ತಿಪಟೂರು :
ತುಮಕೂರಿನ ಕೈಗಾರಿಕ ಪ್ರದೇಶದಲ್ಲಿ ವರದಿ ಮಾಡಲು ತೆರಳಿದಂತೆ ಮಾಧ್ಯಮದವರ ಮೇಲೆ ಹಲ್ಲೆಯನ್ನು ಖಂಡಿಸಿ ತಿಪಟೂರು ತಾಲ್ಲೂಕಿನ ಕಾರ್ಯನಿರತ ಪರ್ತಕರ್ತರುಗಳು ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿ ರಾಜ್ಯಸರ್ಕಾರಕ್ಕೆ ತಹಶೀಲ್ದಾರ್ ಆರತಿಯವರ ಮುಖಾಂತರ ಮನವಿ ಸಲ್ಲಿಸಿದರು.
ನಗರದ ತಾಲ್ಲೂಕು ಕಛೇರಿಯ ಮುಂಭಾಗದಲ್ಲಿ ತಿಪಟೂರು ತಾಲ್ಲೂಕಿನ ಕಾರ್ಯನಿರತ ಪರ್ತಕರ್ತರುಗಳು ಧರಣಿ ನಡೆಸಿ ಮಾಧ್ಯಮದವರಿಗೆ ಹಾಗೂ ಪರ್ತಕರ್ತರಿಗೆ ಸೂಕ್ತ ಭದ್ರತೆಯ ಜೊತೆಗೆ ಹಲ್ಲೆ ಮಾಡಿದ ಕಿಡಿಗೇಡಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಜ್ಜಜ್ಜಿ ರಾಜಣ್ಣ, ತುಮಕೂರಿನ ಸತ್ಯಮಂಗಲದ ಕೈಗಾರಿಕಾ ಪ್ರದೇಶದ ಬೇಳೂರ್ ಬಯೋಟೆಕ್ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟದ ಬಗ್ಗೆ ವರದಿಮಾಡಲು ತೆರಳಿದಂತಹ ಮಾಧ್ಯಮದವರ ಮೇಲೆ ಕಾರ್ಖಾನೆಯ ಸಿಬ್ಬಂದಿ ಹಾಗೂ ಗುಂಡಾಗಳನ್ನು ಬಳಸಿ ದೈಹಿಕವಾಗಿ ಮಾರಣಾಂತಿಕವಾಗಿ ಹಲ್ಲೆ ಮಾಡಿರುವುದು ಖಂಡನೀಯ.
ಸಂವಿಧಾನದ ನಾಲ್ಕನೇಯ ಅಂಗ ಎಂದೇ ಪರಿಗಣಿಸಿರುವ ಮಾಧ್ಯಮದವರ ಮೇಲೆ ಇಂತಹ ಪ್ರಕರಣಗಳು ನಡೆಯುತ್ತಲ್ಲೇ ಇದ್ದು ಸತ್ಯಾಸತ್ಯತೆಗಳನ್ನು ಹೊರತೆಗೆದು ವಂಚಿತರಿಗೆ, ಶೋಷಿತರಿಗೆ ನ್ಯಾಯ ದೊರಕಿಸಿಕೊಡುವುದು ಕಷ್ಟದ ಸಂಗತಿಯಾಗಲಿದೆ. ಪರ್ತಕರ್ತರಿಗೆ ತಮ್ಮ ವೃತ್ತಿಯಲ್ಲಿ ಅಭದ್ರತೆ ಕಾಡತೊಡಗಿಸಿದರೆ ನಿರ್ಭಿತವಾಗಿ ವರದಿಗಳನ್ನು ಮಾಡಲು ಸಾಧ್ಯವಾಗದಂತಹ ಪರಿಸ್ಥಿತಿ ಎದುರಗಲಿದೆ.
ರಾಜ್ಯಸರ್ಕಾರದ ಉಪಮುಖ್ಯಂತ್ರಿಗಳು, ಗೃಹಸಚಿವರ ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ನಡೆಯುತ್ತಿದ್ದು ಸೂಕ್ತ ಕಾನೂನುನ್ನು ರೂಪಿಸಿ ಮಾಧ್ಯಮ ಹಾಗೂ ಕಾರ್ಯನಿತರ ಪರ್ತಕರ್ತರುಗಳಿಗೆ ರಕ್ಷಣೆ ನೀಡಬೇಕಿದೆ. ಹಲ್ಲೆ ಮಾಡಿದಂತಹ ಕಾರ್ಖಾನೆಯ ಲೈಸೆನ್ಸ್ನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಮಾಲೀಕರಿಗೆ ಕಾರ್ಖಾನೆ ಮುಚ್ಚುವಂತೆ ಆದೇಶಿಸಬೇಕು. ಶೀಘ್ರವೇ ಚುರುಕಾಗಿ ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯನ್ನು ನೀಡಿಬೇಕು ಎಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್ ಆರತಿ, ವರದಿ ಮಾಡಲು ತೆರಳಿದ ಮಾಧ್ಯಮದವರ ಮೇಲಿನ ಹಲ್ಲೆ ನಿಜಕ್ಕೂ ದುಃಖದ ಸಂಗತಿ. ನಿಖರ ವರದಿಯಿಂದ ಅನೇಕ ಸತ್ಯಗಳು ಬೆಳಕಿಗೆ ಬರಲಿದ್ದು ವಂಚಿತರಿಗೆ ನ್ಯಾಯ ದೊರಕಲು ಶ್ರಮಿಸುವ ಕಾರ್ಯನಿರತ ಪರ್ತಕರ್ತರುಗಳಿಗೆ ನಮ್ಮ ಸಂಪೂರ್ಣ ಬೆಂಬಲವಿದೆ. ಮನವಿಯನ್ನು ರಾಜ್ಯಸರ್ಕಾರಕ್ಕೆ ಕಳುಹಿಸಿಕೊಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಿಪಟೂರು ತಾಲ್ಲೂಕಿನ ಕಾರ್ಯನಿರತ ಪರ್ತಕರ್ತರುಗಳಾದ ಭಾನುಪ್ರಶಾಂತ್, ಬಿ.ರಂಗಸ್ವಾಮಿ, ಆನಂದ್, ಭಾಸ್ಕರ್, ರಂಗನಾಥ್ ಪಾರ್ಥಸಾರಥಿ, ಮಂಜುನಾಥ್ ಹಾಲ್ಕುರಿಕೆ, ಸುಪ್ರತೀಕ್ ಹಳೇಮನೆ, ಕುಮಾರ್, ಕಿರಣ್ ಕುಮಾರ್, ಬಿ.ರವೀಂದ್ರ ಕುಮಾರ್, ಪ್ರಶಾಂತ್ ಕರೀಕೆರೆ ಸೇರಿಂದತೆ ಮತ್ತಿತರರಿದ್ದರು.