ಬೆಂಗಳೂರು
ನಗರದ ಸುಗಮ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿರುವ ಕಾರ್ಮಿಕರನ್ನು ಹೊತ್ತು ಸಾಗುವ ಗೂಡ್ಸ್ ವಾಹನಗಳಿಗೆ ಕಡಿವಾಣ ಹಾಕಲು ನಗರದ ಸಂಚಾರ ಪೊಲೀಸರು ಮುಂದಾಗಿದ್ದಾರೆ.
ಜನರನ್ನು ಕರೆದುಕೊಂಡು ಹೋಗುವ ಗೂಡ್ಸ್ ವಾಹನಗಳ ವಿರುದ್ಧ ಅಭಿಯಾನ ಆರಂಭಿಸಿರುವ ವಿವಿಪುರಂ ಸಂಚಾರ ಪೋಲಿಸರು ರಸ್ತೆಯಲ್ಲಿ ಗೂಡ್ಸ್ ವಾಹನಗಳನ್ನು ತಡೆದು ದಂಡ ಹಾಕಿದ್ದಾರೆ.ನಗರದಲ್ಲಿ ಸಾಮಗ್ರಿಗಳನ್ನು ಸಾಗಿಸುವ ಜೊತೆಗೆ ಕಾರ್ಮಿಕರನ್ನು ಅದೇ ಸಾಮಗ್ರಿಗಳ ಜೊತೆ ಕರೆದೊಯ್ಯವ ಪ್ರವೃತ್ತಿಯೊಂದನ್ನು ಗೂಡ್ಸ್ ವಾಹನಗಳನ್ನು ಬೆಳಸಿಕೊಂಡಿವೆ. ಈ ವಾಹನಗಳು ಸಾಮಥ್ರ್ಯಕ್ಕಿಂತ ಭಾರದ ವಸ್ತುಗಳನ್ನು ಹೊತ್ತು ರಸ್ತೆ ಸಾಗುವಾಗ ಭಾರ ಹೆಚ್ಚಾಗಿ ಉರುಳಿ ಬಿದ್ದು ಅಫಘಾತಗಳು ಸಂಭವಿಸುತ್ತಿದೆ. ಇದನ್ನು ಕಂಡ ಪೋಲಿಸರು ಅಕ್ರಮ ಗೂಡ್ಸ್ ವಾಹನಗಳ ವಿರುದ್ಧ ಅಭಿಯಾನ ಆರಂಭಿಸಿದ್ದಾರೆ.
ನಗರದ ಕೆ.ಆರ್.ಮಾರುಕಟ್ಟೆ, ಮೆಜೆಸ್ಟಿಕ್, ಚಾಮರಾಜಪೇಟ್, ವಿವಿಪುರಂ, ಆರ್‍ಎಂಸಿ, ಯಶವಂತಪುರ ಸೇರಿದಂತೆ ಗೂಡ್ಸ ವಾಹನದಲ್ಲಿ ಕಾರ್ಮಿಕರನ್ನು ಹೊತ್ಯೂಯುವುದು ಅಧಿಕವಾಗಿ ಕಂಡು ಬಂದಿದೆ. ಸಂಚಾರಿ ಪೋಲಿಸರು ಇಂತಹ ವಾಹನಗಳಿಗೂ ನೋಟೀಸ್ ಜಾರಿ ಮಾಡಿದ್ದರೂ ಕಣ್ತಪ್ಪಿಸಿಕೊಂಡು ಓಡಾಡುವ ವಾಹನಗಳು ಹಿಡಿದು ಪೋಲಿಸರು ದಂಡ ಹಾಕುತ್ತಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








