ಸೇನೆಯಿಂದ ಆಪರೇಷನ್ ವಿಜಯ್ 20 ನೇ ವಾರ್ಷಿಕೋತ್ಸವ ಆಚರಣೆ

ಶ್ರೀನಗರ
       ಕಾರ್ಗಿಲ್ ಯುದ್ಧವನ್ನು ಗೆಲ್ಲಲು ಭಾರತೀಯ ಸೇನೆಯ ಧೈರ್ಯಶಾಲಿ ಸೈನಿಕರು ಎತ್ತರದ ಅಪಾಯಕಾರಿ ಪ್ರದೇಶದಲ್ಲಿ ಪ್ರತಿಕೂಲ ಹವಾಮಾನದಲ್ಲಿ ಶತೃಗಳ ಆಕ್ರಮಿಸಿದ್ದ ಎತ್ತರಗಳಲ್ಲಿ ನಡೆಸಿದ ಯಶಸ್ವಿ ‘ಆಪರೇಷನ್‌ ವಿಜಯ್‌’ ಕಾರ್ಯಾಚರಣೆಯ 20 ನೇ ವಾರ್ಷಿಕೋತ್ಸವವನ್ನು ಸೇನೆ ಇಂದು ಆಚರಿಸಿತು.

      ಈ ಮಹತ್ವದ ಸಂದರ್ಭದಲ್ಲಿ, ಭಾರತೀಯ ಸೇನೆ ತನ್ನ ಧೈರ್ಯಶಾಲಿ ಹುತಾತ್ಮರ ನೆನಪಿಗಾಗಿ ಅನೇಕ ವಿಶಿಷ್ಟ ಕಾರ್ಯಕ್ರಮಗಳನ್ನು ಆಯೋಜಿಸಿತ್ತು ಎಂದು ಅಧಿಕೃತ ವಕ್ತಾರರು ಶುಕ್ರವಾರ ತಿಳಿಸಿದ್ದಾರೆ. ಕಾರ್ಗಿಲ್ ವಿಜಯ್ ದಿನ ಆಚರಣೆಯ ಅಂಗವಾಗಿ, ನ್ಯೋಮಾದಿಂದ ನಿಮು ವರೆಗೆ (210 ಕಿ.ಮೀ) ಪರಶು ಬ್ರಿಗೇಡ್ ರಾಫ್ಟಿಂಗ್(ಜಲ ಸಾಹಸ) ಆಯೋಜಿಸಿತ್ತು ಎಂದು ಅವರು ಹೇಳಿದ್ದಾರೆ.

       ಕ್ಯಾಪ್ಟನ್ ಹೃಷಿಕೇಶ್ ಘೋಗರೆ ನೇತೃತ್ವದ 27 ಸದಸ್ಯರ ತಂಡಕ್ಕೆ ಮೇಜರ್ ಜನರಲ್ ಅರವಿಂದ್ ಕಪೂರ್ ಹಸಿರು ನಿಶಾನೆ ತೋರಿದರು. ತಂಡವು 13,700 ಅಡಿಗಳಿಂದ 10,300 ಅಡಿಗಳಷ್ಟು ಎತ್ತರದಲ್ಲಿ ಸಂಚರಿಸಲಿದೆ. ಪ್ರತಿಕೂಲ ಹವಾಮಾನ ಮತ್ತು ಸಿಂಧೂ ನದಿಯ ಶೂನ್ಯ ತಾಪಮಾನದ ನಡುವೆ ಯೋಧರು ಸಾಹಸ ಮಾಡಲಿದೆ.

      210 ಕಿ.ಮೀ ದೂರದ ಸಾಹಸಯಾತ್ರೆಯನ್ನು ತಂಡ ಕೈಗೊಂಡಿದ್ದು, ರಾಷ್ಟ್ರೀಯ ದಾಖಲೆ ನಿರ್ಮಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದ್ದಾರೆ. ಸಾಹಸ ಯಾತ್ರೆಯ ಕೊನೆಯಲ್ಲಿ ದಾಖಲೆಯನ್ನು ಮೌಲ್ಯೀಕರಿಸಲು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಅಧಿಕಾರಿಗಳು ಲೇಹ್‌ನಲ್ಲಿದ್ದಾರೆ.

      1999 ರಲ್ಲಿ ನೆರೆಯ ರಾಷ್ಟ್ರದೊಂದಿಗಿನ ಒಪ್ಪಂದದ ಪ್ರಕಾರ, ಚಳಿಗಾಲದಲ್ಲಿ ಭಾರತೀಯ ಪಡೆಗಳು ಹಿಂದೆ ಸರಿದಾಗ, ಡ್ರಾಸ್ ಮತ್ತು ಕಾರ್ಗಿಲ್‌ನ ಬಹುತೇಕ ಎತ್ತರ ಪ್ರದೇಶಗಳಲ್ಲಿ ಪಾಕಿಸ್ತಾನಿ ಒಳನುಗ್ಗಿ ಆಕ್ರಮಿಸಿಕೊಂಡಿದ್ದರು. ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ, ಒಳಸುಳುಕೋರ ಪಾಕ್‌ ಯೋಧರನ್ನು ಹೊರದಬ್ಬಲು ಅನೇಕ ತಿಂಗಳು ಹಿಡಿದಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link