ಬೆಂಗಳೂರು
ವಿವಾಹವಾಗಲು ನಿರಾಕರಿಸಿದ ಯುವತಿಯ ಮನೆಗೆ ನುಗ್ಗಿ ಆ್ಯಸಿಡ್ ಎರಚುವ ಬೆದರಿಕೆ ಹಾಕಿದ ಪಾಗಲ್ ಪ್ರೇಮಿಯೊಬ್ಬನನ್ನು ಜಗಜೀವನರಾಮನಗರ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.
ಜಗಜೀವನರಾಮನಗರದ ಫೈಸಲ್(25) ಬಂಧಿತ ಆರೋಪಿಯಾಗಿದ್ದಾನೆ,ಯುವತಿಯು ಬಿ.ಫಾರ್ಮ್ ವ್ಯಾಸಂಗ ಮಾಡುತ್ತಿದ್ದು,ತಾಯಿ ಹಾಗೂ ಸಹೋದರನ ಜೊತೆ ಜೆ.ಜೆ.ನಗರದಲ್ಲಿ ವಾಸುತ್ತಿದ್ದಾಳೆ.ಆರೋಪಿ ಫೈಸಲ್ ಯುವತಿಯ ಸಂಬಂಧಿಕನಾಗಿದ್ದಾನೆ.
ಪರಿಚಯವಿದ್ದ ಯುವತಿಯನ್ನು ಕಳೆದ ಫೆಬ್ರವರಿಯಿಂದ ತನ್ನನ್ನು ಮದುವೆಯಾಗುವಂತೆ ಪೀಡಿಸುತ್ತಿದ್ದು ಮಾದಕ ವ್ಯಸನಿ ಆಗಿರುವ ಫೈಸಲ್‍ನನ್ನು ಮದುವೆಯಾಗಲು ಆಕೆ ನಿರಾಕರಿಸಿ ಕುಟುಂಬ ಸಂಬಂಧಿ ಎಂಬ ಕಾರಣಕ್ಕೆ ಎಚ್ಚರಿಕೆ ನೀಡಿ ಸುಮ್ಮನಿದ್ದಳು.
ಇಷ್ಟಕ್ಕೆ ಸುಮ್ಮನೆ ಬಿಡದ ಫೈಸಲ್ ರೊಚ್ಚಿಗೆದ್ದು ಯುವತಿಯ ಮನೆಯಲ್ಲಿ ಯಾರೂ ಇಲ್ಲದೇ ಇದ್ದಾಗ ಮನೆಗೆ ಹೋಗಿ ರಂಪಾಟ ನಡೆಸಿದ್ದ.
ಮನೆ ಹಾಗೂ ವಾಹನದ ಮೇಲೆ ಕಲ್ಲು ತೂರಿ ಜಖಂಗೊಳಿಸಿ ವಿವಾಹವಾಗದಿದ್ದರೆ ಆ್ಯಸಿಡ್ ಎರಚುವ ಬೆದರಿಕೆ ಹಾಕಿದ್ದ.ಈ ಸಂಬಂಧ ಯುವತಿಯು ನೀಡಿದ ದೂರು ದಾಖಲಿಸಿ ಪ್ರಕರಣ ದಾಖಲಿಸಿಕೊಂಡ ಪೆÇಲೀಸರು ಪಾಗಲ್ ಪ್ರೇಮಿ ಫೈಸಲ್‍ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








