ಐನಾತಿ ಕಳ್ಲಿಯ ಬಂದನ..!!!

ಬೆಂಗಳೂರು

     ಕಲ್ಯಾಣ ಮಂಟಪಗಳಿಗೆ ಅಂದಚೆಂದದ ಬಟ್ಟೆಗಳನ್ನು ಧರಿಸಿ ಹೋಗಿ ಲವಲವಿಕೆಯಿಂದ ಓಡಾಡುತ್ತಾ ಚಿನ್ನಾಭರಣ ಕಳವು ಮಾಡುತ್ತಿದ್ದ ಐನಾತಿ ಕಳ್ಳಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ.

     ಜಯನಗರದ ಮುನ್ನಿ ಬಂಧಿತ ಆರೋಪಿಯಾಗಿದ್ದಾಳೆ,ಮದುವೆ ನಡೆಯುತ್ತಿರುವ ಕಲ್ಯಾಣ ಮಂಟಪಗಳನ್ನ ಗುರಿಯಾಗಿಸಿಕೊಂಡು ಮುನ್ನಿ ಶ್ರೀಮಂತರಂತೆ ಉಡುಪು ಧರಿಸಿಕೊಂಡು ಹೋಗಿ ಕಲ್ಯಾಣ ಮಂಟಪದಲ್ಲಿ ಲವಲವಿಕೆಯಿಂದ ಓಡಾಡಿದ್ದಂತೆ ನಟಿಸಿ ಚಿನ್ನಾಭರಣ ಕಳವು ಮಾಡಿ ಪರಾರಿಯಾಗುತ್ತಿದ್ದಳು.

     ಜಯನಗರದ ಜಿಆರೆಸ್ ಕಲ್ಯಾಣಮಂಟಪದಲ್ಲಿ ಶನಿವಾರ ನಡೆದ ಮದುವೆಯಲ್ಲಿಯೂ ಮುನ್ನಿ ತನ್ನ ಕೈಚಳಕ ತೋರಿಸಿದ್ದಳು. ಕಲ್ಯಾಣ ಮಂಟಪಕ್ಕೆ ಸಂಬಂಧಿಗಳ ರೀತಿಯಲ್ಲಿ ಹೋಗಿದ್ದ ಮುನ್ನಿ ಕ್ಷಣ ಮಾತ್ರದಲ್ಲಿ 244 ಗ್ರಾಂ ಚಿನ್ನಾಭರಣವನ್ನು ಕದ್ದು ಮಾಯವಾಗಿದ್ದಳು.

     ಅಸಲಿಗೆ ಮುನ್ನಿ ಜಯನಗರಕ್ಕೆ ಶಾಪಿಂಗ್ ಗಾಗಿ ಬಂದಿದ್ದಳು. ಕಲ್ಯಾಣ ಮಂಟಪದಲ್ಲಿ ಮದುವೆ ನೋಡುತ್ತಿದ್ದಂತೆ ತನ್ನ ಕಾಯಕ ಶುರು ಹಚ್ಚಿಕೊಂಡಿದ್ದಳು.

     ಮೂರು ತಿಂಗಳ ಹಿಂದೆಯೂ ಇದೇ ಕಲ್ಯಾಣ ಮಂಟಪದಲ್ಲಿ ತನ್ನ ಕೈಚಳಕ ತೋರಿಸಿದ್ದ ವಿಚಾರ ತನಿಖೆಯ ವೇಳೆ ಬಯಲಾಗಿದೆ. ಸದ್ಯ ಮುನ್ನಿಯನ್ನು ಬಂಧಿಸಿರುವ ಪೊಲೀಸರು ಆಕೆಯಿಂದ 244 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link