ಹಗರಿಬೊಮ್ಮನಹಳ್ಳಿ:
ಯಾವುದೇ ಕ್ರೀಡೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯವಂತರಾಗಿರಲು ಸಾಧ್ಯವೆಂದು ಸಮಾಜ ಸೇವಕಿ ಗೀತಾಬಾಯಿ ಭೀಮನಾಯ್ಕ ಅಭಿಪ್ರಾಯ ಪಟ್ಟರು.ತಾಲ್ಲೂಕಿನ ಆಡವಿಆನಂದದೇನಹಳ್ಳಿ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡ ದಿ||ಎಂ.ಪಿ.ರವಿಂದ್ರ ಇವರ ಸ್ಮರಣಾರ್ಥವಾಗಿ ಎಸ್.ಭೀಮನಾಯ್ಕ ಅಭಿಮಾನಿ ಬಳಗ ಹಾಗೂ ವಿನಾಯಕ ಕಿಕ್ರೇಟ್‍ರ್ಸ್ ಆಯೋಜಿಸಿದ ತಾಲ್ಲೂಕು ಮಟ್ಟದ ಸ್ಟಂಪರ್ ಬಾಲ್ ಟೊರ್ನಿಮೆಂಟ್‍ಗೆ ಚಾಲನೆ ನೀಡಿ ಅವರು ಮಾತನಾಡಿದರು.
ಇತ್ತೀಚಿಗೆ ಪ್ರತಿಯೊಬ್ಬರು ಮೊಬೈಲ್ ಜೊತೆಗೆ ಆಟವಾಡುತ್ತಾ, ಜಗತ್ ನಮ್ಮ ಕೈಯಲ್ಲಿದೆ ಎಂದು ಸಂತೋಷ ಪಡುವಾಗ ನಮ್ಮ ಆರೋಗ್ಯದ ಕಡೆ ಗಮನಕೊಡದೆ ಮೊಬೈಲ್‍ನ ದಾಸರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಇದರಿಂದ ಹೊರಬಂದು ಗ್ರಾಮೀಣ ಪ್ರದೇಶಗಳಲ್ಲಿನ ಕ್ರೀಡೆಗಳಲ್ಲಿ ಭಾಗವಹಿಸಿ, ಇದಕ್ಕಾಗಿ ಉತ್ತೇಜನ ನೀಡುವವರು ಸಾಕಷ್ಟು ಜನರಿದ್ದಾರೆ. ನಮ್ಮ ದೇಶದ ಕ್ರೀಡೆಗಳು ಇಂದಿಗೂ ಜಿವಂತವಾಗಿವೆ ಎಂದರೆ ಅದು ನಮ್ಮ ಗ್ರಾಮೀಣ ಭಾಗದಲ್ಲಿ ಮಾತ್ರ. ಈ ಟೊರ್ನಿಮೆಂಟ್‍ನಲ್ಲಿ 40 ತಂಡಗಳು ಭಾಗವಹಿಸುತ್ತಿರುವುದು ಸಂತೋಷದ ವಿಷಯ. ಆದರೆ, ಪ್ರತಿಯೊಂದು ತಂಡಗಳು ಸೋಲು ಗೆಲವುಗಳನ್ನು ಸಮನಾಂತರವಾಗಿ ಸ್ವೀಕರಿಸಬೇಕು ಎಂದರು.
ಈ ವೇಳೆ ತಾಲ್ಲೂಕು ಮಹಿಳಾ ಘಟಕ ಕಾಂಗ್ರೇಸ್ ಅಧ್ಯಕ್ಷೆ ಯಶೋಧ ಮಂಜುನಾಥ, ನಾಗವೇಣಿ ನಾಗಭೂಷಣ, ಯುತ್ ಕಾಂಗ್ರೇಸ್ ಪ್ರಿಯದರ್ಶಿನಿ ಆಧ್ಯಕ್ಷೆ ನಾಗವೇಣಿ ಉಮೇಶ್ ಬಳಿಗಾರ, ಸುಕನ್ಯಮ್ಮ, ಹತ್ತಿ ಅಡಿವೆಪ್ಪ, ಮಾಯಪ್ಪ, ಪ್ರಭಾಕರ, ಗಜೇಂದ್ರ, ಹಾಗೂ ತಾಲ್ಲೂಕು ಮಟ್ಟದ ಸ್ಟಂಪರ್ ಬಾಲ್ ಟೊರ್ನಿಮೆಂಟ್ ಆಯೋಜಿಕರಾದ ಶ್ರೀವಿನಾಯಕ ಕಿಕ್ರೇಟ್‍ರ್ಸ್ ಬಳಗ ಸದಸ್ಯರು ಹಾಗೂ ಅಧ್ಯಕ್ಷ ಮಂಜುನಾಥ್ ಕಲ್ಲಮ್ಮನವರ ಇದ್ದರು.