ಹೊಸಪೇಟೆ:
ಕಮಲಾಪುರ ದಿಂದ ಸೀತಾರಾಂ ತಾಂಡ ರಸ್ತೆಯಲ್ಲಿ ಪುರಾತನ ಸ್ಮಾರಕ ಕೋಟೆನಾಶ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಿಂದು ಜಾಗರಣ ವೇದಿಕೆ ಕಮಲಾಪುರ ಘಟಕದಿಂದ ತುಂಗಭದ್ರಾ ಮಂಡಳಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ಕಮಲಾಪುರ ಪಟ್ಟಣದಿಂದ ಸೀತಾರಾಂ ತಾಂಡ ರಸ್ತೆಯ ಪಕ್ಕದಲ್ಲಿರುವ ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಹಾಗೂ ತುಂಗಭದ್ರಾ ಕಾಲುವೆ ನಿಗಮದ ಸರ್ಕಾರಿ ಒಡೆತನದ ಭೂಮಿ ಕಾನೂನು ಬಾಹಿರವಾಗಿ ಅತಿಕ್ರಮ ಪ್ರವೇಶಮಾಡಿ ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾದ ಪುರಾತನ ಕೋಟೆನಾಶ ಮಾಡಲಾಗಿದೆ.
ಪುರಾತನ ಕೋಟೆಸ್ಮಾರಕವನ್ನು ಕಳೆದ ನಾಲ್ಕುದಿನಗಳಿಂದ ಜೆಸಿಬಿ ಯಂತ್ರ ಬಳಸಿ ಕೆಲ ಕಿಡಿಗೇಡಿಗಳು ಸಂಪೂರ್ಣ ನಾಶಮಾಡಿ ದ್ದಾರೆ . ಯಾವುದೇ ಭಯವಿಲ್ಲದೆ ಹಾಡುಹಗಲೆ ಈ ಕಾರ್ಯ ಸುವ್ಯವಸ್ಥಿತವಾಗಿ ನಡೆಸಿದ್ದರು ಈ ಸ್ಮಾರಕಗಳನ್ನು ಸಂರಕ್ಷಿಸ ಬೇಕಾದ ಇಲಾಖಾಧಿಕಾರಿಗಳು ಜಾಣ ಕುರುಡರಾಗಿದ್ದಾರೆ ಎಂದು ದೂರಿದ್ದಾರೆ.
ಸ್ಮಾರಕಗಳಿಗೆ ರಕ್ಷಣೆ ನೀಡಬೇಕಾದ ಇಲಾಖೆಗಳು ಇದ್ದೂ ಇಲ್ಲದಂತಾಗಿದೆ. ನಾಶವಾದ ಕೋಟೆಗಳು ಪುನರ್ ನಿರ್ಮಾಣವಾಗಬೇಕು. ಸ್ಮಾರಕನಾಶ ಮಾಡಿದವರ ವಿರುದ್ದ ಕಠಿಣಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ. ವೇದಿಕೆ ಮುಖಂಡರಾದ ಮೌನೇಶ್ ಬಡಿಗೇರ್, ನವೀನ್ ಕುಮಾರ್, ಗಣೇಶ್ ನೀರ್ಲಿಗಿ, ಸಿದ್ದೇಶ್ ಪೂಜಾರ್, ಓಬಯ್ಯ ಜೋಗದ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
![](https://prajapragathi.com/wp-content/uploads/2019/07/T.B.-Dam.gif)