ರಂಗಭೂಮಿ, ಸಾಹಿತ್ಯಕ್ಷೇತ್ರಕ್ಕೆ ಗಿರೀಶ್ ಕಾರ್ನಾಡ್‍ರವರ ಕೊಡುಗೆ ಅಪಾರ : ಹೆಚ್.ಆರ್.ಶಂಕರ್

ಹಿರಿಯೂರು :

      ಭಾರತೀಯ ಸಾಹಿತ್ಯ, ರಂಗಭೂಮಿ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಗಿರೀಶ್ ಕಾರ್ನಾಡ್‍ರವರ ನಿಧನದಿಂದ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಠವಾಗಿದೆ ಎಂಬುದಾಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹೆಚ್.ಆರ್.ಶಂಕರ್ ಹೇಳಿದರು.

       ನಗರದ ಪೂರ್ಣಪ್ರಜ್ಞಾ ಶಾಲೆಯಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಗಿರೀಶ್ ಕಾರ್ನಾಡ್‍ರವರ ಭಾವಪೂರ್ಣ ಶ್ರದ್ಧಾಂಜಲಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

       ಕನ್ನಡ ಸಾಹಿತ್ಯದಲ್ಲಿ ನಾಟಕಗಳು, ಚಲನಚಿತ್ರರಂಗಕ್ಕೆ ಕೊಡುಗೆ ನೀಡಿ, ಯಯಾತಿ, ತಲೆದಂಡ, ನಾಗಮಂಡಲ, ಅಗ್ನಿಮತ್ತುಮಳೆ ಹೀಗೆ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ ಎಂದು ಹೇಳಿದರು.ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷರಾದ ಜಿ.ಪಿ.ಚಿತ್ತಯ್ಯ ಮಾತನಾಡಿ, ಕೇಂದ್ರ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಭಾರತೀಯ ರಂಗಭೂಮಿಗೆ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

        ಕರ್ನಾಟಕ ಜಾನಪದ ಪರಿಷತ್ತು ತಾಲ್ಲೂಕು ಘಟಕದ ಅಧ್ಯಕ್ಷರಾದ ಎಸ್.ಜಿ.ರಂಗಸ್ವ್ವಾಮಿ ಸಕ್ಕರ ಮಾತನಾಡಿ, ಮರಾಠಿ ರಂಗಭೂಮಿ, ಕನ್ನಡ ರಂಗಭೂಮಿಗೆ ವಿಶ್ವದಲ್ಲಿ ವಿಶೇಷ ಮನ್ನಣೆ ತಂದುಕೊಟ್ಟರು. ಶಂಕರ್‍ನಾಗ್ ಮತ್ತು ಅನಂತ್‍ನಾಗ್‍ರವರನ್ನು ಕನ್ನಡ ಚಲನಚಿತ್ರರಂಗಕ್ಕೆ ಪರಿಚಯಿಸಿದರು. ನಟಿ ನಂದಿನಿಗೆ ಮೊದಲ ರಾಷ್ಟ್ರ ಪ್ರಶಸ್ತಿಯನ್ನು ಕಾಡು ಚಲನಚಿತ್ರದಲ್ಲಿ ಬರಲು ಕಾರಣಕರ್ತರು ಆಗಿದ್ದರು, ಇವರ ಕೊಡುಗೆ ಇಂದಿಗೂ ಅನನ್ಯವಾಗಿದೆ ಎಂದು ಹೇಳಿದರು.

        ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷರಾದ ಎಂ.ಎಸ್.ರಾಘವೇಂದ್ರ, ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಕೆ.ಎಂ.ಜಗನ್ನಾಥ್, ಐಮಂಗಲ ಹೋಬಳಿ ಘಟಕದ ಕ.ಸಾ.ಪ ಅಧ್ಯಕ್ಷರಾದ ಹರ್ತಿಕೋಟೆ ಮಹಾಸ್ವಾಮಿ, ರೋಟರಿಯ ಪ್ರಶಾಂತ್, ಹೆಚ್.ಕೃಷ್ಣಮೂರ್ತಿ, ರಾಕೇಶ್, ಅನಿತಾ, ಕಮಲಾಕ್ಷಮ್ಮ, ಸಬ್ರಿನ್‍ತಾಜ್, ಮಹಿಮುಂತಾಜ್, ಹಾಗೂ ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap