ಮಲೇಬೆನ್ನೂರು
ಪಟ್ಟಣದ ಹೊರವಲಯದ ಸ.ನಂ 155/ಪಿ1ರಲ್ಲಿನ ಖಬರಸ್ಥಾನದಲ್ಲಿ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಬಿಡುಗಡೆಯಾದ ವಿಧಾನಪರಿಷತ್ ಸದಸ್ಯರ 3ಲಕ್ಷ ರೂ .ಅನುದಾನ ಕಾಮಗಾರಿ ಮಾಡದೆ, ದುರುಪಯೋಗವಾಗುತ್ತಿದೆ ಎಂದು ಮೊಹ್ಮದ್ ಫಾಜಿಲ್ ಎಂಬವರು ರಾಜ್ಯ ವಕ್ಛಾ ಬೋರ್ಡ್ಗೆ ದೂರು ನೀಡಿದ್ದ ಹಿನ್ನೆಲೆಯಲ್ಲಿ ಜಿಪಂ ಇಇ ಪರಮೇಶ್ವರಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜತೆಯಲ್ಲಿ ಸ್ಥಳಕ್ಕೆ ಜಿಪಂ ಅಧಿಕಾರಿ ನಾಗರಾಜ್, ನಿರ್ಮಿತಿ ಕೇಂದ್ರದ ಎಇ ರಾಮಲಿಂಗಪ್ಪ, ಪುರಸಭೆ ಜೆಇ ಹಾಲೇಶಪ್ಪ ಎನ್ . ಭೇಟಿ ನೀಡಿ ಪರಿಶೀಲಿಸಿದರು.
ಇಲ್ಲಿ ಕಾಂಪೌಂಡ್ ಕಾಮಗಾರಿ ಮಾಡದೆ, ಪಟ್ಟಣದ ನಂದಿಗುಡಿ ರಸ್ತಯಲ್ಲಿನ ಮತ್ತೊಂದು ಖಬರಸ್ಥಾನಕ್ಕೆ ಪುರಸಭೆಯ 4 ಲಕ್ಷ ರೂ. ಅನುದಾನದಲ್ಲಿ ಈಗಾಗಲೇ ಮುಕ್ತಾಯಗೊಂಡಿರುವ ಕಾಂಪೌಂಡ್ ಕಾಮಗಾರಿಯ ನಾಮಫಲಕ ಅಳಿಸಿ, ಅದರ ಮೇಲೆಯೇ ಎಂಎಲ್ ಸಿಯವರ 3ಲಕ್ಷ ರೂ. ಅನುದಾನದ ಕಾಮಗಾರಿಯ ನಾಮಫಲಕ ಬರೆಸಿ, ಮಾಡದಿರುವ ಕಾಮಗಾರಿಯ ಹಣ ದುರುಪಯೋಗ ಪಡಿಸಿಕೊಳ್ಳಲು ಹುನ್ನಾರ ನೆಡೆದಿದೆ ಎಂದು ಮೊಹ್ಮದ್ ಫಾಜಿಲ್ ರಾಜ್ಯ ವಕ್ಛ್ ಬೋರ್ಡ್ಗೆ ದೂರು ನೀಡಿದ್ದರು.
ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ.ನಂ 155ರಲ್ಲಿ/ ಪಿ1ರಲ್ಲಿ ಕಾಮಗಾರಿ ನಡೆದಿದೆಯಾ ಎಂಬ ಬಗ್ಗೆ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ್ದ ಈ ಕಾಮಗಾರಿಯ ಹೊಣೆ ಹೊತ್ತ ನಿರ್ಮಿತಿ ಕೇಂದ್ರದ ಎಇ ರಾಮಲಿಂಗಪ್ಪ ಮಾತನಾಡಿ, ಇಲ್ಲಿ ಕಾಂಪೌಂಡ್ ಗೋಡೆ ನಿರ್ಮಿಸಲು ಕಳೆದ ಒಂದು ವರ್ಷದ ಹಿಂದೆಯೇ 3ಲಕ್ಷ ರೂ. ಮಂಜೂರಾಗಿತ್ತು. 2018ರ ಜೂ.27ರಂದು ನಿರ್ಮಿತಿ ಕೇಂದ್ರಕ್ಕೆ ಅನುದಾನದ ಹಣ ಬಿಡುಗಡೆಯಾಗಿದೆ. ಆದರೆ ಇದುವರೆಗೂ ಇಲ್ಲಿ ಕಾಮಗಾರಿ ಮಾಡಿಲ್ಲ .
ನಾನು ಇಲ್ಲಿಗೆ ಬಂದು 4 ತಿಂಗಳಾಗಿರುವುದರಿಂದ ಇಲ್ಲಿ ಕಾಮಗಾರಿ ಇದುವರೆಗೂ ಯಾಕೆ ಆರಂಭವಾಗಿಲ್ಲ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.
ನೀವು ಇದುವರೆಗೂಕಾಮಗಾರಿ ಮಾಡಿಲ್ಲವೆಂದ ಮೇಲೆ, ನಿರ್ಮಿತಿ ಕೇಂದ್ರದ ಹೆಸರಿನಲ್ಲಿ ಕಾಮಗಾರಿಯಾಗಿದೆ ಎಂದು ಬೇರೊಂದು
ಕಾಂಪೌಂಡ್ ಮೇಲೆ ಯಾರೋ ಬರೆಸಿ, ನಿಮ್ಮ ಇಲಾಖೆ ಹೆಸರು ಕೆಡಿಸಲು ಹೊರಟ್ಟಿದ್ದರೆ, ಅವರನ್ನು ಪತ್ತೆ ಹಚ್ಚಿ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಗೆ ದೂರು ನೀಡುವಂತೆ ನಿರ್ಮಿತಿ ಕೇಂದ್ರದ ಎಇ ರಾಮಲಿಂಗಪ್ಪಗೆ ದೂರುದಾರರ ಪರವಾದ ಮುಸ್ಲಿಂ ಮುಖಂಡರಾದ ಶೌಕತ್ ಅಲಿ, ವಕೀಲ ನಿಸಾರ್ ಅಹ್ಮದ್ ಒತ್ತಾಯಿಸಿದರು. ಈ ಬಗ್ಗೆ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಣಯ ತಗೆದುಕೊಳ್ಳುವುದಗಿ ಎಇ ತಿಳಿಸಿದರು.
ಪುರಸಭೆ ಜೆಇ ಎನ್. ಹಾಲೇಶಪ್ಪ ಮಾತನಾಡಿ, ಪುರಸಭ ವತಿಯಿಂದ ನಂದಿಗುಡಿ ರಸ್ತೆಯಲ್ಲಿನ ಖಬರಸ್ಥಾನಕ್ಕೆ 4ಲಕ್ಷ ರೂ ವೆಚ್ಚದಲ್ಲಿ ಕಾಂಪೌಂಡ್ ಕಾಮಗಾರಿ ಮಾಡಲಾಗಿದೆ. ನಾನು ಇತ್ತೀಚೆಗೆ ಬಂದಿರುವುದರಿಂದ ನಾಮಫಲಕದ ವಿವಾದ ನನಗೆ ಗೊತ್ತಿಲ್ಲ ಎಂದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ