ಬಂಟ್ವಾಳ:
ದಕ್ಷಿಣ ಕನ್ನಡದ ಜೀವ ನದಿ ನೇತ್ರಾವತಿಗೆ ಕಟ್ಟಲಾಗಿದ್ದ ತುಂಬೆ ಬಂದಿದ್ದು ಹೆಚ್ಚುವರಿ ನೀರನ್ನು ಅಣೆಕಟ್ಟಯ ಗೇಟ್ ಗಳನ್ನು 5 ಮೀಟರ್ ಎತ್ತರಕ್ಕೆ ನೀರನ್ನು ಕಾಯ್ದುಕೊಂಡು ಗೇಟ್ ಸಂಖ್ಯೆ 5ನ್ನು ಒಂದಡಿಯಷ್ಟು ಎತ್ತರಕ್ಕೆ ತೆರೆದು ಹೆಚ್ಚುವರಿ ನೀರನ್ನು ಹರಿಯ ಬಿಡಲಾಗಿದೆ.
ಕಳೆದ ವರ್ಷ ಉತ್ತಮ ಮಳೆಯಾಗಿತ್ತು, ಹೆಚ್ಚುವರಿ ನೀರನ್ನು ಮೇ ಅಂತ್ಯದಲ್ಲಿ ಹೊರಗೆ ಬಿಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ ಮಳೆಯಾಗದೆ ಎಪ್ರಿಲ್, ಮೇಯಲ್ಲಿ ಗಂಭೀರ ನೀರಿನ ಸಮಸ್ಯೆ ತಲೆದೋರಿತ್ತು. ಜೂ. 10ರ ತನಕವೂ ನದಿ ತುಂಬಿರಲಿಲ್ಲ. ಅನಂತರ ನದಿಯ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆಯಾದ ಕಾರಣ ನೀರು ಹರಿದುಬಂದಿತ್ತು. ಜೂ. 20ರಂದು ಶಂಭೂರು ಎಎಂಆರ್ ಅಣೆಕಟ್ಟಿನಿಂದಲೂ ನೀರನ್ನು ಹೊರಗೆ ಬಿಡುವ ಮೂಲಕ ವಿದ್ಯುತ್ ಉತ್ಪಾದನೆಗೂ ಕ್ರಮ ಕೈಗೊಳ್ಳಲಾಗಿದೆ ಎಂದು ತಳಿದು ಬಂದಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








