ಮಂಗಳೂರು : ಸಿಟಿ ಟೂರ್ ಬಸ್ ಮತ್ತೆ ಆರಂಭವಾಗುವ ನಿರೀಕ್ಷೆ

ಮಹಾನಗರ:

   ಕಾರಣಾಂತರಗಳಿಂದ ಸ್ತಗಿತವಾಗಿದ್ದ ಮಂಗಳೂರಿನಲ್ಲಿ ಪ್ರವಾಸೋದ್ಯಮ ಇಲಾಖೆ  ನಡೆಸುತ್ತಿದ್ದ ‘ಸಿಟಿ ಟೂರ್‌ ಬಸ್‌’ ಸೇವೆಯು  ಮರು ಆರಂಭಗೊಳ್ಳವ ಲಕ್ಷಣ ಕಾಣಿತ್ತಿವೆ.

   ಸ್ಮಾರ್ಟ್‌ ಸಿಟಿಯಾಗಿ ಮಂಗಳೂರು ನಗರ ಬೆಳೆಯುತ್ತಿದೆ ಮತ್ತು ಕರಾವಳಿಗೆ ಆಗಮಿಸುವ ಪ್ರವಾಸಿಗರು ಕೂಡ ಹೆಚ್ಚುತ್ತಿದ್ದಾರೆ. ಅದರಲ್ಲಿ ಯೂ ವಿದೇಶಿ ಪ್ರವಾಸಿಗರ ಫೆವರೆಟ್ ತಾಣವಾಗಿ ಮಂಗಳೂರು ಮಾರ್ಪಾಡಾಗುತ್ತಿದೆ. ಈ ಬದಲಾವಣೆಗೆ ಹೊಂದಿಕೊಳ್ಳಲು ಬೀಚ್ ಉತ್ಸವ, ನದಿ ಉತ್ಸವ, ಸರ್ಫಿಂಗ್‌, ಅಂತಾರಾಷ್ಟ್ರೀಯ ಗಾಳಿಪಟ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ.

     ಮಂಗಳೂರಿಗೆ ಆಗಮಿಸುವ ಪ್ರವಾಸಿಗರು ಸ್ವಂತ ವಾಹನಗಳಿಲ್ಲದಿದ್ದರೆ, ಸುತ್ತಮುತ್ತಲಿನ ಪ್ರೇಕ್ಷಣೀಯ ಜಾಗಗಳನ್ನು ವೀಕ್ಷಿಸ ಬೇಕಾದರೆ ಹೆಚ್ಚಿನ ಹಣ ನೀಡಿ ಬಾಡಿಗೆ ವಾಹನಗಳಲ್ಲಿ ಸಂಚರಿಸಬೇಕಾದ ಪರಿಸ್ಥಿತಿ ಇದೆ. ಇದೇ ಕಾರಣಕ್ಕೆ ಈಗ ಸಿಟಿ ಟೂರ್‌ ಬಸ್‌ ಪುನಃ ಆರಂಭಿಸುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯ ಜಿಲ್ಲಾ ಕಚೇರಿಯಿಂದ ರಾಜ್ಯ ಕಚೇರಿಗೆ ಮನವಿ ಮಾಡಲು ನಿರ್ಧರಿಸಿದೆ.ಇದರ ಜತೆಗೆ ಈ ಪ್ರದೇಶದ ಜನಪ್ರತಿನಿಧಿಗಳು ಕೂಡ ರಾಜ್ಯ ಸರಕಾರಕ್ಕೆ ಒತ್ತಡ ಹಾಕಿದರೆ ಕೆಲವೇ ದಿನಗಳಲ್ಲಿ ಮಂಗಳೂರು ನಗರದ ಪ್ರವಾಸಿ ತಾಣಗಳಿಗೆ ಟೂರಿಂಗ್‌ ಬಸ್‌ ಓಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

 

Recent Articles

spot_img

Related Stories

Share via
Copy link