ಮಹಾಲಯ ಅಮಾವಾಸ್ಯೆಯ ದಿನದಂದು ವಿಧ್ಯಾರ್ಥಿ ಸಾವು

ಕೊರಟಗೆರೆ ;-

        ಆಟವಾಡುತ್ತಿದ್ದ 4 ನೇ ತರಗತಿ ವಿಧ್ಯಾರ್ಥಿಯೋರ್ವ ಓಡಿ ಬರುವರಭಸದಲ್ಲಿ ಆಕಸ್ಮಿಕವಾಗಿ ಶಾಮಿಯಾನಕ್ಕೆ ಹಾಕುವ ಕಬ್ಬಿಣದರಾಡಿಗೆ ತಗುಲಿ  ವಿಧ್ಯಾರ್ಥಿಯ ಕಣ್ಣಿನಿಂದತೂರಿ ತಲೆಯ ಹಿಂಭಾಗದಿಂದ ಹೊರಬಂದ ಪರಿಣಾಮ ತೀವ್ರ ತರದಗಾಯವಾಗಿ ಚಿಕಿತ್ಸೆ ಪಲಿಸದೆ ಗುರುವಾರದಂದು ಕೊನೆಯುಸಿರೆಳೆದಿರುವ ಘಟನೆ ಕೊರಟಗೆರೆ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿಜರುಗಿದೆ.

         ತಾಲ್ಲೂಕಿನ ಹೊಳವನಹಳ್ಳಿ ಗ್ರಾಮದಇಂದಿರಾ ಕಾಲೋನಿ ವಾಸಿ ಶಬೀರ್ ಅಲಿ ಎಂಬುವರ ಮಗ ವಸಿಹೈದರ್ (9ವರ್ಷ) ಎಂಬ ವಿಧ್ಯಾರ್ಥಿಯೇ ಶಾಮಿಯಾನದ ರಾಡು ಕಣ್ಣಿನಿಂದ ತಲೆಯವರೆಗೂತೂರಿ ಸಾವಿಗೀಡಾದ ದುರ್ದೈವಿಯಾಗಿದ್ದು, ಈತತನ್ನ ಮನೆಯಿಂದ ರೋಡಿನ ಕಡೆ ಓಡಿ ಬರುವ ಸಂಧರ್ಬದಲ್ಲಿ ಆಕಸ್ಮಿಕವಾಗಿ ಈ ದುರ್ಘಟನೆ ಜರುಗಿದೆಎನ್ನಲಾಗಿದೆ.

        ಮೃತ ವಿಧ್ಯಾರ್ಥಿ ವಸಿಹೈದರ್ ಹೊಳವನಹಳ್ಳಿಯ ಎಲ್, ಬಿ, ಎಸ್‍ಆಂಗ್ಲ ಶಾಲೆಯಲ್ಲಿ (ಲಾಲ್ ಬಹದ್ದೂರ್ ಶಾಸ್ರೀ) 4 ನೇ ತರಗತಿ ಓದುತ್ತಿದ್ದೂ , ರಜೆಯಕಾರಣದಿಂದ ವಿಧ್ಯಾರ್ಥಿ ಮನೆಯಲ್ಲಿದ್ದ ಕಾರಣಆ ಟವಾಡುವ ಸಂಧರ್ಬದಲ್ಲಿ ಈ ದುರ್ಘಟನೆ ಜರುಗಿದೆ ಎನ್ನಲಾಗಿದೆ.

 ಮಹಾಲಯ ಅಮಾವಾಸ್ಯೆಯ ದಿನದಂದು ಈ ದುರ್ಘಟನೆ;- ಮಹಾಲಯಅಮಾವಾಸ್ಯೆಯಂದು ಈ ದುರ್ಘಟನೆಜರುಗಿದ್ದು,ಇವರ ಪೋಷಕರುಇಂದುಅಮಾವಾಸ್ಯೆಜಾಗೃತಿಯಾಗಿರಿಎಂದು ಸುಮಾರು ಬಾರಿ ಮಕ್ಕಳಿಗೆ ಬೆಳಿಗ್ಗೆಯಿಂದಲೂ ಎಚ್ಚರಿಸುತ್ತಿದ್ದರುಎನ್ನಲಾಗಿದ್ದು, ಈ ದುರ್ಘಟನೆಜರುಗಿದ ಬಳಿಕ ಪೋಷಕರು ಮತ್ತಷ್ಟು ಗಾಸಿಗೊಳಗಾಗಿ ದಿಕ್ಕು ತೋಚದ ಪರಿಸ್ಥಿತಿ ತಲುಪಿ ಮಗುವಿನ ಮುಂದೆ ನೋವು ತೋಡಿಕೊಳ್ಳುತ್ತಿದ್ದದ್ದು ಸಾಮಾನ್ಯವಾಗಿತ್ತು.

ಘಟನೆ ಹಿನ್ನೆಲೆ     ವಿಧ್ಯಾರ್ಥಿ ವಸಿಹೈದರ್ ಪ್ರತಿ ದಿನದಂತೆ ಈ ದಿನವೂ ಇತರೆ ಸ್ನೇಹಿತರುಗಳೊಂದಿಗೆ ಆಟವಾಡುತ್ತಿದ್ದ ಎನ್ನಲಾಗಿದ್ದು, ವಿಧ್ಯಾರ್ಥಿಯ ಗ್ರಹಚಾರವೋ ಏನೋ ಆಟವಾಡುತ್ತಿದ್ದ ಸ್ನೇಹಿತರಿಗೆ ಮನೆಗೆ ಹೋಗಿ ಬರುತ್ತೇನೆಎಂದು ಹೇಳಿ ವೇಗವಾಗಿ ಮನೆಯಕಡೆಗೆ ಓಡಿ ಹೋಗುತ್ತಿದ್ದಎನ್ನಲಾಗಿದ್ದು ಈ ಸಂಧರ್ಬದಲ್ಲಿ ಹೊಳವನಹಳ್ಳಿಯ ಬಸವಣ್ಣದೇವಸ್ಥಾನದ ಮುಂಭಾಗದಲ್ಲಿ ಎ  , ಬಿ , ಎಸ್‍ ಶಾಮಿಯಾನದ ಅಂಗಡಿ ಯವರು ವಾಹನವೊಂದರಲ್ಲಿ ಶಾಮಿಯಾನ ಅಳವಡಿಸಲು ಬಳಸುವ ಕಡ್ಡಿಯ ಮುಂಭಾಗದಲ್ಲಿಕಬ್ಬಿಣದರಾಡು ಜೋಡಿಸಿರುವ ಕಡ್ಡಿಗಳನ್ನು ಈ ವಾಹನದಲ್ಲಿ ತುಂಬಿದ್ದರು ಎನ್ನಲಾಗಿದ್ದು, ಮೃತ ವಿಧ್ಯಾರ್ಥಿ ವಸಿಹೈದರ್ ಅತೀ ವೇಗವಾಗಿ ಓಡಿ ಬರುವ ಸಂಧರ್ಬದಲ್ಲಿ ಕಬ್ಬಿಣದರಾಡು ಗೋಚರವಾಗದೆ ವಿಧ್ಯಾರ್ಥಿ ಏಕಾಏಕಿ ಕಬ್ಬಿಣದ ರಾಡಿಗೆ ತಲೆ ಹೊಡೆದುಕೊಂಡ ಕಾರಣ ಎರಡು ಕಬ್ಬಿಣದ ರಾಡುಗಳು ಕಣ್ಣಿನಿಂದ ತೂರಿ ತಲೆಯ ಭಾಗದಲ್ಲಿ ಹೊರಬಂದ ಕಾರಣ ವಿಧ್ಯಾರ್ಥಿ ಆ ಬಿಸಿಯಲ್ಲಿಯೇ ತನ್ನ ತಲೆಯನ್ನು ಹೊರಗೆ ಕಿತ್ತುಕೊಂಡು ಕಿರುಚಾಡಿ ಮೂರ್ಛೇ ಬಿದ್ದು ತೀವ್ರ ರಕ್ತ ಸ್ರಾವವಾಗಿ ಪೋಷಕರು ಆಸ್ಪತ್ರೆಗೆ ಸಾಗಿಸಿದರಾದರೂ ಪ್ರಯೋಜನವಾಗದೆ ಕೊನೆಯುಸಿರೆಳೆದಿದ್ದಾನೆ ಎನ್ನಲಾಗಿದೆ ,

        ಈ ಸಂಬಂಧ ಕೊರಟಗೆರೆ ಪೋಲಿಸ್ ಠಾಣೆಯಲ್ಲಿ ಪ್ರಕರಣಧಾಖಲಾಗಿದ್ದು , ಸಿ, ಪಿ, ಐ ಮುನಿರಾಜು ಹಾಗೂ ಪಿ,ಎಸೈ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಹೆಚ್ಚಿನತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap