ಅಪ್ರಾಪ್ತೆಯ ಅಪಹರಣ ಪ್ರಕರಣ : ಕೇರಳದಲ್ಲಿ ಸೆರೆಸಿಕ್ಕ ಕಿಡ್ ನ್ಯಾಪರ್..!!!

ಪುತ್ತೂರು:

    ತಾಲ್ಲೂಕಿನ ಕಟ್ಟತ್ತಾರು ಗ್ರಾಮ ನಿವಾಸಿ ಅಪ್ರಾಪ್ತ ವಯಸ್ಕ ಕಾಲೇಜು ವಿದ್ಯಾರ್ಥಿನಿಯನ್ನು ಕಿಡ್ ನ್ಯಾಪ್ ಮಾಡಿದ ಪ್ರಕರಣದಲ್ಲಿ ಅಸ್ಸಾಂ ಮೂಲದ ಅಖ್ತರ್‌ ಹುಸೈನ್‌ನನ್ನು ಪುತ್ತೂರು ಗ್ರಾಮಾಂತರ ಪೊಲೀಸರು ಕೇರಳದ ಗ್ರಾಮವೊಂದರಲ್ಲಿ ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ :

      ಪರೀಕ್ಷೆಯಿದ್ದ ಕಾರಣ ಸಹಪಾಠಿಯ ಮನೆಗೆ ಓದಿಕೊಳ್ಳಲು ತೆರಳುತ್ತೇನೆ ಎಂದು ಮಾ.8ರ ಮಧ್ಯಾಹ್ನ ಮನೆಯಿಂದ ತೆರಳಿದ್ದ ವಿದ್ಯಾರ್ಥಿನಿ ಬಳಿಕ ನಾಪತ್ತೆಯಾಗಿದ್ದಳು. ವಿದ್ಯಾರ್ಥಿನಿಯ ತಂದೆಗೆ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಅಸ್ಸಾಂ ಮೂಲದ ಅಖ್ತರ್‌ ಹಸೈನ್‌ ಕೂಡ ನಾಪತ್ತೆಯಾಗಿದ್ದ ಹಿನ್ನೆಲೆ ಯಲ್ಲಿ ಯುವತಿಯ ತಂದೆ ಅಖ್ತರ್‌ ಪ್ರೀತಿಯ ನಾಟಕವಾಡಿ ಅಪಹರಿಸಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದರು.

     ದೂರು ದಾಖಲಿಸಿಕೊಂಡು ಕಾರ್ಯಾಚರಣೆಗೆ ಇಳಿದ ಸಂಪ್ಯ ಪೊಲೀಸರು ಎರಡು ವಾರಗಳ ಬಳಿಕ ಯುವತಿಯನ್ನು ಅಸ್ಸಾಂನಲ್ಲಿ ಪತ್ತೆ ಹಚ್ಚಿದ್ದರು. ಆದರೆ ಯುವಕ ಅಖ್ತರ್‌ ತಪ್ಪಿಸಿಕೊಂಡು ನಾಪತ್ತೆಯಾಗಿದ್ದನು. ಸಂಪ್ಯ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಆರೋಪಿಯ ವಿರುದ್ಧ ಪೋಕ್ಸೋ ಕಾಯಿದೆಯಲ್ಲಿ ಪ್ರಕರಣ ದಾಖಲಾಗಿತ್ತು.

      ಮುಂದುವರೆದ ತನಿಖೆಯ ಭಾಗವಾಗಿ ಜೂ. 3 ರಂದು ಆರೋಪಿ ಅಖ್ತರ್‌ನನ್ನು ಹುಡುಕಿಕೊಂಡು ಕೇರಳದ ಮುಳ್ಳೇರಿಯ ಸಮೀಪದ ನೆಟ್ಟಣಿಗೆಯಲ್ಲಿ ಸಂಪ್ಯ ಠಾಣಾ ಎಸ್‌ಐ ಸಕ್ತಿವೇಲು ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ , ಆರೋಪಿಯನ್ನು ಸದ್ಯ ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link