ಬೆಂಗಳೂರು
ಐಎಂಎ ಸಮೂಹ ಸಂಸ್ಥೆಯ ಚಿನ್ನ ಹಾಗೂ ಬೆಳ್ಳಿಯ ಸಂಸ್ಕರಣಾ ಕೇಂದ್ರದ ಮೇಲೆ ದಾಳಿ ನಡೆಸಿ 18 ಲಕ್ಷ 61 ಸಾವಿರ ನಗದು ಸೇರಿ, 90 ಲಕ್ಷ ರೂ. ಮೌಲ್ಯದ ಚಿನ್ನದ ಬಿಸ್ಕೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಬಹುಕೋಟಿ ವಂಚನೆ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಅಧಿಕಾರಿಗಳು ಶಿವಾಜಿನಗರದ ಸೆಫ್ಟಿಂಗ್ ರಸ್ತೆಯಲ್ಲಿರುವ ಐಎಂಎ ದತ್ತ ಚಿನ್ನ ಹಾಗೂ ಬೆಳ್ಳಿ ಸಂಸ್ಕರಣಾ ಘಟಕದ ಮೇಲೆ ದಾಳಿ ನಡೆಸಿ 18 ಲಕ್ಷ 61 ಸಾವಿರ ರೂ. ನಗದು, 2,325 ಗ್ರಾಂ. ತೂಕದ ಚಿನ್ನದ ಬಿಸ್ಕೆಟ್ಗಳು ಸೇರಿ 90 ಲಕ್ಷ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಐಟಿಯ ತನಿಖಾಧಿಕಾರಿ ಗಿರೀಶ್ ಅವರು ತಿಳಿಸಿದ್ದಾರೆ.
ಐಎಂಎ ಸಂಸ್ಥೆಯ ಚಿನ್ನಾಭರಣ ಮಳಿಗೆಗಳ ಮೇಲೆ ದಾಳಿ ನಡೆಸಿದಾಗ ಸಂಸ್ಕರಣಾ ಘಟಕದ ಮಾಹಿತಿ ದೊರೆತಿದ್ದು, ಅದನ್ನು ಆಧರಿಸಿ ದಾಳಿ ನಡೆಸಿ, ನಗದು, ಚಿನ್ನದ ಬಿಸ್ಕೆಟ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಐಎಂಎ ಜ್ಯುವೆಲೆರ್ಸ್ಗಳಿಗೆ ಸಂಸ್ಕರಣಾ ಘಟಕಗಳಿಂದ ಚಿನ್ನ, ಬೆಳ್ಳಿಯನ್ನು ಪೂರೈಕೆ ಮಾಡಲಾಗುತ್ತಿತ್ತು ಎಂದು ಹೇಳಿದ್ದಾರೆ.
ಈ ನಡುವೆ ತಲೆಮರೆಸಿಕೊಂಡಿರುವ ಐಎಂಎ ಮಾಲೀಕ ಮನ್ಸೂರ್ ಖಾನ್ ಶೋಧ ಕಾರ್ಯಾಚರಣೆ ಮುಂದುವರೆಸಲಾಗಿದ್ದು, ಕೇಂದ್ರದ ತನಿಖಾ ಏಜೆನ್ಸಿಗಳ ಜೊತೆ ಸತತ ಸಂಪರ್ಕ ಸಾಧಿಸಲಾಗಿದೆ. ಆದಷ್ಟು ಶೀಘ್ರ ಮನ್ಸೂರ್ನನ್ನು ಬಂಧಿಸಿ ಕರೆತರಲಾಗುವುದು ಎಂದು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








