ಸೇತುವೆ ನವೀಕರಣಕ್ಕಾಗಿ ರೈತ ಸಂಘ ಪ್ರತಿಭಟನೆ

ಚಿತ್ರದುರ್ಗ

    ಜಿಲ್ಲೆಯ ಗೌರಮ್ಮನಹಳ್ಳಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿರುವ ಅಂಡರ್‍ಪಾಸನ್ನು(ಕೆಳಸೇತುವೆ) ನವೀಕರಣ ಮಾಡುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿದರು.

    ಸುಮಾರು 6)(6 ಅಡಿ ಅಂಡರ್ ಪಾಸ್ ಇದ್ದು ಇದಕ್ಕೆ ಹೊಂದಿಕೊಂಡು ಗೌರಮ್ಮನಹಳ್ಳಿ ಯಿಂದ ಶಿವಮೊಗ್ಗ ಪಿಡಬ್ಲ್ಯೂಡಿ ಜಿಲ್ಲಾ ಮುಖ್ಯರಸ್ತೆ ಇದೆ. ಈ ಅಂಡರ್ ಪಾಸನಲ್ಲಿ ನಾಲ್ಕು ಅಡಿಗಳಷ್ಟು ನೀರು ನಿಲ್ಲುವುದರಿಂದ ಸಾರ್ವಜನಿಕರು ಓಡಾಡಲು ಆಗುವುದಿಲ್ಲ. ಈಗ ಮತ್ತೆ ಸರ್ವಿಸ್ ರಸ್ತೆ ಮಡಲು 8 ಅಡಿ ಆಳ ತೆಗೆದು ಅವೈಜ್ಞಾನಿಕ ಅಂಡರ್‍ಪಾಸಿಂಗ್ ನಿರ್ಮಾಣ ಕಾಮಗಾರಿ ಮಾಡಲು ಮುಂದಾಗಿದ್ದಾರೆ ಎಂದು ದೂರಿದ್ದಾರೆ.

     ಈ ಬಗ್ಗೆ ಇಲಾಖೆಯ ಇಂಜಿನಿಯರ್‍ಗಳ ಗಮನಕ್ಕೆ ತಂದರೂ ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. 26 ಕಿ.ಮೀ ಒಂದು ಅಂಡರ್ ಪಾಸ್ ಸೇತುವೆ ಮಾಡುತ್ತೇವೆ ಎಂದು ಹೇಳುತ್ತಾರೆ. ಆದರೆ ಕಲ್ಕಿಂಟೆಯಿಂದ ಲಕ್ಷ್ಮೀಸಾಗರದ 2.50 ಕಿ.ಮೀ ಇದ್ದು ಈ ಮಧ್ಯೆ ಸುಸಜ್ಜಿತವಾದ 12)(12 ಅಡಿ 4 ಅಂಡರ್‍ಪಾಸ್ ನಿರ್ಮಾಣ ಮಾಡುತ್ತಿದ್ದಾರೆ. ಇದರಿಂದ ಜನರಿಗೆ ತೊಂದರೆಯಾಗಲಿದೆ. ಸರ್ವಿಸ್ ರಸ್ತೆಯಿಂದ 600 ಮೀಟರ್‍ನಲ್ಲಿ ದಾವಣಗೆರೆ ತುಮಕೂರು ನೇರ ರೈಲ್ವೆ ಮಾರ್ಗವಾಗಿದ್ದು ಗೌರಮ್ಮನಹಳ್ಳಿ ಹತ್ತಿರ ಗೂಡ್ಸ್‍ಸೆಡ್ ನಿರ್ಮಾಣಕ್ಕೆ ನಕಾಶೆಯಾಗಿರುತ್ತದೆ. ಸ್ಥಳ ಪರಿಶೀಲನೆ ಮಾಡಿ ಸುಸಜ್ಜಿತವಾದ ಅಂಡರ್‍ಪಾಸ್ ನಿರ್ಮಾಣ ಮಾಡುವಂತೆ ಮನವಿ ಮಾಡಿದರು.

     ರೈತ ಸಂಘದ ಮುಖಂಡರಾದ ಕೆ.ಪಿ.ಭೂತಯ್ಯ, ರಾಜ್ಯ ಪ್ರಧಾನಕಾರ್ಯದರ್ಶಿ ಟಿ.ನುಲೇನೂರು ಶಂಕರಪ್ಪ, ಸಿ.ಆರ್.ತಿಮ್ಮಣ್ಣ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಉಪಾಧ್ಯಕ್ಷ ಜಿ.ಸುರೇಶ್‍ಬಾಬು ಹಾಗೂ ಇತರರು ಭಾಗವಹಿಸಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link