ಸಿಂಗಾಪುರ :
ಈ ಹಿಂದೆ ನೀರವ್ ಮೋದಿಯವರ ಸ್ವಿಸ್ ಬ್ಯಾಂಕಿನ ನಾಲ್ಕು ಖಾತೆಗಳು ಜಪ್ತಿಯಾಗಿತ್ತು. ಈಗ ಮೋದಿ ಅವರ ಸೋದರಿಗೆ ಸೇರಿದ ಸಿಂಗಪುರದ ಬ್ಯಾಂಕ್ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.
ಹೌದು, ನೀರವ್ ಮೋದಿ ಅವರ ಸೋದರಿ ಮತ್ತು ಬಾವಮೈದುನ ಅವರ ₹ 44.41 ಕೋಟಿ ಠೇವಣಿ ಇರುವ ಬ್ಯಾಂಕ್ ಖಾತೆ ಸ್ಥಗಿತಗೊಳಿಸಲು ಸಿಂಗಪುರ ಹೈಕೋರ್ಟ್ ಆದೇಶಿಸಿದ್ದು, ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ (ಪಿಎನ್ಬಿ) ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದ ತನಿಖೆಯ ಭಾಗವಾಗಿ ಈ ಆದೇಶ ಹೊರಬಿದ್ದಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ) ಮಂಗಳವಾರ ತಿಳಿಸಿದೆ.
ಖಾತೆಯು ಬ್ರಿಟಿಷ್ ವರ್ಜಿನ್ ಐಲ್ಯಾಂಡ್ ಮೂಲದ ಕಂಪನಿ ಪೆವಿಲಿಯನ್ ಪಾಯಿಂಟ್ ಕಾರ್ಪೊರೇಷನ್ ಹೆಸರಿನಲ್ಲಿದೆ. ನೀರವ್ ಅವರ ಸಹೋದರಿ ಪೂರ್ವಿ ಮೋದಿ ಮತ್ತು ಮಯಾಂಕ್ ಮೆಹ್ತಾ ಇದರ ಮಾಲೀಕರು ಎಂದು ಹೇಳಿದೆ. ವಿದೇಶಿ ವಿನಿಯಮ ಕಾಯ್ದೆ ಉಲ್ಲಂಘಿಸಿರುವ ಪೂರ್ವಿ ಮೆಹ್ತಾ ಅವರು ಕೂಡಾ ಈ ಮನಿ ಲಾಂಡ್ರಿಂಗ್ ಪ್ರಕರಣದಲ್ಲಿ ಮಹತ್ವದ ಪಾತ್ರ ಹೊಂದಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತನ್ನ ದೋಷಾರೋಪಣ ಪಟ್ಟಿಯಲ್ಲಿ ಹೇಳಿದೆ.
ಪೂರ್ವಿ ಮತ್ತು ಮಯಂಕ್ ಇಬ್ಬರೂ ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಂಡನ್ನಲ್ಲಿ ಬಂಧಿತರಾಗಿದ್ದು, ವಿಚಾರಣೆಗಾಗಿ ಇವರನ್ನು ತಮ್ಮ ವಶಕ್ಕೆ ಪಡೆಯಲು ಭಾರತ ಯತ್ನಿಸುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
![](https://prajapragathi.com/wp-content/uploads/2019/04/Nirav-Modi.gif)