ಬಳ್ಳಾರಿ
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರಿಗೆ ಕೆಲಸ ನೀಡುತ್ತಿಲ್ಲ, ಕೂಲಿಕಾರರು ಕೆಲಸವನ್ನು ಅರಸಿ ವಲಸೆ ಹೋಗುತ್ತಿದ್ದಾರೆ ಎನ್ನುವ ಹಾಗೂ ಲೋಕ ಸಭಾ ಉಪ ಚುನಾವಣೆಯ ಕಾರಣದಿಂದ ಕೆಲಸ ನೀಡುತ್ತಿಲ್ಲ ಎನ್ನುವ ವರದಿಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು, ಗ್ರಾಮೀಣ ಭಾಗದ ಕೂಲಿಕಾರರಿಗೆ ಯಾವುದೇ ಗ್ರಾಮ ಪಂಚಾಯತಿಯಲ್ಲಿ ಕೂಲಿ ಕೊಡಲು ನಿರಾಕರಿಸಿದರೆ ಅಥಾವ ಸಮರ್ಥನೀಯವಲ್ಲದ ಕಾರಣಗಳಿಂದ ಕೂಲಿಕಾರರನ್ನು ಸತಾಯಿಸಿದರೆ ಮತ್ತು ಗುಳೆ ಹೋಗಲು ಕಾರಣರಾದ ಪಿಡಿಒಗಳ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಬಳ್ಳಾರಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮತ್ತು 200 ಗ್ರಾಮ ಪಂಚಾಯತಿಗಳಲ್ಲಿ ಎಂ.ಜಿ.ಎನ್.ಆರ್.ಇ.ಜಿ. ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದ್ದು. ಲೋಕಸಭಾ ಉಪಚುನಾವಣೆಯ ನೀತಿ ಸಂಹಿತೆಯು ಎಂ.ಜಿ.ಎನ್.ಆರ್.ಇ.ಜಿ. ಯೋಜನಯ ಅನುಷ್ಠಾನಕ್ಕೆ ಅಡ್ಡಿಬರುವುದಿಲ್ಲ ಉದ್ಯೋಗ ಚೀಟಿ ಹೊಂದಿರುವ ಎಲ್ಲಾ ಅರ್ಹ ಫಲಾನುಭವಿಗಳು ಕೆಲಸಕ್ಕೆ ಬೇಡಿಕೆ ಸಲ್ಲಿಸಿ ಕೆಲಸ ಮಾಡಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ನಿಯತವಾಗಿ ಪ್ರತಿವಾರ ವೀಡಿಯೋ ಸಂವಾದದ ಮೂಲಕ ತಾಲೂಕು ಪಂಚಾಯತಿಗಳ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು, ಮತ್ತು ಪಿ.ಡಿ.ಓಗಳಿಗೆ ಕಟ್ಟು ನಿಟ್ಟಿನ ಸೂಚನೆಗಳನ್ನು ನೀಡಲಾಗಿದ್ದು ಯಾವುದೇ ಕಾರಣಕ್ಕೆ ಕೂಲಿಕಾರರು ಕೆಲಸವನ್ನು ಅರಸಿ ವಲಸೆ ಹೋಗದಂತೆ ತಡೆಯಲು ಸೂಚನೆ ನೀಡಲಾಗಿದೆ. ಒಂದು ವೇಳೆ ಇದಕ್ಕೆ ವಿರುದ್ಧವಾಗಿ ಯಾವುದಾದರೂ ಪಿ.ಡಿ.ಓಗಳು. ಕೂಲಿಕಾರರು ಗುಳೆ ಹೋಗಲು ಕಾರಣರಾದರೆ ಅಂತಹ ಪಿ.ಡಿ.ಓ. ವಿರುದ್ಧ ನಿರ್ಧಾಕ್ಷಿಣ್ಯವಾಗಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ 30 ಜನ ಪಿ.ಡಿ.ಓ.ಗಳಿಗೆ ನಿಯಮ 12ರಡಿ ನೋಟೀಸ್ ನೀಡಿದ್ದು ಶಿಸ್ತು ಕ್ರಮ ಜಾರಿಗೊಳಿಸಲಾಗುತ್ತಿದೆ ಎಂದು ವಿವರಿಸಿರುವ ಜಿಪಂ ಸಿಇಒ ಅವರು, ಜಿಲ್ಲೆಯ 200 ಗ್ರಾಮ ಪಂಚಾಯತಿಗಳಲ್ಲಿ 2018-19ನೇ ಸಾಲಿಗಾಗಿ ಒಟ್ಟು 44.71999 ಲಕ್ಷಗಳ ಮಾನವ ದಿನಗಳ ಗುರಿ ಇದ್ದು 2018ರ ಅ.31ರಂದು 3112550 ಮಾನವ ದಿನಗಳನ್ನು ನಿಗದಿತ ಗುರಿಗೆ ಶೇ70ರಷ್ಟು ಪ್ರಗತಿ ಸಾಧಿಸಲಾಗಿದೆ. ಅಲ್ಲದೆ ಜಿಲ್ಲೆಯ 07 ತಾಲೂಕುಗಳಲ್ಲಿ ಪ್ರತಿ ದಿನ ಕನಿಷ್ಟ 20 ಸಾವಿರ ಜನರಿಗೆ ಕೆಲಸ ನೀಡುತ್ತಿದ್ದು, ಈ ದಿನ 23453 ಜನ ಕೂಲಿಕಾರರಿಗೆ ಕೆಲಸ ನೀಡಲಾಗಿದೆ. ಮಾನವ ದಿನಗಳ ಬಳ್ಳಾರಿ ಜಿಲ್ಲೆಯು ರಾಜ್ಯದಲ್ಲಿಯೇ 02ನೇ ಸ್ಥಾನದಲ್ಲಿ ಇದೆ ಹಾಗೂ ನಿಗದಿತ ಅವದಿಯಲ್ಲಿ ಕೂಲಿಕರಾರರಿಗೆ ಕೂಲಿ ಹಣ ಪಾವತಿಸುವಲ್ಲಿ ಶೇ99.71ರಷ್ಟು ಸಾಧನೆ ಮಾಡಿ ರಾಜ್ಯದಲ್ಲಿ 02 ಸ್ಥಾನದಲ್ಲಿ ಇರುತ್ತದೆ ಎಂದು ಅವರು ಹೇಳಿದ್ದಾರೆ.
ಗ್ರಾಮೀಣ ಭಾಗದ ಕೂಲಿಕಾರರಿಗೆ ಯಾವುದೇ ಗ್ರಾಮ ಪಂಚಾಯತಿಯಲ್ಲಿ ಕೂಲಿ ಕೊಡಲು ನಿರಾಕರಿಸಿದರೆ ಅಥವಾ ಸಮರ್ಥನೀಯವಲ್ಲದ ಕಾರಣಗಳಿಂದ ಕೂಲಿಕಾರರನ್ನು ಸತಾಯಿಸಿದರೆ ಸಂಬಂಧಪಟ್ಟವರು ಜಿಲ್ಲಾ ಪಂಚಾಯತಿಯ ಉಚಿತ ಸಹಾಯವಾಣಿ ಸಂ: 08392-268955 ಇದಕ್ಕೆ ಸಂಪರ್ಕಿಸಿ ದೂರು ದಾಖಲಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
