ಭೀಮನಾಯ್ಕರ ಆರೋಪದಲ್ಲಿ ಹುರುಳಿಲ್ಲ : ಚಂದ್ರನಾಯ್ಕ

ಹೂವಿನಹಡಗಲಿ :

     ಹಗರಿಬೊಮ್ಮನಹಳ್ಳಿ ಶಾಸಕರಾದ ಭೀಮನಾಯ್ಕರು ಕೌಶಲ್ಯಾಭಿವೃದ್ದಿ ಹಾಗೂ ಮುಜರಾಯಿ ಸಚಿವರಾದ ಪಿ.ಟಿ.ಪರಮೇಶ್ವರನಾಯ್ಕರ ಮೇಲೆ ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದು ಬಂಜಾರ ಸಮಾಜದ ಮುಖಂಡರು ಹಾಗೂ ಕಾಂಗ್ರೆಸ್ ಇಟ್ಟಿಗಿ ಬ್ಲಾಕ್ ಎಸ್.ಸಿ. ಘಟಕದ ಮಾಜಿ ಅಧ್ಯಕ್ಷರಾದ ಎಲ್.ಚಂದ್ರನಾಯ್ಕ ಹೇಳಿದರು.

       ಅವರು ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಮಾಲ್ವಿ ಜಲಾಶಯಕ್ಕೆ ಮಂಜೂರಾಗಿರುವ 153 ಕೋಟಿ ರೂಗಳಲ್ಲಿ ನನಗೆ ಕಮಿಷನ್ ನೀಡಬೇಕೆಂದು ಸಚಿವ ಪಿ.ಟಿ.ಪರಮೇಶ್ವರನಾಯ್ಕ ಕೇಳಿದ್ದಾರೆ. ಮತ್ತು ಅಲ್ಲಿಯವರೆಗೆ ಕಾಮಗಾರಿ ಅಡಿಗಲ್ಲು ಸ್ಥಾಪನೆಗೆ ಬಿಡುವುದಿಲ್ಲ ಎಂದು ಹೇಳಿದ್ದಾರೆ ಎಂದು ಶಾಸಕರಾದ ಭೀಮನಾಯ್ಕರು ಹೇಳಿರುವುದು ಸತ್ಯಕ್ಕೆ ದೂರವಾಗಿದೆ ಎಂದರು.

     ಈಗಾಗಲೇ ಬಂಜಾರ ಸಮಾಜದಲ್ಲಿ ರಾಜ್ಯಮಟ್ಟದ ನಾಯಕರಾಗಿ ಪಿ.ಟಿ.ಪರಮೇಶ್ವರನಾಯ್ಕರವರು ಬೆಳೆದಿದ್ದು, ನಮ್ಮ ಸಮಾಜದಲ್ಲಿ ಪ್ರಥಮಬಾರಿಗೆ ಎರಡು ಬಾರಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಂತಹ ಒಬ್ಬ ಮೇರು ವ್ಯಕ್ತಿಗೆ ಶಾಸಕ ಭೀಮನಾಯ್ಕರವರು ಪುಟಗೋಸಿ ಸಚಿವ ಎನ್ನುವ ಪದ ಬಳಕೆ ಮಾಡಿರುವುದು ಖಂಡನೀಯ. ಅವರ ಪ್ರಗತಿಯನ್ನು ಸಹಿಸದ ಕೆಲವರು ಇಂತಹ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ, ತೇಜೋವದೆ ಮಾಡುತ್ತಿದ್ದಾರೆ ಎಂದರು. ರಾಜ್ಯದ ಬಂಜಾರ ಸಮುದಾಯ ಸಚಿವ ಪಿ.ಟಿ. ಪರಮೇಶ್ವರನಾಯ್ಕರ ಬೆಂಬಲಕ್ಕೆ ಇದೆ ಎಂದು ಹೇಳಿದರು.

     ಶಾಸಕ ಭೀಮನಾಯ್ಕರು ಕೂಡಲೇ ತಮ್ಮ ಹೇಳಿಕೆಯನ್ನು ಹಿಂಪಡೆದು, ಸಚಿವರಾದ ಪಿ.ಟಿ.ಪರಮೇಶ್ವರನಾಯ್ಕರವರನ್ನು ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು. ಈ ಕುರಿತು ಈಗಾಗಲೇ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಶಾಸಕ ಭೀಮನಾಯ್ಕರವರಿಗೆ ಕಾರಣಕೇಳಿ ನೋಟೀಸನ್ನು ಜಾರಿಮಾಡಲಾಗಿದೆ ಇನ್ನು ಮುಂದಾದರು ಶಾಸಕರು ಇಂತಹ ಉದ್ಧಟತನದ ಹೇಳಿಕೆ ನೀಡುವುದನ್ನು ಬಿಟ್ಟು, ಏನಾದರೂ ಸಮಸ್ಯೆಗಳಿದ್ದರೆ ಪಕ್ಷದ ಹಿರಿಯರೊಂದಿಗೆ ಚರ್ಚಿಸಿ ಬಗೆಹರಿಸಿಕೊಳ್ಳಬೇಕೆಂದು ಸಲಹೆ ನೀಡಿದರು.

     ಸಂದರ್ಭದಲ್ಲಿ ಬಂಜಾರ ಸಮಾಜದ ಮುಖಂಡರಾದ ವಿ.ಡಿ.ನಾಯ್ಕ, ಬಾಲಾಜಿನಾಯ್ಕ, ಡಾಕ್ಯನಾಯ್ಕ, ಹೀರಾಲಾಲ್, ಜಯನಾಯ್ಕ, ಸುರೇಶನಾಯ್ಕ, ಟೀಕ್ಯಾನಾಯ್ಕ ತಾ.ಪಂ. ಸ್ಥಾಯಿಸಮಿತಿ ಸದಸ್ಯ ನಾರಾಯಣಸ್ವಾಮಿ ಹಾಗೂ ಎಪಿಎಂಸಿ ಮಾಜಿ ಅಧ್ಯಕ್ಷ ಸೊಪ್ಪಿನ ಪ್ರಕಾಶ್ ಸೇರಿದಂತೆ ಇತರರು ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link