರು ಕೆಲಸ ಮಾಡುತ್ತಿದ್ದು ಕೂಡಲೇ 6ನೇ ವೇತನವನ್ನು ನೀಡುವರೆಗೂ ಮುಷ್ಕರವನ್ನು ನಡೆಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link